ಮನೆಮನಗಳಲ್ಲಿ ಸಾಹಿತ್ಯ: ಕೇಶವ ಕುಡ್ಲರ ಸಾಹಿತ್ಯ ಕುರಿತು ಸಂವಾದ

Upayuktha
0

ಮಂಗಳೂರು: ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಮನೆ ಮನಗಳಲ್ಲಿ ಸಾಹಿತ್ಯ ಕಾರ್ಯಕ್ರಮದ ಅಂಗವಾಗಿ ಕನ್ನಡದ ಸಾಹಿತಿ ಕೇಶವ ಕುಡ್ಲರ ಸಾಹಿತ್ಯ ಮತ್ತು ಸಂವಾದ ಕಾರ್ಯಕ್ರಮ‌ವು ಮಂಗಳೂರಿನ ಕೋಡಿಕಲ್ಲಿನಲ್ಲಿರುವ ಕೇಶವ ಕುಡ್ಲರ "ನೆಲೆ" ನಿವಾಸದಲ್ಲಿ ನಡೆಯಿತು. ದಕ್ಷಿಣ ಕನ್ನಡ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷರಾದ ಡಾ. ಪಿ. ಶ್ರೀನಾಥ್ ರವರು ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.


ತಮ್ಮ ಬದುಕು, ಸಾಹಿತ್ಯ ಮತ್ತು ಸಾಹಿತ್ಯ ಪ್ರೇರಣೆಗಳ ಬಗ್ಗೆ ಮಾತನಾಡಿದರು. ಖ್ಯಾತ ಸಾಹಿತಿ ಡಾ. ವಸಂತ ಕುಮಾರ ಪೆರ್ಲರು ಸಂವಾದವನ್ನು ನಡೆಸಿಕೊಡುತ್ತಾ, ಕೇಶವ ಕುಡ್ಲರ ಸಾಹಿತ್ಯದ ಒಳಹೊರಗಿನ ಬಗ್ಗೆ ತಿಳಿಸುತ್ತಾ, ಸಾಹಿತ್ಯದ ಅನ್ಯಾನ್ಯ ಕ್ಷೇತ್ರಗಳಲ್ಲಿ ತಮ್ಮನ್ನು ತೊಡಗಿಸಿಕೊಂಡಿರುವರು ಮಾತ್ರವಲ್ಲದೆ ಅವೆಲ್ಲದಕ್ಕೂ ನ್ಯಾಯವನ್ನು ದೊರಕಿಸಿಕೊಟ್ಟ ಮಹತ್ವದ ಲೇಖಕ ಮಾತ್ರವಲ್ಲ ಬಹುಮುಖ ವ್ಯಕ್ತಿತ್ವದ ವ್ಯಕ್ತಿ ಎಂದು ಹೇಳಿದರು.


ಸಾಹಿತಿ ದೇವು ಹನೆಹಳ್ಳಿ, ಸುಭಾಶ್ ರಾವ್ ಬೋಳೂರು, ಡಾ. ಮೀನಾಕ್ಷಿ ರಾಮಚಂದ್ರ, ಡಾ. ಮುರಳಿ ಮೋಹನ ಚೂಂತಾರು, ಮೋಹನ ಪಾಲಂಕರ್, ಅರುಣಾ ನಾಗರಾಜ್, ಕಿರಣ್ ಪ್ರಸಾದ್ ರೈ ಮುಂತಾದವರು ಸಾಹಿತಿಯೊಂದಿಗೆ ಸಂವಾದವನ್ನು ನಡೆಸಿದರು.


ಕೇಶವ ಕುಡ್ಲರು ತಮ್ಮ ಸಾಹಿತ್ಯ ಮತ್ತು ಬದುಕಿನ ಬಗ್ಗೆ ಸಂವಾದಕಾರರು ಕೇಳಿದ ಪ್ರತಿಯೊಂದು ಪ್ರಶ್ನೆಗಳಿಗೂ ಸಮರ್ಪಕವಾದ ಉತ್ತರವನ್ನು ಕೊಟ್ಟು ಸಂವಾದವನ್ನು ಶ್ರೀಮಂತಗೊಳಿಸಿದರು. ಕನ್ನಡ ಸಾಹಿತ್ಯ‌ ಪರಿಷತ್ತಿನ ಮಂಗಳೂರು ತಾಲೂಕಿನ ಅಧ್ಯಕ್ಷರಾದ ಮಂಜುನಾಥ ರೇವಣಕರರು ಸ್ವಾಗತಿಸಿದರು. ಕಿರಣ್ ಪ್ರಸಾದ್ ರೈ ಕಾರ್ಯಕ್ರಮವನ್ನು ನಿರ್ವಹಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top