ಮೊಬೈಲ್ ಪ್ರಪಂಚದಲ್ಲಿ ಸಂಬಂಧಗಳನ್ನು ಕಳೆದುಕೊಳ್ಳುತ್ತಿರುವ ಮಾನವ

Upayuktha
0

ಜಗತ್ತು ದಿನೇ ದಿನೇ ಹೊಸತನವನ್ನು ಕಾಣುತ್ತ ಒಂದಲ್ಲ ಒಂದು ಕ್ಷೇತ್ರದಲ್ಲಿ ಬದಲಾವಣೆ ಕಾಣುತ್ತಿದೆ. ಆದರೆ ಪ್ರಸ್ತುತ ಕಾಲಘಟ್ಟದಲ್ಲಿ ಜಗತ್ತು ಬದಲಾಗುತ್ತ ಹೋಗುತ್ತಿದ್ದಂತೆಯೇ ಮಾನವನ ಮನಸ್ಥಿತಿಯು ಬದಲಾಗುತ್ತಿರುವುದು ವಿಪರ್ಯಾಸ. ಮೊಬೈಲ್ ಎಂಬ ಒಂದು ಸಾಧನವು ಮಾನವನ ಮನಸ್ಥಿತಿಯನ್ನು ಹಾಳುಗೆಡವಿ, ತನ್ನವರು ಎಂಬ ಭಾವವನ್ನು ಮರೆಸುತ್ತಿದ್ದೆ. ಇಂದು ಇಲ್ಲಿ ಎಲ್ಲವೂ ತಂತ್ರಜ್ಞಾನ ಅವಲಂಬನೆಯಾಗಿ ಮೊಬೈಲ್ ನಿಂದಲೆ ನಡೆಯುತ್ತಿದೆ. ಒಂದು ಪೆಟ್ಟಿಗೆಯಂತಹ ವಸ್ತು ಮಾನವ ಜಗತ್ತನ್ನೇ ಮರುಳು ಮಾಡಿ ಬಿಟ್ಟಿದೆ.


ತಂತ್ರಜ್ಞಾನವು ಮಾನವ ಜಗತ್ತನ್ನೇ  ವಶಪಡಿಸಿಕೊಂಡಿದೆ ಹೊಸತನದ ಆವಿಷ್ಕಾರದಲ್ಲಿ ಕಳೆದುಕೊಳ್ಳುತ್ತಿರುವುದರ ಬಗ್ಗೆ ಅರಿವು ಇರದ ಈ ಮಾಯಾ ಪ್ರಪಂಚದಲ್ಲಿ ಬದುಕುತ್ತಿದ್ದೇವೆ. ಹಿಂದಿರುವ ಕಾರಣ ಹಲವು ಇರಬಹುದು. ಇದು ಮನುಷ್ಯನ ಮೇಲೆ ಮತ್ತು ಆತನ ಜೀವನ ಶೈಲಿಯ ಮೇಲೆ ಪ್ರಭಾವ ಬೀರಿದೆ. ಇತ್ತೀಚಿನ ದಿನಗಳಲ್ಲಿ ಮೊಬೈಲ್‌ನ ಉಪಯೋಗ ಅನಿವಾರ್ಯ. ಆದರೆ ಅದನ್ನು ದುರುಪಯೋಗ ಪಡಿಸಿಕೊಂಡು ಬಾಂಧವ್ಯಗಳಿಗೆ ಬೆಲೆ ಕೊಡದೆ ಮೊಬೈಲ್‌ನ ಕೈಗೊಂಬೆಗಳಾಗಿದ್ದೇವೆ.


ಕಾಲ ಬದಲಾವಣೆಯಾಗುತ್ತ ಹೋದಂತೆ ತಂತ್ರಜ್ಞಾನವು ನಮ್ಮನ್ನು ಆವರಿಸಿದೆ. ಅದು ಕೂಡ ಸಂಬಂಧಗಳನ್ನು ದೂರತಳ್ಳುವಷ್ಟು. ಮಾಯಾ ಪ್ರಪಂಚದೊಳಗೆ ಬದುಕುತ್ತಿವೆವು ಎಂದು ಅನಿಸುವುದು ಕೆಲವೊಮ್ಮೆ. ಏಕೆಂದರೆ ಇಲ್ಲಿ ಈಗಿನ ಪ್ರಸ್ತುತ ದಿನಗಳಲ್ಲಿ ತಂತ್ರಜ್ಞಾನದ ಬಳಕೆ ಮುಂದುವರಿಯುತ್ತಿದ್ದಂತೆ ಮೊಬೈಲ್ ಎಲ್ಲಾ ಸಣ್ಣ ಪುಟ್ಟ ಕೆಲಸ ಕಾರ್ಯಗಳಿಗೂ ಮುಖ್ಯವಾಗಿ ಬೇಕೆ ಬೇಕು. ಪ್ರತಿಯೊಂದು ಕಾರ್ಯಕ್ಕು ಮೊಬೈಲನ್ನು ಅವಲಂಬಿಸಿದ್ದೇವೆ. ಈ ತಂತ್ರಜ್ಞಾನ ಮುಂದುವರಿಯುವುದು ನಿಜಕ್ಕೂ ಒಳ್ಳೆಯದೇ ಆದರೆ ನಾವು ಅದರೊಂದಿಗೆ ಮಿತಿ ಮೀರಿ ಸಮಯ ಕಳೆಯುವುದರಿಂದ ಸಂಬಂಧಗಳನ್ನು ಕೂಡ ಕಳೆದುಕೊಳ್ಳುತ್ತಿದ್ದೇವೆ.


ನಮ್ಮ ಹಿರಿಯರ ಕಾಲದಲ್ಲಿ ಮೊಬೈಲ್ ಹಾಗೂ ತಂತ್ರಜ್ಞಾನ ಮುಂದುವರೆದಿರಲಿಲ್ಲ ಎಲ್ಲವೂ ಎಷ್ಟು ಚೆನ್ನಾಗಿತ್ತು ಬಾಂಧವ್ಯಗಳು ಬಲವಾಗಿ ಬೆಸೆದು ಕೂಡು ಕುಟುಂಬಗಳಿದ್ದವು. ತಂತ್ರಜ್ಞಾನ ಎಲ್ಲಾ ಕಡೆ ವ್ಯಾಪಿಸಿದೆ. ಆದರೆ ನಾವು ಅದರಿಂದ ಯಾವುದನ್ನು ಕಳೆದುಕೊಳ್ಳುತ್ತಾ ಹೋಗುತ್ತಿದ್ದೇವೆ ಎಂಬುದನ್ನು ಅರಿತು ಅದಕ್ಕೆ ಸಮಯಕೊಟ್ಟು ಉಳಿಸಿಕೊಳ್ಳುವುದು ಇತ್ತೀಚಿನ ಮೊಬೈಲ್ ಯುಗದಲ್ಲಿ ಮುಖ್ಯವಾಗುತ್ತದೆ.


ಅತಿಯಾದರೆ ಅಮೃತವು ವಿಷ ಮೊಬೈಲ್ ನಿಂದ ಎಲ್ಲವು ಕೆಟ್ಟದು ಎಂದು ಇಲ್ಲ ನಾವು ಹೇಗೆ ಅದನ್ನು ಉಪಯೋಗಿಸುತ್ತೇವೆಯೋ ಹಾಗೆ ಅದರ ಪರಿಣಾಮವನ್ನು ಕಾಣಬಹುದು. ಮೊಬೈಲ್ ಬಳಕೆ ಇತಿಮಿತಿಯಲ್ಲಿರಲಿ ಸಂಬಂಧಗಳು ಜೊತೆಯಾಗಿರಲಿ.



-ವರ್ಣಿತ ಕೊಪ್ಪಳ.

ಪತ್ರಿಕೋದ್ಯಮ ವಿದ್ಯಾರ್ಥಿನಿ.

ವಿವೇಕಾನಂದ ಮಹಾವಿದ್ಯಾಲಯ ನಗರ ಪುತ್ತೂರು.

Post a Comment

0 Comments
Post a Comment (0)
Best Summer Deals Marvellous May Offers at Mandovi Motors
Best Summer Deals Marvellous May Offers at Mandovi Motors
To Top