ಗೋಕರ್ಣ: ಅನ್ನಪೂರ್ಣೇಶ್ವರಿ ಪೂಜೆ ಸಂಪನ್ನ, ಚಾತುರ್ಮಾಸ್ಯ ವ್ರತ ನಾಳೆಯಿಂದ

Upayuktha
0

ಗೋಕರ್ಣ: ಶ್ರೀಮಜ್ಜಗದ್ಗುರು ಶಂಕರಾಚಾರ್ಯ ಶ್ರೀ ರಾಘವೇಶ್ವರ ಭಾರತೀಸ್ವಾಮೀಜಿಯವರ ಚಾತುರ್ಮಾಸ್ಯ ವ್ರತ ಆಷಾಢ ಹುಣ್ಣಿಮೆ (ಜುಲೈ 3)ಯಂದು ಅಶೋಕೆಯ ಶ್ರೀ ವಿಷ್ಣುಗುಪ್ತ ವಿಶ್ವವಿದ್ಯಾಪೀಠದ ಆವರಣದಲ್ಲಿ ಆರಂಭವಾಗಲಿದ್ದು, ಚಾತುರ್ಮಾಸ್ಯಕ್ಕೆ ಆಗಮಿಸುವ ಭಕ್ತರ ಪ್ರಸಾದ ಭೋಜನಕ್ಕಾಗಿ ವ್ಯವಸ್ಥೆಗೊಳಿಸಲಾಗಿರುವ ಪಾಕಶಾಲೆಯಲ್ಲಿ ಶ್ರೀ ಅನ್ನಪೂರ್ಣೇಶ್ವರಿ ಪೂಜೆ ಭಾನುವಾರ ನೆರವೇರಿತು.


ರಾಘವೇಶ್ವರ ಶ್ರೀಗಳು ಅನ್ನಪೂರ್ಣೇಶ್ವರಿ ಪೂಜೆ ನೆರವೇರಿಸಿ, ಶಿಷ್ಯಭಕ್ತರಿಗೆ ಮೂರು ತಿಂಗಳ ಪರ್ಯಂತ ಪ್ರಸಾದ ಭೋಜನಕ್ಕೆ ಮಾಡಿರುವ ವ್ಯವಸ್ಥೆ, ಉಗ್ರಾಣ ವ್ಯವಸ್ಥೆಗಳನ್ನು ಪರಿಶೀಲಿಸಿದರು. ಚಾತುರ್ಮಾಸ್ಯ ಸಂದರ್ಭದಲ್ಲಿ ಶಿಷ್ಯಭಕ್ತರ ಮತ್ತು ಗಣ್ಯಮಾನ್ಯರ ಪ್ರಸಾದ ಭೋಜನ ಸುವ್ಯವಸ್ಥಿತವಾಗಿ ನಡೆಯುವಂತೆ ಅನ್ನಪೂಣೇಶ್ವರಿಯ ಅನುಗ್ರಹಕ್ಕಾಗಿ ಶ್ರೀಗಳು ಪ್ರತಿ ವರ್ಷ ಅನ್ನಪೂಣೇಶ್ವರಿ ಪೂಜೆ ನಡೆಸುತ್ತಾರೆ.


ಸರಳ, ಶುಚಿ- ರುಚಿಯಾದ ಪ್ರಸಾದ ಭೋಜನಕ್ಕೆ ಅಗತ್ಯ ಕ್ರಮ ಕೈಗೊಳ್ಳುವಂತೆ ಶ್ರೀಗಳು ಸೂಚಿಸಿದರು. ಚಾತುರ್ಮಾಸ್ಯ ಸಮಿತಿ ಗೌರವಾಧ್ಯಕ್ಷ ಡಿ.ಡಿ.ಶರ್ಮಾ, ಅಧ್ಯಕ್ಷ ಯು.ಎಸ್.ಗಣಪತಿ ಭಟ್, ಕಾರ್ಯಾಧ್ಯಕ್ಷ ಮಂಜುನಾಥ ಹೆಗಡೆ, ಕಾರ್ಯದರ್ಶಿ ಶ್ರೀಕಾಂತ್ ಪಂಡಿತ್, ವಿವಿವಿ ಆಡಳಿತಾಧಿಕಾರಿ ಪ್ರಸನ್ನ ಕುಮಾರ್ ಟಿ.ಜಿ, ಹಿರಿಯ ಲೋಕಸಂಪರ್ಕಾಧಿಕಾರಿ ಜಿ.ಕೆ.ಹೆಗಡೆ, ಪ್ರಶಾಸನಾಧಿಕಾರಿ ಸಂತೋಷ್ ಹೆಗಡೆ, ವಿತ್ತಾಧಿಕಾರಿ ಜಿ.ಎಲ್.ಗಣೇಶ್, ಹವ್ಯಕ ಮಹಾಮಂಡಲ ಪ್ರಧಾನ ಕಾರ್ಯದರ್ಶಿ ನಾಗರಾಜ ಭಟ್ ಪಿದಮಲೆ, ಸಂಘಟನಾ ಕಾರ್ಯದರ್ಶಿ ಅರವಿಂದ ದರ್ಬೆ, ನಿಯೋಜಿತ ಪ್ರಧಾನ ಕಾರ್ಯದರ್ಶಿ ಉದಯಶಂಕರ ಭಟ್ ಮಿತ್ತೂರು, ಜನಸಂತೋಷ ವಿಭಾಗದ ಸುಬ್ರಾಯ ಭಟ್ ಮೂರೂರು, ಸುವಸ್ತು ವಿಭಾಗದ ಮುಖ್ಯಸ್ಥ ರಾಮಚಂದ್ರ ಅಜ್ಜಕಾನ, ಪಾಕಪ್ರವೀಣ ರಾಜೀವ್ ಸುಬ್ರಾಯ ಭಟ್ ಉಪಸ್ಥಿತರಿದ್ದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top