ಮಂಗಳೂರು: ಸೋನಿ ಇಂಡಿಯಾ ಮಂಗಳೂರಿನಲ್ಲಿರುವ ತನ್ನ ಸೇವಾ ಕೇಂದ್ರವನ್ನು ಮೇಲ್ದರ್ಜೇಗೇರಿಸಿದ್ದು, "ಆಲ್ಫಾ ಕ್ಯಾಮೆರಾ ಬಾಡಿ ರಿಪೇರಿ ಕೇಂದ್ರ" ಹೆಸರಿನ ಈ ಸೆಂಟರ್, ಕ್ಯಾಮೆರಾ ಬಾಡಿ ಮತ್ತು ಲೆನ್ಸ್‍ಗಳಿಗಾಗಿ ಅತ್ಯುತ್ತಮ ದರ್ಜೆಯ ಗ್ರಾಹಕ ಸೇವೆ ಒದಗಿಸಲಿದೆ. ದೇಶಾದ್ಯಂತ ಒಟ್ಟು 22 ನಗರಗಳಲ್ಲಿ ತನ್ನ ಸೇವಾ ಕೇಂದ್ರ ಮೇಲ್ದರ್ಜೆಗೇರಿಸುವ ಮೂಲಕ ತನ್ನ ಹೆಜ್ಜೆಗುರುತು ವಿಸ್ತರಿಸಿದೆ ಎಂದು ಪ್ರಕಟಣೆ ಹೇಳಿದೆ.
ಸೋನಿ ಇಂಡಿಯಾ ಈಗ ಡಿಜಿಟಲ್ ಇಮೇಜಿಂಗ್ ಉತ್ಪನ್ನಗಳಿಗೆ 'ಮಾರಾಟ ನಂತರದ ಬೆಂಬಲ ಒದಗಿಸುವ ವ್ಯಾಪಕ ಸೇವಾ ಜಾಲ' ಹೊಂದಿದೆ. ಜತೆಗೆ ಲೆನ್ಸ್ ರಿಪೇರಿಗಾಗಿ 8 ಸೇವಾ ಕೇಂದ್ರಗಳು, 22 ನಗರಗಳಲ್ಲಿ ಆಲ್ಫಾ ಕ್ಯಾಮೆರಾ ಬಾಡಿ ರಿಪೇರಿಯ 25 ಸೇವಾ ಕೇಂದ್ರಗಳು, ಸಿಸಿಡಿ ಇಮೇಜರ್ ಕ್ಲೀನಿಂಗ್ ಮತ್ತು ಫರ್ಮ್‍ವೇರ್ ಅಪ್‍ಡೇಟ್‍ಗಳಿಗಾಗಿ 40ಕ್ಕೂ ಅಧಿಕ ಸೇವಾ ಕೇಂದ್ರಗಳು ಮೂಲಭೂತ ಸೇವೆಗಳನ್ನು ಒದಗಿಸುತ್ತಿವೆ. ಜತೆಗೆ, 220 ಕ್ಕೂ ಅಧಿಕ ಅಖಿಲ ಭಾರತ ಸಂಗ್ರಹ ಕೇಂದ್ರಗಳು ಸೇವೆ ಒದಗಿಸುತ್ತಿವೆ ಎಂದು ಸೋನಿ ಇಂಡಿಯಾದ ಗ್ರಾಹಕ ಸೇವೆಗಳ ವಿಭಾಗದ ರಾಷ್ಟ್ರೀಯ ಮುಖ್ಯಸ್ಥ ವಿಶಾಲ್ ಮಾಥುರ್ ಹೇಳಿದ್ದಾರೆ.
ಆಲ್ಫಾ ಕ್ಯಾಮೆರಾ ಬಾಡಿ, ಕ್ಯಾಮೆರಾ ಲೆನ್ಸ್, ವೃತ್ತಿಪರ ಕ್ಯಾಮೆರಾಗಳು ಮತ್ತು ಡಿಜಿಟಲ್ ಸ್ಟಿಲ್ ಕ್ಯಾಮೆರಾಗಳು ಮತ್ತು ಕ್ಯಾಮ್‍ಕಾರ್ಡರ್‍ಗಳಂತಹ ಇತರೆ ಡಿಜಿಟಲ್ ಇಮೇಜಿಂಗ್ ಉತ್ಪನ್ನಗಳ ಉತ್ತಮ ಗುಣಮಟ್ಟದ ದುರಸ್ತಿ ಕೈಗೊಳ್ಳಲು ಸೇವಾ ಕೇಂದ್ರಗಳು ಅಗತ್ಯ ಜಿಗ್‍ಗಳು ಮತ್ತು ಸಾಧನ ಸಲಕರಣೆಗಳನ್ನು ಹೊಂದಿವೆ. ಗ್ರಾಹಕರು ತಮ್ಮ ಉತ್ಪನ್ನಗಳಿಂದ ಉತ್ತಮ ಕಾರ್ಯಕ್ಷಮತೆ ಆನಂದಿಸಲು ಸಿಸಿಡಿ ಇಮೇಜರ್ ಕ್ಲೀನಿಂಗ್ ಮತ್ತು ಇತ್ತೀಚಿನ ಫರ್ಮ್‍ವೇರ್ ನವೀಕರಣದಂತಹ ಮೂಲಭೂತ ಬೆಂಬಲದ ತ್ವರಿತ ಸೇವೆಗಳನ್ನು ಸಹ ಪಡೆಯಬಹುದು. ಈ ಸೇವಾ ಕೇಂದ್ರಗಳಲ್ಲಿರುವ ಗ್ರಾಹಕ-ಸ್ನೇಹಿ ಸೇವಾ ಸಿಬ್ಬಂದಿ ಗ್ರಾಹಕರಿಗೆ ತಮ್ಮ ಇನ್-ವಾರಂಟಿ ಉತ್ಪನ್ನಗಳನ್ನು ಸೋನಿ ಆಲ್ಫಾ ಸಮುದಾಯ ಪೋರ್ಟಲ್‍ನಲ್ಲಿ ನೋಂದಾಯಿಸಲು ಸಹಾಯ ಮಾಡುತ್ತದೆ. ಅನ್ವಯವಾಗುವ ಉತ್ಪನ್ನಗಳ ಮೇಲೆ ಹೆಚ್ಚುವರಿ 1 ವರ್ಷದ ಖಾತರಿಯನ್ನು ಉಚಿತವಾಗಿ ಪಡೆದುಕೊಳ್ಳಲು ಅನುವು ಮಾಡಿಕೊಡುತ್ತದೆ ಎಂದು ಪ್ರಕಟಣೆ ವಿವರಿಸಿದೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ