ಮಂಗಳೂರಿನಲ್ಲಿ ಮಳೆಗಾಲದ ವಿಶೇಷ ಜಿಎಸ್‌ಬಿ ತಿಂಡಿ ತಿನಿಸುಗಳ‌ ಮೇಳ‌

Upayuktha
0


ಮಂಗಳೂರು: ಗೌಡ ಸಾರಸ್ವತ ಬ್ರಾಹ್ಮಣ ಸಮುದಾಯ ತಿಂಡಿ, ತಿನಿಸುಗಳ ತಯಾರಿಯಲ್ಲಿ ಎತ್ತಿದ ಕೈ. ಅದರಲ್ಲಿಯೂ ಮಳೆಗಾಲದಲ್ಲಿ ಸಿಗುವ ಅಪರೂಪದ ಪ್ರಕೃತಿಜನ್ಯ ವಸ್ತುಗಳನ್ನೇ ಬಳಸಿ‌ ತಯಾರಿಸುವ ಖಾದ್ಯಗಳು ಎಂತವರಲ್ಲಿಯೂ ಬಾಯಲ್ಲಿ ನೀರೂರಿಸುತ್ತವೆ. ಅಂತಹ ತಿಂಡಿ‌ ಪ್ರಿಯರಿಗಾಗಿ ಯೂತ್ ಆಫ್ ಜಿಎಸ್‌ಬಿ ಮಣ್ಣಗುಡ್ಡೆಯ ಗಾಂಧಿ ಪಾರ್ಕ್ ಸನಿಹದ ವರ್ಟೆಕ್ ಲಾಂಜ್‌ನಲ್ಲಿ‌ ಮಳೆಗಾಲದ ಜಿಎಸ್‌ಬಿ ಆಹಾರ ಮೇಳ ಆಯೋಜಿಸಿದೆ.


ಜುಲೈ 15 ರಿಂದ 30 ರ ತನಕ ಪ್ರತಿದಿನ ಮಧ್ಯಾಹ್ನ 3 ಗಂಟೆಯಿಂದ ರಾತ್ರಿ 9 ಗಂಟೆಯ ತನಕ ಈ‌ ಆಹಾರ ಮೇಳ‌ ನಡೆಯಲಿದ್ದು, ಸಾರ್ವಜನಿಕರು ಇದರ ಪ್ರಯೋಜನ ಪಡೆಯಬಹುದಾಗಿದೆ. ಅಲವತ್ತಿ, ತೈಕಿಲಾ ಅಂಬೊಡೆ, ಕೀರ್ಲು, ಪತ್ರಡೋ, ಅಲಂಬೋ ಸಹಿತ ಸುಮಾರು 25 ಬಗೆಯ ತಿಂಡಿ, ತಿನಿಸುಗಳು ಲಭ್ಯವಿದೆ.


ಇದಕ್ಕಾಗಿ ಗ್ರಾಹಕರಿಗೆ ವಿಶೇಷ ಪಾಸ್‌ಗಳನ್ನು ವರ್ಟೆಕ್ ಲಾಂಜ್, ಬಲ್ಮಠದ ಕೇಸರಿ ಹೋಟೇಲ್, ಮಣ್ಣಗುಡ್ಡೆಯ ಮಹಾಮಾಯಾ ಟ್ರೇಡರ್ಸ್, ವಿ.ಟಿ ರಸ್ತೆಯಲ್ಲಿರುವ ಯೂತ್ ಆಫ್ ಜಿಎಸ್‌ಬಿ ಸ್ಟುಡಿಯೋದಲ್ಲಿಯೂ ಪಡೆಯಬಹುದು. ಪ್ರತಿ ಪಾಸ್‌ನಲ್ಲಿ ಇಬ್ಬರಿಗೆ ಪ್ರವೇಶಾವಕಾಶ ಇದ್ದು,‌ ಪಾಸ್‌ಗಾಗಿ ಇನ್ನೂರು ರೂಪಾಯಿ‌ ಪಾವತಿಸಿ ಅಷ್ಟೇ ಮೌಲ್ಯದ ಆಹಾರವನ್ನು ಖರೀದಿಸಬಹುದಾಗಿದೆ. ಆಹಾರ ಸೇವಿಸುತ್ತಾ ಖ್ಯಾತ ಸ್ಟ್ಯಾಂಡ್ ಅಪ್ ಕಾಮಿಡಿಯನ್‌ಗಳ ಪ್ರದರ್ಶನವನ್ನು ಕೂಡ ವೀಕ್ಷಿಸಬಹುದು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top