ಕಾಲೋಚಿತ ರೋಗಗಳಿಗೆ ಪರಿಹಾರ ಕಂಡುಕೊಳ್ಳಬಹುದಾದ ವಿಶೇಷ ಆಯುರ್ವೇದ ಚಿಕಿತ್ಸೆಯನ್ನು ಕರ್ಕಿಟಕ ಚಿಕಿತ್ಸೆ ಎನ್ನುತ್ತಾರೆ. ಮಳೆಗಾಲದಲ್ಲಿ ಮುಖ್ಯವಾಗಿ ಕರ್ಕಾಟಕ ಮಾಸದಲ್ಲಿ ಹಾಗೂ ಮಳೆಯಿಂದ ಆಗುವ ದುಷ್ಪರಿಣಾಮಗಳಿಂದ ದೇಹವನ್ನು ರಕ್ಷಿಸುವುದು ಅಗತ್ಯ. ಶೀತ ಮತ್ತು ತೇವಭರಿತ ಹವಾಮಾನದಿಂದಾಗಿ ಉಂಟಾಗುವ ದುಷ್ಪರಿಣಾಮಗಳಿಂದ ದೇಹವನ್ನು ಸಮತೋಲನದಲ್ಲಿ ಇರಿಸಲು ಆಯುರ್ವೇದ ಚಿಕಿತ್ಸೆಗಳಾದ ವಮನ, ವಿರೇಚನ, ನಸ್ಯ, ನಿರೂಹ ಬಸ್ತಿ, ಅನುವಾಸನ ಬಸ್ತಿ ಹಾಗೂ ಅಭ್ಯಂಗ, ಕಾಯಸೇಕ, ಭಾಷ್ಪಸ್ವೇದ, ಪೊಟ್ಟಲಿ ಸ್ವೇದ, ಉದ್ವರ್ತನ ಮುಂತಾದ ಚಿಕಿತ್ಸೆಗಳು ಪರಿಣಾಮಕಾರಿಯಾಗುತ್ತದೆ.
ಕರ್ಕಿಟಕ ಗಂಜಿ ಎನ್ನುವ ಔಷಧಯುಕ್ತ ಆಹಾರವು ಪೋಷಕಾಂಶಗಳಿಂದ ಭರಿತವಾಗಿದ್ದು ಜೀರ್ಣಕ್ರಿಯೆಯನ್ನು ವ್ಯವಸ್ಥಿತವಾಗಿ ಸಡೆಸುವಲ್ಲಿ ಸಹಕಾರಿಯಾಗುತ್ತದೆ.
ಆರೋಗ್ಯವಂತ ವ್ಯಕ್ತಿಗಳಲ್ಲಿ ರೋಗ ಪ್ರತಿರೋಧ ಶಕ್ತಿಯನ್ನು ಹೆಚ್ಚಿಸುವುದರೊಂದಿಗೆ, ವ್ಯಕ್ತಿಗೆ ಬರಬಹುದಾದ ರೋಗಗಳನ್ನು ತಡೆಗಟ್ಟುವಲ್ಲಿ ಕರ್ಕಿಟಕ ಚಿಕಿತ್ಸೆಯು ಪ್ರಮುಖ ಪಾತ್ರವಹಿಸುತ್ತದೆ. ಮಾತ್ರವಲ್ಲದೆ ವ್ಯಕ್ತಿಯ ಆರೋಗ್ಯಕ್ಕೆ ಸಂಬಂಧಿಸಿದ ಸಮಸ್ಯೆಗಳಾದ ಸಂಧಿನೋವು,ಡಿಸ್ಕ್ ಸಮಸ್ಯೆಗಳು, ಪಕ್ಷವಾತ, ಆಮವಾತ, ಸಂಧಿವಾತ, ನಿದ್ರಾಹೀನತೆ, ಶ್ವಾಸದತೊಂದರೆ, ಕೆಮ್ಮು, ಗ್ಯಾಸ್ಟ್ರಿಕ್ ಗಳಂತಹ ಸಂಪೂರ್ಣ ಪರೀಕ್ಷೆಯನಂತರ ಆಳ್ವಾಸ್ ನಿರಾಮಯ ಆಸ್ಪತ್ರೆಯ ವೈದ್ಯಕೀಯ ತಂಡದಿಂದ ಕರ್ಕಿಟಕ ಚಿಕಿತ್ಸೆಯನ್ನು ಕೊಡಲಾಗುತ್ತದೆ.
ಸಾರ್ವಜನಿಕರು ಇದರ ಸದುಪಯೋಗವನ್ನು ಪಡೆದುಕೊಳ್ಳಬಹುದಾಗಿದೆ. 3 , 7 , 14 ಹಾಗೂ 21 ದಿನಗಳ ಕರ್ಕಿಟಕ ಚಿಕಿತ್ಸಾ ಸೌಲಭ್ಯಗಳನ್ನು ಈ ಶಿಬಿರದಲ್ಲಿ ಒಳರೋಗಿ ಹಾಗೂ ಹೊರರೋಗಿ ವಿಭಾಗಗಳಲ್ಲಿ ಒದಗಿಸಲಾಗುತ್ತದೆ.
ಹೆಚ್ಚಿನ ವಿವರಗಳಿಗಾಗಿ ಆಳ್ವಾಸ್ ನಿರಾಮಯ ಆಸ್ಪತ್ರೆಯನ್ನು ಸಂಪರ್ಕಿಸಿರಿ 9742473545 / 9611686150
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ