ಕಾರ್ಕಳ: ಮಾನವಿಕ ಶಾಸ್ತ್ರದ ವಿಷಯಗಳ ಅಧ್ಯಯನದಲ್ಲಿ ಜೀವಂತಿಕೆ ಇದೆ. ನಮ್ಮ ಕಲಿಕೆಯ ವಿಷಯಗಳು ನಮ್ಮ ನೆಲದಲ್ಲಿಯೇ ಹುಟ್ಟಿ ಬಂದ ವಿಷಯಗಳು ಹಾಗಾಗಿ ವಿದ್ಯಾರ್ಥಿಗಳಲ್ಲಿ ಅಧ್ಯಯನದಲ್ಲಿ ಆಸಕ್ತಿ ಮತ್ತು ಶ್ರೇಷ್ಠತೆಯನ್ನು ಕಾಣ ಬೇಕಾದರೆ ಸಮಾಜವನ್ನು ಕಣ್ಣು ತೆರೆದು ನೇೂಡುವ ಮನೇೂಭೂಮಿಕೆ ಬೆಳೆಸಿಕೊಳ್ಳ ಬೇಕು. ರಾಜ್ಯ ಮತ್ತು ರಾಷ್ಟ್ರಮಟ್ಟದಲ್ಲಿ ನಡೆಯುವ ಪ್ರತಿಷ್ಠಿತ ಸ್ಪರ್ಧಾತ್ಮಕ ಪರೀಕ್ಷೆಗಳಾದ ಕೆಎಎಸ್, ಐಎಎಸ್ ನಂತಹ ಪರೀಕ್ಷೆಗಳು ಕಲಾ ಅಧ್ಯಯನ ವಿದ್ಯಾರ್ಥಿಗಳಿಗೆ ಹೆಚ್ಚು ಅನುಕೂಲಕರವಾಗಿದ್ದು ಈ ಸಾಧನೆ ತಮ್ಮದಾಗಿಸಲು ಇಚ್ಛಾ ಶಕ್ತಿ ಗುರಿ ಸಾಧನೆಯನ್ನು ಮೈಗೂಡಿಸಿ ಕೊಳ್ಳಬೇಕು" ಎಂದು ರಾಜ್ಯ ಶಾಸ್ತ್ರ ನಿವೃತ್ತ ಪ್ರಾಧ್ಯಾಪಕ, ರಾಜಕೀಯ ವಿಶ್ಲೇಷಕ ಪ್ರೊ.ಕೊಕ್ಕರ್ಣೆ ಸುರೇಂದ್ರನಾಥ ಶೆಟ್ಟಿ ಅಭಿಪ್ರಾಯಿಸಿದರು.
ಕಾರ್ಕಳ ಶ್ರೀ ಭುವನೇಂದ್ರ ಪದವಿ ಪೂರ್ವ ಕಾಲೇಜಿನ ಮಾನವಿಕ ಶಾಸ್ತ್ರ ವಿದ್ಯಾರ್ಥಿಗಳಿಗಾಗಿ ಹಮ್ಮಿಕೊಂಡ "ಫೌಂಡೇಷನ್ ಕೇೂರ್ಸ್ 23" ಉದ್ಘಾಟಿಸಿ ವಿಶೇಷ ಉಪನ್ಯಾಸ ಮಾಹಿತಿ ನೀಡಿದರು.
ಸಭೆಯ ಅಧ್ಯಕ್ಷತೆಯನ್ನು ಪದವಿ ಪೂರ್ವ ವಿಭಾಗದ ಪ್ರಾಂಶುಪಾಲ ಪ್ರೊ. ರಮೇಶ್ ಎಸ್.ಸಿ. ವಹಿಸಿ ಕಳೆದ ಎರಡು ವರುಷಗಳಿಂದ ಕಲಾ ವಿದ್ಯಾರ್ಥಿಗಳ ಅನುಕೂಲಕ್ಕಾಗಿ ಉನ್ನತ ಶಿಕ್ಷಣ ಉದ್ಯೋಗ ಮತ್ತು ಸ್ಪರ್ಧಾತ್ಮಕ ಪರೀಕ್ಷೆ ಎದುರಿಸುವ ನಿಟ್ಟಿನಲ್ಲಿ ಪಾಠದ ಜೊತೆಗೆ ನುರಿತ ತಜ್ಞರಿಂದ ತರಬೇತಿ ಉಪನ್ಯಾಸ ನೀಡುವ ಕಾರ್ಯಕ್ರಮ ಹಮ್ಮಿಕೊಂಡು ಬರುತ್ತಿದ್ದೇವೆ ಇದನ್ನು ವಿದ್ಯಾರ್ಥಿಗಳು ಸದಪಯೇೂಗ ಪಡಿಸಿಕೊಳ್ಳಬೇಕೆಂದು ತಿಳಿಸಿದರು.
ಫೌಂಡೇಶನ್ ಕೇೂರ್ಸ್ ಸಂಯೇೂಜಕಿ ರಾಜ್ಯ ಶಾಸ್ತ್ರ ವಿಭಾಗದ ಮುಖ್ಯಸ್ಥೆ ಸುಮಾಲಿನಿ ಜೈನ್ ಪ್ರಸ್ತಾವನೆಗೈದರು. ಕಲಾ ವಿಭಾಗದ ವಿದ್ಯಾರ್ಥಿಗಳಾದ ಡೊಮಿನಿಕ ಸುಹಾಸ್ ಸ್ವಾಗತಿಸಿದರು. ಸ್ವಾತಿ ಅತಿಥಿ ಪರಿಚಯ ನೀಡಿದರು. ನುಮಾ ಐಶಾ ವಂದಿಸಿ ದೀಕ್ಷಿತ್ ಆರ್ ನಾಯಕ್ ಕಾರ್ಯಕ್ರಮ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ
ಉಪಯುಕ್ತ ನ್ಯೂಸ್ ವಾಟ್ಸಪ್ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ