ಕನಸೊಂದು ಶುರುವಾಗಿದೆ ಗೆಳತಿ ನನ್ನಲ್ಲಿ...
ಮನವು ಹಂಬಲಿಸುತ್ತಿದೆ,ನೀ ಇರಬೇಕೆಂದು ಸದಾ ನನ್ನ ಜೊತೆಯಲ್ಲಿ...
ಹೇಳಿಕೊಳ್ಳಬಯಸುತ್ತಿರುವೆ ನಾನು ನೂರಾರು ಮಾತುಗಳನ್ನ ನಿನ್ನಲ್ಲಿ ..
ಚಡಪಡಿಸಿಕೊಳ್ಳುತ್ತಿರುವೆ ಹೇಳಿಕೊಳ್ಳಲಾದೆ ನಿನ್ನ ಜೊತೆಗಿರುವ ಪ್ರತಿಕ್ಷಣದಲ್ಲಿ...
ಕಿವಿಗಳು ಕೇಳಬಯಸುತ್ತಿದೆ ನಿನ್ನ ಮುದ್ದು ಮುದ್ದು ಮಾತುಗಳನ್ನ..
ಮನಸ್ಸು ಮಾಡಿಕೊಳ್ಳುತ್ತಲೇ ಇದೆ,ನಿನ್ನ ಅಂದ-ಚಂದದ ಗುಣಗಾನ...
ನಿನ್ನ ಪ್ರೀತಿಯ ಪಡೆಯಲು ಕಾದುಕೂತಿರುವುದು ನನ್ನ ಮನ...
ಯಾವಾಗ ಬರುವುದೋ, ನೀ ನನ್ನ ಪ್ರೀತಿಯ ಒಪ್ಪಿಕೊಳ್ಳುವ ಸುದಿನ...
ನನ್ನ ಬದುಕಿಗೆ ನೀನೇ ಆಸರೆ ಎಂದೆಂದೂ...
ಹೇಳಿಕೊಳ್ಳುವ ಆಸೆ ನನ್ನ ಪ್ರೀತಿಯ ನಿನ್ನ ಬಳಿ ಬಂದು...
ಕಾಯುತ್ತಿರುವೆ ನಿನ್ನ ಬಳಿ ಬರಲು ಒಳ್ಳೆಯ ಸಮಯಕ್ಕಾಗಿ...
ಸಂಭ್ರಮಿಸುವ ಬದುಕಿನ ಸುಂದರ ಕ್ಷಣಗಳ ಒಂದಾಗಿ...
ನನ್ನ ಜೀವಕ್ಕಿಂತ ಹೆಚ್ಚಾಗಿ ಪ್ರೀತಿಸುವೆ ನಾ ನಿನ್ನ...
ನನ್ನ ಜೀವನದ ಕಡೆಯವರೆಗೂ ನನ್ನೊಂದಿಗೆ ಇರು ಓ ನನ್ನ ಚಿನ್ನ..
ಮರೆಯಲಾರೆ ನಾ ನಿನ್ನ,ನಾ ಸೆರೋವರೆಗೂ ಮಣ್ಣ...
ನೋಡಿಕೊಳ್ಳುವೆ ಕೊನೆಯವರೆಗೂ ನಿನ್ನ,ಎಲ್ಲರೂ ಕಾಪಾಡಿಕೊಳ್ಳುವ ತರ ಅವರವರ ಕಣ್ಣ...
-ಜೈದೀಪ್ ಅಮೈ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ