ನೀವು ತಿಂದಿದ್ದೀರಾ....? ಹಲಸಿನ ಸೊಳೆಯ ಪೇಪರ್ ದೋಸೆ

Upayuktha
0

ಲಸಿನ ಕಾಯಿ, ಹಲಸಿನ ಹಣ್ಣು ಅತ್ಯುತ್ತಮ ಆಹಾರ ವಸ್ತುವಾಗಿದ್ದು, ಹಳ್ಳಿಗಳಲ್ಲಿ ಬೇಕಾದಷ್ಟು ಬಳಸಿ ಉಳಿದು ವ್ಯರ್ಥವಾಗಿ ಹೋಗುತ್ತಿದ್ದ ಈ ಹಣ್ಣಿಗೆ ಮತ್ತು ಹಲಸಿನ ಉತ್ಪನ್ನಗಳಿಗೆ ಇತ್ತೀಚಿನ ವರ್ಷಗಳಲ್ಲಿ ನಗರಗಳಲ್ಲೂ ವ್ಯಾಪಕ ಬೇಡಿಕೆ ಬರುತ್ತಿದೆ.

ಅಲ್ಲಲ್ಲಿ ಹಲಸಿನ ಹಬ್ಬಗಳು, ಹಲಸು ಮೇಳಗಳು ನಡೆಯುತ್ತಿರುವುದು ಹಸಿವು ನೀಗಿಸುವ ಈ ಹಣ್ಣಿಗೆ ಇರುವ ಬೇಡಿಕೆಗೆ ಸಾಕ್ಷಿಯಾಗಿದೆ.


ಸತ್ಯ ಭಟ್ ಉಜಿರೆ ಅವರ ಜಮೀನಿನಲ್ಲಿ ಅದ್ಭುತವಾದ ಹಲಸು ದೋಸೆ ಮರವಿದೆ. ಅಕ್ಕಿ ಅಥವಾ ಉದ್ದಿನ ಬೇಳೆಯನ್ನು ಸೇರಿಸದೆಯೇ ಬರೇ ಹಲಸಿನ ಸೊಳೆಗಳ ಹಿಟ್ಟಿನಿಂದ ಅತ್ಯಂತ ತೆಳುವಾದ ಗರಿಮುರಿ- ರುಚಿಕರ ದೋಸೆಯನ್ನು ತಯಾರಿಸಲು ಈ ಮರದ ಸೊಳೆಯಿಂದ ಸಾಧ್ಯವಿದೆ. ಪೇಪರ್ ದೋಸೆಯಂತೆ ರೋಸ್ಟ್ ಆಗಿ ಬರುತ್ತದೆ.

ಮಧುಮೇಹ ಮತ್ತು ಉದರದ ಸ್ನೇಹಿ, ಉತ್ತಮ ನಾರಿನಂಶಗಳು ಮತ್ತು ವಿಟಮಿನ್‌ಗಳನ್ನು ಹೊಂದಿದೆ.  ಅಲ್ಲದೆ ಹಲಸಿನ ಮರಕ್ಕೆ ಯಾವುದೇ ಕೀಟನಾಶಕದ ಅಗತ್ಯವಿಲ್ಲದಿರುವುದರಿಂದ ಹಲಸಿನ ಸೊಳೆಯಲ್ಲಿ ಯಾವುದೇ ರಾಸಾಯನಿಕ ಅಥವಾ ಅಪಾಯಕಾರಿ ಅಂಶಗಳು ಸೇರ್ಪಡೆಯಾಗಿಲ್ಲ.

ಚಿತ್ರ: ಸತ್ಯ ಭಟ್ ಉಜಿರೆ

ದೋಸೆ ತಯಾರಿ: ಶ್ರೀಮತಿ ಶೈಲೇಶ್ವರಿ


ಹಲಸಿನ ಕಾಯಿಯ ಉಕಡೋಪು:


ಇದು ವಿಶೇಷವಾಗಿ ಉತ್ತರ ಕನ್ನಡದ ಹಳ್ಳಿಗಳಲ್ಲಿ ಮನೆ ಮನೆಯಲ್ಲಿ ಹಲಸಿನ ಕಾಯಿಯಿಂದ ತಯಾರಿಸುವ ವಿಶೇಷ ತಿನಿಸು. ನಮ್ಮೂರಲ್ಲಿ ಮಾಡುವ ಹಲಸಿನ ಕಾಯಿ ಸೊಳೆಗಳ ಪಲ್ಯದಂತೆಯೇ ಮೇಲ್ನೋಟಕ್ಕೆ ಕಂಡರೂ ಉಕಡೋಪು ತಯಾರಿಸುವ ಪಾಕವಿಧಾನ ಸ್ವಲ್ಪ ಭಿನ್ನ. ಹಾಗೆಯೇ ರುಚಿಯೂ ಭಿನ್ನವಾಗಿದೆ.

ಉಕಡೋಪು ತಯಾರಿ ವಿಧಾನ (ಬಾಲಚಂದ್ರ ಹೆಗಡೆ ಸಾಯಿಮನೆ ಅವರಿಂದ):

ಹಲಸಿನ ಕಾಯಿಯನ್ನು ಕೊಚ್ಚಿ ಇಟ್ಟುಕೊಳ್ಳಬೇಕು.  ಒಗ್ಗರಣೆಗೆ ಉದ್ದಿನ ಬೇಳೆ, ಸಾಸಿವೆ, ಇಂಗು, ಹಾಕಿ. ಹಸಿ ಮೆಣಸು, ಕರಿಬೇವು ಸೊಪ್ಪು, ಅರಿಸಿನ  ಹಾಕಿ, ಹುರಿದು ಹಲಸಿನ ಹೋಳನ್ನು ಹಾಕಿ ಸೇರಿಸಬೇಕು.  ಉಪ್ಪು, ಸ್ವಲ್ಪ ನೀರು ಸೇರಿಸಿ, ಮುಚ್ಚಿ ಬೇಯಿಸಬೇಕು. (ಅಥವಾ ಕುಕ್ಕರ್ ಉಪಯೋಗಿಸಿದರೆ ಒಂದು ವಿಸಲ್). ಈರುಳ್ಳಿ, ಹಸಿ ಕಾಯಿತುರಿ ಹಾಕಿ, ಲಿಂಬೆ ರಸ ಹಿಂಡಿ, ತೊಳಸಿದರೆ ಉಕಡೋಪು ರೆಡಿ. ಇದನ್ನು ಬೆಳಗ್ಗಿನ ಉಪಾಹಾರವಾಗಿ ಉ.ಕ.ದ ಕಳಚೆ ಗ್ರಾಮದ ಮಂದಿ ಬಳಸುತ್ತಿದ್ದರು. ನಾವೂ ಹಾಗೆಯೇ ಬಳಸಬಹುದು. 


ಮಾಹಿತಿ ಕೃಪೆ: ಶ್ರೀ ಪಡ್ರೆ, ಅಡಿಕೆ ಪತ್ರಿಕೆ ಸಂಪಾದಕರು

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  



Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top