ಗೋದ್ರೇಜ್ ಕ್ಯಾಪಿಟಲ್ ನಿಂದ ಎಂಎಸ್‍ಎಂಇ ಸಾಲಸೌಲಭ್ಯ

Upayuktha
0

ಮಂಗಳೂರು: ಗೋದ್ರೇಜ್ ಸಮೂಹದ ಹಣಕಾಸು ಸೇವೆಗಳ ಅಂಗಸಂಸ್ಥೆಯಾದ ಗೋದ್ರೇಜ್ ಕ್ಯಾಪಿಟಲ್, ಮಂಗಳೂರು ಸೇರಿದಂತೆ 31 ಮಾರುಕಟ್ಟೆಗಳಲ್ಲಿ ನಿರ್ದಿಷ್ಟವಾಗಿ ಸೂಕ್ಷ್ಮ, ಸಣ್ಣ ಮತ್ತು ಮಧ್ಯಮ ಗಾತ್ರದ ಉದ್ಯಮಗಳಿಗೆ (ಎಂಎಸ್‍ಎಂಇ) ಭದ್ರತಾ ರಹಿತ ವ್ಯಾಪಾರ ಸಾಲಗಳನ್ನು ಆರಂಭಿಸಿದೆ.


ಈ ವ್ಯವಹಾರ ಸಂಸ್ಥೆಗಳು ಎದುರಿಸುತ್ತಿರುವ ಸಂಬಂಧಿತ ಸವಾಲುಗಳನ್ನು ಗುರುತಿಸಿ, ಗೋದ್ರೇಜ್ ಕ್ಯಾಪಿಟಲ್ ನಗದು ಹರಿವಿನ ನಿರ್ವಹಣೆ ಸೇರಿದಂತೆ ಅವರ ವಿಶಿಷ್ಟ ಅಗತ್ಯತೆಗಳನ್ನು ಪೂರೈಸುವ ನಿಟ್ಟಿನಲ್ಲಿ ಕೈಗೆಟುಕುವ, ವಿನೂತನ ಹಾಗೂ ಹೊಂದಿಕೊಳ್ಳುವ ಮರುಪಾವತಿ ವ್ಯವಸ್ಥೆಯನ್ನು ಒದಗಿಸುವ ಗುರಿ ಹೊಂದಿದೆ ಎಂದು ಗೋದ್ರೇಜ್ ಕ್ಯಾಪಿಟಲ್‍ನ ಮುಖ್ಯ ಕಾರ್ಯನಿರ್ವಹಣಾಧಿಕಾರಿ ಮನೀಶ್ ಶಾ ಹೇಳಿದ್ದಾರೆ.


ಸಾಲವು ಸಂಪೂರ್ಣ ಡಿಜಿಟಲೀಕರಣ ಪ್ರಕ್ರಿಯೆ, ತ್ವರಿತ ಮಂಜೂರಾತಿ ಮತ್ತು ವಿತರಣೆ, 60 ತಿಂಗಳವರೆಗೆ ದೀರ್ಘಾವಧಿಯ ಅವಧಿ ಮತ್ತು ಉದ್ಯಮದಲ್ಲೇ ಮೊದಲ ಬಾರಿಗೆ ಸಕಾಲಿಕ ಮರುಪಾವತಿಗಾಗಿ ಬಹುಮಾನ ನೀಡುವ ಕಾರ್ಯಕ್ರಮ ಸೇರಿದಂತೆ ಹಲವಾರು ಇತರ ಪ್ರಯೋಜನಗಳನ್ನು ಒದಗಿಸುತ್ತದೆ ಎಂದು ಪ್ರಕಟಣೆ ತಿಳಿಸಿದೆ.


ಸ್ಥಿತಿಸ್ಥಾಪಕತ್ವದ ಸಾಲ ಪರಿಹಾರಗಳನ್ನು ಒದಗಿಸುವ ಮೂಲಕ  ಎಂಎಸ್‍ಎಂಇಗಳು ತಮ್ಮ ವ್ಯವಹಾರ ಚಕ್ರಗಳೊಂದಿಗೆ ಹೊಂದಿಕೊಂಡು ತಮ್ಮ ಸಾಲಗಳನ್ನು ಮರುಪಾವತಿಸಲು ಅನುವು ಮಾಡಿಕೊಡುತ್ತದೆ. ಕರ್ನಾಟಕದಲ್ಲಿ ಮಂಗಳೂರು, ಬೆಂಗಳೈರು ಹಾಗೂ ಮೈಸೂರಿನಲ್ಲಿ ಈ ಸಾಲ ಸೌಲಭ್ಯ ಲಭ್ಯವಿದೆ.


  ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top