ಪೋರ್ಚ್‍ಗೀಸ್ ಮಹಾಕಾವ್ಯ ‘ಲೂಸಿಯಾಡ್ಸ್’ ಓದಬೇಕಾದ ಕೃತಿ: ಡಾ.ಬಿ.ಜನಾರ್ದನ ಭಟ್

Upayuktha
0

 


ಕಾರ್ಕಳ: ವಾಸ್ಕೋಡಗಾಮ ಭಾರತಕ್ಕೆ ಜಲಮಾರ್ಗವನ್ನು ಕಂಡು ಹುಡುಕಿದ ಕಥಾನಕವನ್ನು ಪುರಾಣಕಥೆಯಂತೆ ಹೇಳುವ ‘ಲೂಸಿಯಾಡ್ಸ್’ ಎಂಬ ಪೋರ್ಚುಗೀಸ್ ಮಹಾಕಾವ್ಯವು ವಿಶ್ವದ  ಮಹತ್ವದ ಮಹಾಕಾವ್ಯಗಳಲ್ಲಿ ಒಂದಾಗಿದ್ದು ಜಗತ್ತಿನ ಎಲ್ಲಾ ಭಾಷೆಗಳಿಗೂ ಇದು ಅನುವಾದಗೊಂಡಿದೆ. ಕನ್ನಡಕ್ಕೆ ಕೂಡಾ ಅನುವಾದಗೊಂಡಿದ್ದು ಓದಬೇಕಾದ ಕಾವ್ಯ ಎಂಬುದಾಗಿ ಖ್ಯಾತ ಸಾಹಿತಿ ಹಾಗೂ ವಿಮರ್ಶಕರಾದ ಡಾ. ಬಿ.ಜನಾರ್ದನ ಭಟ್ ಅವರು ಅಭಿಪ್ರಾಯಪಟ್ಟರು.


ಅಖಿಲ ಭಾರತೀಯ ಸಾಹಿತ್ಯ ಪರಿಷದ್ ಮತ್ತು ಕನ್ನಡ ಸಂಘ ಕಾಂತಾವರ ಇವರ ಜಂಟಿ ಸಹಭಾಗಿತ್ವದಲ್ಲಿ ಕಾರ್ಕಳದ ಹೋಟೇಲ್ ಪ್ರಕಾಶ್  ಇದರ ‘ಉತ್ಸವ  ಸಭಾಂಗಣ’ದಲ್ಲಿ  ಜುಲೈ 29 ರಂದು ನಡೆದ ತಿಂಗಳ ಅರಿವು – ತಿಳಿವು ಕಾರ್ಯಕ್ರಮದಲ್ಲಿ ಅವರು  ‘ಲೂಸಿಯಾಡ್ಸ್ ಅಥವಾ ಭಾರತದ ಅನ್ವೇಷಣೆ’ ಕುರಿತು ಉಪನ್ಯಾಸ ನೀಡಿದರು.

ಕವಿ ಕಮೋಯಿಶ್ ಪೋರ್ಚುಗೀಸರಲ್ಲಿ ರಾಷ್ಟ್ರೀಯತೆಯನ್ನು ಬೆಳೆಸುವಂತೆ ಈ ಸುಂದರ ಕಾವ್ಯವನ್ನು ದಶಕಗಳ ಕಾಲ ಬರೆದು ಪ್ರಕಟಿಸಿದ. ಇದರಲ್ಲಿ ಪೋರ್ಚುಗೀಸ್ ಇತಿಹಾಸದ ಜತೆಗೆ  ಭಾರತದಲ್ಲಿ ಆಗ ನಡೆದಿದ್ದ ಘಟನೆಗಳನ್ನು ಮತ್ತು ಸಾಮಾಜಿಕ ವಿವರಗಳನ್ನು ಇತಿಹಾಸಕ್ಕೆ ನಿಷ್ಠವಾದ  ನಿರೂಪಣೆಯೊಂದಿಗೆ ಕವಿಯು ಇಲ್ಲಿ ದಾಖಲಿಸಿದ್ದು ಐತಿಹಾಸಿಕವಾಗಿಯೂ ಇದೊಂದು ಮಹತ್ವದ ಕೃತಿಯಾಗಿದೆ ಎಂದರು.


ಅತಿಥಿಗಳನ್ನು ಇದೇ ಸಂದರ್ಭದಲ್ಲಿ ಗೌರವಪೂರ್ವಕವಾಗಿ ಸನ್ಮಾನಿಸಲಾಯಿತು. ಕನ್ಬಡ ಸಂಘದ  ಕಾರ್ಯಾಧ್ಯಕ್ಷರಾದ ಡಾ.ನಾ.ಮೊಗಸಾಲೆ, ಅ.ಭಾ.ಸಾ.ಪ. ಕಾರ್ಕಳ ತಾಲೂಕು ಘಟಕದ ಗೌರವಾಧ್ಯಕ್ಷರಾದ ಎಸ್. ನಿತ್ಯಾನಂದ ಪೈ, ಉಪಾಧ್ಯಕ್ಷರಾದ ಏರ್‍ವೈಸ್ ಮಾರ್ಷಲ್ ರಮೇಶ್ ಕಾರ್ಣಿಕ್  ವೇದಿಕೆಯಲ್ಲಿ ಉಪಸ್ಥಿತರಿದ್ದರು.  ಶ್ರೀಮತಿ ಮನಿಷಾ ಕಾಮತ್ ಪ್ರಾರ್ಥಿಸಿ ವೀಣಾ ರಾಜೇಶ್ ಅತಿಥಿಗಳನ್ನು ಪರಿಚಯಿಸಿದರು. ಶ್ರೀಮತಿ ಮಾಲತಿ. ಜಿ.ಪೈ ಕಾರ್ಯಕ್ರಮ ನಿರೂಪಿಸಿದರು. ಸದಾನಂದ ನಾರಾವಿ ಸ್ವಾಗತಿಸಿ ಸತೀಶ್ ಕುಮಾರ್ ಕೆಮ್ಮಣ್ಣು ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Maruti Suzuki Festival of Colours
Maruti Suzuki Festival of Colours
To Top