ಸೀನಿಯರ್ ಛೇಂಬರ್ ಇಂಟರ್ನ್ಯಾಷನಲ್- ಬಂಟ್ವಾಳ ನೇತ್ರಾವತಿ ಘಟಕದ ಪದಗ್ರಹಣ

Upayuktha
0

ಬಂಟ್ವಾಳ: ಬಂಟ್ವಾಳ ಸೀನಿಯರ್ ಛೇಂಬರ್ ಇಂಟರ್ ನ್ಯಾಶನಲ್ ಬಂಟ್ವಾಳ ನೇತ್ರಾವತಿ ಘಟಕದ ಪದಗ್ರಹಣ ಸಮಾರಂಭವು ಬಿ.ಸಿ. ರೋಡಿನ ಕನ್ನಡ ಭವನದಲ್ಲಿ ರಾಷ್ಟ್ರೀಯ ಅಧ್ಯಕ್ಷ ಫ್ರೊ. ವರ್ಗಿಸ್ ವೈದ್ಯನ್ ಉಪಸ್ಥಿತಿಯಲ್ಲಿ ನರೆವೇರಿತು.


ಹಿರಿಯ ಜೇಸಿಗಳು ತಮ್ಮ ಅನುಭವ ಮತ್ತು ನಾಯಕತ್ವದ ಗುಣಗಳನ್ನು ಸಮಾಜ ಸೇವೆಗೆ ಬಳಸಿಕೊಳ್ಳಬೇಕು. ಪರಿಸರ ಸಂರಕ್ಷಣೆಯ ಕಾರ್ಯಗಳಲ್ಲಿ ತೊಡಗಿಸಿಕೊಳ್ಳಬೇಕು. ರಾಷ್ಟ್ರೀಯ ಭಾವೈಕ್ಯಕ್ಕೆ ಪೂರಕವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಬೇಕು ಎಂದು ರಾಷ್ಟ್ರೀಯ ಅಧ್ಯಕ್ಷರು ಸಲಹೆ ನೀಡಿದರು.


ರಾಷ್ಟ್ರೀಯ ಉಪಾಧ್ಯಕ್ಷ ಜಿ.ಕೆ. ಹರಿಪ್ರಸಾದ್ ರೈ ನೂತನ ಸದಸ್ಯರಿಗೆ ಪ್ರಮಾಣ ವಚನ ಬೋಧಿಸಿದರು. ಸದಸ್ಯರು ಸಕ್ರಿಯವಾಗಿ ಕಾರ್ಯಕ್ರಮಗಳಲ್ಲಿ ಭಾಗಿಗಳಾಗಿ ಸಮಾಜ ಸೇವೆಯಲ್ಲಿ ಪಾಲ್ಗೊಳ್ಳಬೇಕು ಎಂದರು. ಮುಖ್ಯ ಅತಿಥಿಗಳಾಗಿ ಬಂಟ್ವಾಳ ರೊ.ಕ್ಲಬ್‍ನ ಅಧ್ಯಕ್ಷ ಪುಷ್ಪರಾಜ್ ಹೆಗ್ಡೆ, ಬ್ರೈಟ್ ಕನ್ಟ್ರಕ್ಷನ್‍ನ ಅಬ್ದುಲ್ ಜಲೀಲ್ ಮೋಂಟುಗೊಳಿ, ವಾಲಿಬಾಲ್ ಎಸೋಸಿಯೇಶನ್ ಜಿಲ್ಲಾ ಅಧ್ಯಕ್ಷ ಬಿ.ಎಸ್. ಸತೀಶ್ ಕುಮಾರ್ ಪುತ್ತೂರು ಶುಭ ಹಾರೈಸಿ ಮಾತನಾಡಿದರು.


ಅಧ್ಯಕ್ಷರಾಗಿ ಡಾ. ಆನಂದ ಬಂಜನ್ ಅಧಿಕಾರ ಸ್ವೀಕರಿಸಿ ಮಾತನಾಡಿದರು. ಕಾರ್ಯದರ್ಶಿ ನ್ಯಾಯವಾದಿ ಶೈಲಜಾ ರಾಜೇಶ್, ಕೋಶಾಧಿಕಾರಿ ಸತ್ಯನಾರಾಯಣ ರಾವ್, ಜೊತೆ ಕಾರ್ಯದರ್ಶಿ ಮಲ್ಲಿಕಾ ಆಳ್ವ ಅಧಿಕಾರ ವಹಿಸಿಕೊಂಡರು.


ಉಪಾಧ್ಯಕ್ಷರಾದ ಆದಿರಾಜ ಜೈನ್, ಡಾ. ಮನೋಹರ ರೈ, ನಿರ್ದೇಶಕರಾದ ಪಿ.ಎ. ರಹೀಂ, ಪಿ. ಮಹಮ್ಮದ್, ನಾಗೇಶ್ ಬಾಳೆಹಿತ್ಲು, ರವೀಂದ್ರ ಕುಕ್ಕಾಜೆ, ಉಮೇಶ್ ಕುಮಾರ್ ವೈ, ಹರಿಶ್ಚಂದ್ರ ಆಳ್ವ, ತಾರನಾಥ ಕೊಟ್ಟಾರಿ, ಜಯಗಣೇಶ, ಸದಾಶಿವ ಡಿ ತುಂಬೆ, ಯೋಗೀಶ್ ಬಂಗೇರ, ಪಿ. ಮೊಹಮ್ಮದ್, ಶುಭಾ ಬಂಜನ್, ಸುಜಾತ ಉಪಸ್ಥಿತರಿದ್ದರು.


ಬಂಟ್ವಾಳ ಲೀಜನ್‍ನ ಸ್ಥಾಪಕ ಅಧ್ಯಕ್ಷ ಜಯಾನಂದ ಪೆರಾಜೆ ಅಧ್ಯಕ್ಷತೆ ವಹಿಸಿ ಪ್ರಮಾಣ ವಚನ ಬೋಧಿಸಿದರು. ಹಿರಿಯ ಜೇಸಿ ಗಳಾದ ಬಿ. ರಾಮಚಂದ್ರ ರಾವ್ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ಅಹಮ್ಮದ್ ಮುಸ್ತಾಫ ಸ್ವಾಗತಿಸಿದರು. ಸತ್ಯನಾರಾಯಣ ರಾವ್ ವರದಿ ಮಂಡಿಸಿದರು. ಕಾರ್ಯದರ್ಶಿ ನ್ಯಾಯವಾದಿ ಶೈಲಜಾ ರಾಜೇಶ್ ವಂದಿಸಿದರು. ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನೆರವೇರಿತು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top