ಸೀರೆ ಎನ್ನುವುದು ಭಾರತೀಯ ಮಹಿಳೆಯರ ಸಾಂಪ್ರದಾಯಿಕ ಉಡುಗೆ. ಭಾರತದ ಕೆಲವು ಗ್ರಾಮೀಣ ಪ್ರದೇಶಗಳಲ್ಲಿ ಸಾಂಪ್ರದಾಯಿಕ ಉಡುಗೆಗಳನ್ನು ಈಗಲೂ ಬಹುತೇಕ ಜನರು ಧರಿಸುತ್ತಾರೆ. ಸೀರೆ ಎನ್ನುವುದು ಉಡುಗೆ ಮಾತ್ರ ಅಲ್ಲ ಹೆಣ್ಣಿಗೆ ಸಿಗುವ ಒಂದು ಗೌರವದ ಸಂಕೇತ ಹಾಗೆಯೇ ಮನೆತನದ ಗೌರವ ಎನ್ನಬಹುದು.
ಸೀರೆಯ ವಿನ್ಯಾಸದಲ್ಲಿ ಎಷ್ಟೋ ಶೈಲಿಗಳು ಬಂದಿದೆಯೇ ಹೊರತು ಸೀರೆಯು ಸಂಪೂರ್ಣವಾಗಿ ಮಾಯವಾಗಿಲ್ಲ. ಮಹಿಳೆಯರು ಕೆಲಸದ ಒತ್ತಡದಲ್ಲಿ ಸೀರೆಯನ್ನು ಉಡಲು ಸಮಯವಾಗುವುದಿಲ್ಲವೆಂದು ಚೂಡಿದಾರವನ್ನು ಆರಿಸಿಕೊಂಡರು. ಸೀರೆಯ ಸೆರಗಿನಂತೆಯೇ ಚೂಡಿದಾರದ ದುಪ್ಪಟ್ಟಿಗೂ ಹೆಚ್ಚಿನ ಪ್ರಾಶಸ್ತ್ಯವನ್ನು ನೀಡಲಾಗಿತ್ತು.
ಗ್ರಾಮೀಣ ಜನರ ಜೀವನ ಸೀರೆಯೇ ಆಗಿದೆ. ಸೀರೆಯೊಂದಿಗೆ ಸಾಂಸ್ಕೃತಿಕ ಲೋಕವು ಎದ್ದು ಕಾಣುತ್ತದೆ. ಆದರೆ ಇಂದಿನ ಯುವ ಹುಡುಗಿಯರು ಟ್ರೆಂಡಿಗ್ ಎಂದು ಹಿಡಿದುಕೊಂಡು ಸಂಸ್ಕೃತಿಯನ್ನು ಮರೆ ಮಾಡುತ್ತಿದ್ದಾರೆ. ಜೀನ್ಸ್ ಪ್ಯಾಂಟ್ ಟೀ ಶರ್ಟ್ ಗಳು ಇಂತಹ ಅರೆಬರೆಯ ಉಡುಪುಗಳನ್ನು ಧರಿಸಿಕೊಂಡು ದೇವಾಲಯ ಇಲ್ಲವೋ ಸಮಾಜದಲ್ಲಿ ನಡೆದಾಡುವುದನ್ನು ಕಾಣುತ್ತಿದ್ದೇವೆ. ಇದರಿಂದ ಹುಡುಗರಿಗೆ ಆಕರ್ಷಣೆ ಎನ್ನುವುದು ಕ್ಷಣ ಕ್ಷಣಕ್ಕೂ ಹೆಚ್ಚಾಗುತ್ತಿದೆ. ಸಂಸ್ಕೃತಿಯನ್ನು ಮರೆತು ಸಾಗುತ್ತಿರುವವರ ನಡುವೆ ಎಲ್ಲೋ ಎಣಿಕೆಯಷ್ಟು ಗ್ರಾಮೀಣ ಪ್ರದೇಶದವರು ಸೀರೆಯಲ್ಲಿ ಇರುವುದನ್ನು ಕಾಣುತ್ತಿದ್ದೇವೆ.
ಹೆಣ್ಣಿನ ಅಂದ ಚಂದ ಗೌರವ ಎಲ್ಲವೂ ಸೀರೆಯಿಂದಲೇ ಹೊರತು ಇನ್ಯಾವುದರಲ್ಲೂ ಸಿಗಲು ಸಾಧ್ಯವಿಲ್ಲ ಎಂದು ಹಿರಿಯರು ಇಂದಿಗೂ ಅನುಸರಿಸುತ್ತಾ ಬುದ್ಧಿ ಮಾತನ್ನು ಹೇಳುತ್ತಿದ್ದಾರೆ. ಎಲ್ಲದರ ನಡುವೆ ಕೆಲವೊಂದು ಪುರುಷರು ಟ್ರೆಡಿಶನಲ್ ಅನ್ನೋದನ್ನ ಬಿಟ್ಟು ಇನ್ನಾದರೂ ಬದಲಾಗು ಅರೆಬರೆ ಉಡುಗೆ ಅತ್ತ ನೋಟಾ ಇಡು ಎಂದು ಎಷ್ಟೋ ಹೆಣ್ಣು ಮಕ್ಕಳೊಂದಿಗೆ ಹೇಳಿ ಸಂಬಂಧವನ್ನು ಕೆಡಿಸಿಕೊಂಡದ್ದನ್ನು ಕಾಣುತ್ತಿದ್ದೇವೆ. ಹುಡುಗರು ಇತ್ತೀಚೆಗೆ ಟ್ರೆಡಿಶನಲ್ ಅನ್ನು ಹೀಯಾಳಿಸುವುದನ್ನು ಕಾಣುತ್ತಿದ್ದೇವೆ. ಹೆಣ್ಣೆಂದ ಮೇಲೆ ಕೈಯಲ್ಲಿ ಬಳೆ, ಮೈಯಲ್ಲಿ ಸೀರೆ, ಹಣೆಯಲ್ಲಿ ಕುಂಕುಮ, ಕಾಲಲ್ಲಿ ಗೆಜ್ಜೆ, ಹಣೆಯಲ್ಲಿ ತಿಲಕ, ಮೂಗಿನಲ್ಲಿ ಮೂಗು ಬೊಟ್ಟು, ಮುತ್ತೈದೆವರಿಗಾದರೆ ಕಾಲು ಬೆರಳಿನಲ್ಲಿ ಉಂಗುರ, ಕೊರಳಲ್ಲಿ ಮಾಂಗಲ್ಯ ಸರ ಎನ್ನುವುದು ಇದ್ದಾಗಲೇ ಹೆಣ್ಣಿಗೆ ಬೆಲೆ ಮಹತ್ವ ಸಿಗುವುದು ಯುವ ಪೀಳಿಗೆಯವರು ಇದನ್ನು ಅನುಸರಿಸಿದಾಗಲೇ ಜೀವಂತವಾಗಿ ಉಳಿದು ಸಮಾಜದಲ್ಲಿ ನಡೆದಾಡಲು ಸಾಧ್ಯ.
- ಅನನ್ಯ ಎಚ್ ಸುಬ್ರಹ್ಮಣ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ