ಹಾಸನ: ಮನೆ ಮನೆ ಕವಿಗೋಷ್ಠಿ ಸಾಹಿತ್ಯ ಸಂಘಟನೆ ಹಾಸನ ಇವರು ಜಗದೀಶ್‍ರಾಮಘಟ್ಟ, ರಂಗನಟರು ಹಾಗೂ ಅಧ್ಯಕ್ಷರು ಕನ್ನಡ ಸಾಹಿತ್ಯ ಪರಿಷತ್ತು ಕಟ್ಟಾಯ ಹೋಬಳಿ ಘಟಕ, ಗೊರೂರು ಇವರ ಪ್ರಾಯೋಜಕತ್ವದಲ್ಲಿ ಹಾಸನಾಂಬ ಥಿಯೋಸಾಫೀಕಲ್ ಸೊಸೈಟಿ ವಾಣಿವಿಲಾಸ ರಸ್ತೆ, ನಗರ ಕೇಂದ್ರ ಗ್ರಂಥಾಲಯ ಹಿಂಭಾಗ, ಪ್ರಾಚ್ಯವಸ್ತು ಸಂಗ್ರಹಾಲಯ ಕಟ್ಟಡ ಪಕ್ಕ ಇಲ್ಲಿ ನಾಡಿನಖ್ಯಾತ ಖಗೋಳ ಶಾಸ್ತ್ರಜ್ಞರು, ರಾಮಾಯಣ ಮಹಾಭಾರತ ಅಧ್ಯಯನ ಗ್ರಂಥಕರ್ತ ವಿದ್ವಾಂಸರು, ಸ್ವಾತಂತ್ರ್ಯ ಹೋರಾಟಗಾರರು ಗೊರೂರು ಸಾಹುಕಾರ್ ಶ್ರೀ ಜಿ.ಎಸ್. ಸಂಪತ್ತಯ್ಯಂಗಾರ್ ಅವರ ಸ್ವಾತಂತ್ರ್ಯ ಹೋರಾಟದ ಬದುಕು ಮತ್ತು ಬರಹ ಕುರಿತು ಅಗಸ್ಟ್ 6ರಂದು ಭಾನುವಾರ ಮದ್ಯಾಹ್ನ 3.30ಕ್ಕೆ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ.
ಡಾ. ಎಂ.ಆರ್.ಚಂದ್ರಶೇಖರ್, ಹಾಸನ, ನಿವೃತ್ತ ಪ್ರಾಂಶುಪಾಲರು, ಎ.ಎನ್.ವರದರಾಜುಲು ಪ್ರಥಮದರ್ಜೆಕಾಲೇಜು, ಗೊರೂರುರವರಿಂದ ಉಪನ್ಯಾಸ ಹಾಗೂ ಆಗಮಿತ ಕವಿಗಳಿಂದ ಕವಿಗೋಷ್ಠಿ, ಗಾಯಕರು ಕಲಾವಿದರಿಂದ ಗಾಯನ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ ಎಂದು ಗೊರೂರು ಅನಂತರಾಜು ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ