ಸ್ವಾವಲಂಬಿ ಬದುಕಿಗೆ ಪರಿಸರ ಸ್ನೇಹಿ ಕಾರ್ಯ ಚಟುವಟಿಕೆಗಳು ಪ್ರೇರಕ - ರಘು ನಾಯಕ್

Upayuktha
0

ಸುರತ್ಕಲ್‍: ಸ್ವಾವಲಂಬಿ ಬದುಕಿಗೆ ಪರಿಸರ ಸ್ನೇಹಿ ಕಾರ್ಯ ಚಟುವಟಿಕೆಗಳು ಪ್ರೇರಕ. ಹೆಚ್ಚಿನ ಪ್ರಮಾಣದಲ್ಲಿ ಹಸಿರನ್ನು ಬೆಳೆಸುವ ಜವಾಬ್ದಾರಿ ನಮ್ಮೆಲ್ಲರ ಮೇಲಿದೆ ಎಂದು ಸುರತ್ಕಲ್ ಪೊಲೀಸ್‍ಠಾಣೆಯ ರಘು ನಾಯಕ್ ನುಡಿದರು. ಅವರು ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮೀಣಾಭಿವೃದ್ಧಿ ಯೋಜನೆ, ಬಿ.ಸಿಟ್ರಸ್ಟ್, ಜನಜಾಗೃತಿ ವೇದಿಕೆ ಮತ್ತು ಶೌರ್ಯ ವಿಪತ್ತು ನಿರ್ವಹಣಾಘಟಕ, ಸುರತ್ಕಲ್,  ಗೋವಿಂದದಾಸ ಕಾಲೇಜು ಸುರತ್ಕಲ್‍ನ ಆಂತರಿಕ ಗುಣಮಟ್ಟ ಖಾತರಿ ಕೋಶ, ರಾಷ್ಟ್ರೀಯ ಸೇವಾ ಯೋಜನೆ,  ಇವುಗಳ ಸಹಭಾಗಿತ್ವದಲ್ಲಿ ನಡೆದ ಪರಿಸರ ಮಾಹಿತಿ ಮತ್ತು ಗಿಡ ನಾಟಿ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಮಾತನಾಡಿದರು.


ಸಂಪನ್ಮೂಲ ವ್ಯಕ್ತಿ ಗೋವಿಂದದಾಸ ಕಾಲೇಜಿನ ರಾಷ್ಟ್ರೀಯ ಸೇವ ಯೋಜನಾಧಿಕಾರಿ ಅಕ್ಷತಾ ವಿ ಮಾತನಾಡಿ ಪರಿಸರ ಸಮೃದ್ಧಿ ಮತ್ತು ಆರೋಗ್ಯಕರ ಜೀವನಕ್ಕೆ ಸಂಬಂಧವಿದ್ದು ಪ್ರತಿಯೊಂದು ಜೀವಿಯ ಜೀವನದ ಅಸ್ತಿತ್ವಕ್ಕೂ ಸುಸ್ಥಿರ ಪರಿಸರ ಅಗತ್ಯ ಎಂದರು. ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಕಾಲೇಜಿನ ಪ್ರಾಚಾರ್ಯ ಪ್ರೊ. ಪಿ. ಕೃಷ್ಣಮೂರ್ತಿ ಮಾತನಾಡಿ ಸ್ವಚ್ಛ ಪರಿಸರ ನಿರ್ಮಾಣದ ಕಾರ್ಯದಲ್ಲಿ ಜನತೆ ಸಕರಾತ್ಮಕವಾಗಿ ಸ್ಪಂದಿಸಬೇಕೆಂದರು.


ಮಂಗಳೂರು ತಾಲೂಕು ಜನಜಾಗೃತಿ ವೇದಿಕೆಯ ಮಾಜಿ ಅಧ್ಯಕ್ಷ ಸದಾಶಿವ ಶೆಟ್ಟಿ, ಜನಜಾಗೃತಿ ವೇದಿಕೆ ದಕ್ಷಿಣಕನ್ನಡ ಉಡುಪಿಯ ಪ್ರಾದೇಶಿಕ ವಲಯದ ಮಾಜಿ ಅಧ್ಯಕ್ಷ ಇಸ್ಮಾಯಿಲ್, ಗಣೇಶಪುರಜನಜಾಗೃತಿ ವೇದಿಕೆಯ ಉಪಾಧ್ಯಕ್ಷ ಎ.ಪಿ. ಮೋಹನ್‍ ಗಣೇಶಪುರ, ಒಕ್ಕೂಟದ ಅಧ್ಯಕ್ಷೆ ವೇದಾವತಿ ಮುಖ್ಯ ಅತಿಥಿಗಳಾಗಿ ಶುಭ ಹಾರೈಸಿದರು.  ಮೇಲ್ವಿಚಾರಕರು, ಸೇವಾ ಪ್ರತಿನಿಧಿಗಳು, ರಾಷ್ಟ್ರೀಯ ಸೇವಾ ಯೋಜನೆಯ ಸ್ವಯಂಸೇವಕರು, ಶೌರ್ಯ ವಿಪತ್ತು ನಿರ್ವಹಣಾ ಸುರತ್ಕಲ್‍ ಘಟಕದ ಸ್ವಯಂಸೇವಕರು ಶ್ರೀಗಂಧ, ನೆಲ್ಲಿಕಾಯಿ, ಮಾವು, ತೇಗದ ಗಿಡಗಳನ್ನು ಗೋವಿಂದದಾಸ ಕಾಲೇಜಿನ ಪರಿಸರದಲ್ಲಿ ನೆಟ್ಟರು.


ಸಂಯೋಜಕರಾದ ಗೀತಾ ಸ್ವಾಗತಿಸಿ, ಮೇಲ್ವಿಚರಕರಾದ ಸುಶೀಲ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top