ಪುಸ್ತಕ ರೂಪದಲ್ಲಿ ಬಿಡುಗಡೆಯಾದ 'ಬ್ರೋ_ಕೋಡ್ ಸ್ಕ್ರಿಬಲ್‌'

Upayuktha
0

ಬ್ಯಾಂಕ್ ಉದ್ಯೋಗಿ ಸಚಿನ್ ಕುಳಮರ್ವ ಅವರ ತಕ್ಷಣದ 'ಹೊಳಹು'ಗಳ ಸಂಕಲನ ಕೃತಿ



ಸೋಮೇಶ್ವರ: ಕರ್ಣಾಟಕ ಬ್ಯಾಂಕ್‌ ಉದ್ಯೋಗಿ ಸಚಿನ್ ಕುಳಮರ್ವ ಬರೆದ 'bro_code_scribble' ಕೃತಿಯನ್ನು ಶನಿವಾರ (ಜುಲೈ 8)  ಬಿಡುಗಡೆ ಮಾಡಲಾಯಿತು. ಈ ಕೃತಿಯ ಸಾಫ್ಟ್‌ ಲಾಂಚ್‌ ಜೂನ್ 30ರಂದು ನಡೆದಿತ್ತು.


ಪುಟ್ಟ ಪುಟ್ಟ ಅರ್ಥಪೂರ್ಣ ನುಡಿಗಳ (Quotes) ಸಂಕಲನವೇ ಈ ಪುಸ್ತಕ. ಆಗಾಗ್ಗೆ ಹೊಳೆದ ಅರ್ಥಪೂರ್ಣ ಹೊಳಹುಗಳ ಕಿರು ವಾಕ್ಯರೂಪವೇ ಈ   'bro_code_scribble'. ಪ್ರಾರಂಭದಲ್ಲಿ ಸಾಮಾಜಿಕ ಜಾಲತಾಣಗಳಲ್ಲಷ್ಟೇ ಪೋಸ್ಟ್‌ಗಳ ರೂಪದಲ್ಲಿ ಪ್ರಕಟವಾಗುತ್ತಿದ್ದ ಪ್ರೇರಣಾದಾಯಕ ವಾಕ್ಯಗಳು ಅಲ್ಲಿ ಓದಿ ಮರೆತು ಬಿಡುವಂಥದ್ದಲ್ಲ. ಅದನ್ನೆಲ್ಲ ಸಂಕಲಿಸಿ ಈಗ ಕೃತಿ ರೂಪದಲ್ಲಿ ಪ್ರಕಟಿಸಿರುವುದು ಉತ್ತಮ ಬೆಳವಣಿಗೆ.


2018 ರಲ್ಲಿ ಪ್ರೇರಣಾದಾಯಕ ವಾಕ್ಯಗಳ ಬಗ್ಗೆ ಆಸಕ್ತಿ ಮೂಡಿದಾಗ ಹುಟ್ಟಿಕೊಂಡ ಪದಗುಚ್ಛಗಳೇ ಈ ಉಲ್ಲೇಖಗಳು.  ಕ್ರಮೇಣ ಇದು ಹಾಸ್ಯ, ಭಯಾನಕ, ನಾಟಕ, ಜೀವನ ಘಟನೆಗಳು ಮುಂತಾದ ಇತರ ಕ್ಷೇತ್ರಗಳಿಗೂ ವಿಸ್ತರಿಸಿ ಭಿನ್ನ ಆಯಾಮಗಳಲ್ಲಿ ಬೆಳೆಯಿತು.



ಸ್ವತಃ ಸಚಿನ್‌ ಅವರೇ ಪುಸ್ತಕದಲ್ಲಿ ತಮ್ಮ ಬಗ್ಗೆ ಹೇಳಿಕೊಂಡಿರುವಂತೆ, ಹಳ್ಳಿಯ ಹಿನ್ನೆಲೆಯ ಹುಡುಗನೊಬ್ಬ ಅನ್ಯ ಭಾಷೆಯಲ್ಲಿ (ಇಂಗ್ಲಿಷ್‌ನಲ್ಲಿ) ಬರೆಯುವ ಪ್ರಯತ್ನ ಮಾಡಿ, ಅದೊಂದು ಕೃತಿಯ ರೂಪದಲ್ಲಿ ಈಗ ಬಿಡುಗಡೆಯಾಗಿರುವುದು ಸ್ವಾಗತಾರ್ಹ ಬೆಳವಣಿಗೆ.


ಆಧುನಿಕ ಜಗತ್ತಿನಲ್ಲಿ ನಾನಾ ರೂಪದ ಗ್ಯಾಜೆಟ್‌ಗಳು, ಸಾಮಾಜಿಕ ಜಾಲತಾಣಗಳ ಭರಾಟೆಯ ನಡುವೆಯೂ ಅದೇ ಸಾಧನಗಳು ಮತ್ತು ಮಾಧ್ಯಮಗಳನ್ನು ಬಳಸಿಕೊಂಡು ಉತ್ತಮ ವಿಚಾರಗಳನ್ನು ಅಭಿವ್ಯಕ್ತಿಸುವ ಕೃತಿಗಳನ್ನು ಬರೆಯಬಹುದು ಎಂಬುದನ್ನು ಸಚಿನ್‌ ಅವರ ಈ ಹೊಸ ಪ್ರಯೋಗ ತೋರಿಸಿಕೊಟ್ಟಿದೆ.


ಪುಸ್ತಕದ ಬಿಡುಗಡೆ ಸಮಾರಂಭದಲ್ಲಿ ಲೇಖಕರ ಜತೆಗೆ ಅವರ ಪತ್ನಿ ಸನ್ನಿಧಿ, ಪುತ್ರಿ ಸಿಯಾ, ತಂದೆ ಸುಬ್ರಹ್ಮಣ್ಯ ಭಟ್, ತಾಯಿ ಜ್ಯೋತಿ ಕುಮಾರಿ, ಗೆಳೆಯರ ಬಳಗದ ರಾಧಿಕಾ ಎಚ್ ಎಸ್ ಮತ್ತು ವಂದನಾ ಶೆಟ್ಟಿ ಉಪಸ್ಥಿತರಿದ್ದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top