ಅಡ್ಯನಡ್ಕ: ಇಲ್ಲಿನ ಜನತಾ ಪ್ರೌಢಶಾಲೆಯಲ್ಲಿ ಜುಲೈ 15ರಂದು ನಡೆದ ಶಾಲಾ ಸಂಸತ್ತಿನ ಚುನಾವಣೆಯಲ್ಲಿ 2023-24ನೇ ಸಾಲಿನ ಶಾಲಾ ನಾಯಕನಾಗಿ 10ನೇ ತರಗತಿಯ ಲಿಖಿತ್ ಹಾಗೂ ಉಪನಾಯಕನಾಗಿ ಅದೇ ತರಗತಿಯ ಸಲಾವುದ್ದೀನ್ ಖಾನ್ ಆಯ್ಕೆಗೊಂಡರು.
ಚುನಾವಣಾ ಪ್ರಕ್ರಿಯೆಯನ್ನು ಆಂಡ್ಯಾಯ್ಡ್ ಫೋನ್‌ಗಳಲ್ಲಿ ನಿಸ್ತಂತು ಇವಿಎಂ ತಂತ್ರಾಂಶ ಬಳಸಿ ವಿನೂತನ ರೀತಿಯಲ್ಲಿ ನಡೆಸಲಾಯಿತು. ಎಲ್ಲಾ ವಿದ್ಯಾರ್ಥಿಗಳಿಗೆ ಮತದಾನಕ್ಕೆ ಅವಕಾಶ ನೀಡಲಾಗಿತ್ತು. ವಿದ್ಯಾರ್ಥಿಗಳೇ ಚುನಾವಣಾ ಕರ್ತವ್ಯವನ್ನು ನಿರ್ವಹಿಸುವಂತೆ ವ್ಯವಸ್ಥೆಗೊಳಿಸಲಾಗಿತ್ತು.
ಪ್ರಭಾರ ಮುಖ್ಯೋಪಾಧ್ಯಾಯ ಹಾಗೂ ಸಮಾಜ ವಿಜ್ಞಾನ ಸಂಘದ ಮಾರ್ಗದರ್ಶಿ ಶಿಕ್ಷಕರಾದ ಎಸ್. ರಾಜಗೋಪಾಲ ಜೋಶಿ ಅವರು ಮಾರ್ಗದರ್ಶನ ನೀಡಿದರು. ಎಲ್ಲಾ ಶಿಕ್ಷಕ- ಶಿಕ್ಷಕಿಯರು ಸಹಕರಿಸಿದರು.