ಕತ್ತಲೆ ಎಂಬುದು ಮನುಜನಲ್ಲಿ ಆವರಿಸಿ ಕೊಂಡಿರುವಂತಹವು. ಕತ್ತಲೆ ಬರಬಾರದು ಎಂದರು ಬರುತ್ತದೆ. ಇದು ಪ್ರಕೃತಿಯ ಸಹಜಗುಣ. ಅಂದಿನ ಕಾಲದಲ್ಲಿ ಜನರು ಜೀವನವನ್ನು ಕತ್ತಲೆಯಲ್ಲಿ ನಡೆಸುತ್ತಿದ್ದರು. ಕೆಲವು ಮನೆಗಳಲ್ಲಿ ಚಿಮಿಣಿ ದೀಪಗಳು ಇರುತ್ತಿತ್ತು.ಆಗ ವಿದ್ಯುತ್, ಸೋಲಾರ್, ಇತ್ಯಾದಿಗಳು ಯಾವುದು ಇರಲಿಲ್ಲ. ಆ ಕಾಲದಲ್ಲಿ ಮಹಿಳೆಯರನ್ನು ಎಲ್ಲಿಗೂ ಹೋಗಲು ಬಿಡುತ್ತಿರಲಿಲ್ಲ ನಾಲ್ಕು ಗೋಡೆಗಳ ಮಧ್ಯೆ ಕತ್ತಲೆ ಕೋಣೆಯಲ್ಲಿ ಇರಬೇಕಾದ ಪರಿಸ್ಥಿತಿ ಉಂಟಾಗಿತ್ತು. ಅವರ ಜೀವನ ಜೈಲುಶಿಕ್ಷೆಯ ಹಾಗೇ ಎಂದೇ ಬದುಕುತ್ತಿದ್ದರು.
ನಮ್ಮ ಈಗಿನ ಜೀವನವು ಹಾಗೆಯೇ ಇದೆ.. ಏಕೆಂದರೆ? ಕೆಲವರ ಬದುಕಿನಲ್ಲಿ ಊಹಿಸಿಕೊಳ್ಳದ ಕೆಟ್ಟ ಘಟನೆಗಳು ನಡೆದಾಗ ಅವರ ಜೀವನವೇ ಕತ್ತಲೆಯಾಗುತ್ತದೆ. ಯಾಕೆಂದರೆ ಇದನ್ನು ಎದುರಿಸುವಷ್ಟು ಧೈರ್ಯವಂತರು ಅಲ್ಲ, ಅಷ್ಟು ತಿಳುವಳಿಕೆಯನ್ನು ಹೊಂದಿದವರು ಅಲ್ಲ ಆದ್ದರಿಂದ ಆ ವ್ಯಕ್ತಿ ಸಾಯಲು ಇಚ್ಚಿಸುವುದು ಎನ್ನಬಹುದು. ಇಂತಹ ಸಂದರ್ಭದಲ್ಲಿ ನೊಂದುಕೊಳ್ಳದೇ ನಾವು ಮನೆಯಿಂದ ಹೊರಗೆ ಹೋಗಿ ಚಂದ್ರನ ಬೆಳಕು ಮತ್ತು ಚಂದ್ರನ ಹತ್ತಿರ ಮಿನುಗುತ್ತಿರುವ ನಕ್ಷತ್ರಗಳ ಕಂಡು ನಮಗೆ ಸಮಾಧಾನ ಪಡಿಸಿಕೊಳ್ಳುವುದು ಉತ್ತಮ. ಅದು ಬಹಳ ಸುಂದರವಾಗಿರುತ್ತದೆ. ಅದನ್ನು ನೋಡಿ ಮತ್ತೆ ಕತ್ತಲಿನಿಂದ ಬೆಳಕಿನೆಡೆಗೆ ಬಂದಂತಾಗುವುದು ಸಹಜವೇ. ಎಲ್ಲಾ ವ್ಯಕ್ತಿಗಳು ನಿದ್ದೆ ಮಾಡುವುದು ಸಹಜ. ಆ ನಿದ್ದೆಯಲ್ಲೂ ಕತ್ತಲೆಯನ್ನು ಕಾಣುತ್ತೇವೆ. ಮತ್ತು ಆ ಹೊತ್ತಿಗೆ ನಾವು ಸತ್ತಂತ್ತೆಯೇ. ನಾವು ರಾತ್ರಿ ಮಲಗಿ ಬೆಳಗ್ಗೆ ಎದ್ದಾಗ ಅದು ನಮ್ಮ ಪುನರ್ಜನ್ಮ ಎನ್ನಬಹುದು.
ನಮ್ಮ ಈಗಿನ ಜೀವನದಲ್ಲಿ ಬೆಳಕುಗಳು ಇದ್ದರೂ ನಾವು ಅದನ್ನು ಉಪಯೋಗಿಸುತ್ತಿಲ್ಲ. ಈಗ ಯಾವುದಕ್ಕೂ ಭಯಪಡುವ ಹಾಗಿಲ್ಲ ಎಲ್ಲಾ ಸ್ವಾತಂತ್ರ್ಯ ಮಹಿಳೆಯರಿಗಿದೆ. ಕತ್ತಲೆ ಕೋಣೆಯಲ್ಲಿ ಬದುಕಾಬೇಕಾಗಿಲ್ಲ ನಮ್ಮ ಜೀವನವನ್ನು ರೂಪಿಸಿಕೊಳ್ಳಲು ಒಂದು ಅವಕಾಶವಾಗಿದೆ. ಹಿಂದಿನಂತೆ ಇಂದು ವಿದ್ಯುತ್ ಸಮಸ್ಯೆ ಇಲ್ಲ ಶಿಕ್ಷಣಧ ಕೊರತೆ ಇಲ್ಲ, ದುಡಿಯಲು ಅವಕಾಶವಿದೆ ಎಂದಾಗ ನಮ್ಮ ಬಾಳು ಕತ್ತಲು ಎನ್ನುವುದಕ್ಕೆ ಅರ್ಥವೇ ಇಲ್ಲ. ಅಂದಿನ ಹೆಣ್ಣು ಮಕ್ಕಳಿಂದ ನಾವು ಎಷ್ಟೋ ಪುಣ್ಯವಂತರೆನ್ನಲು ಹೆಮ್ಮೆ ಪಡಬೇಕು. ನೊಂದುಕೊಳ್ಳದೆ ದೃಢ ನಿರ್ಧಾರವ ಹಾಕಿಕೊಂಡು ಸಾಗಿದರೆ ಹೆಣ್ಣುಜನ್ಮವೂ ಸಾರ್ಥಕವಾಗುತ್ತದೆ.
- ಪೂರ್ಣಿಮಾ ಕೆ., ಮುಂಡುಗಾರು
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ