ಮಾನವನ ವಯಸ್ಸು ವರ್ಷದಿಂದ ವರ್ಷಕ್ಕೆ ಹೇಗೆ ಹೆಚ್ಚಾಗುತ್ತದೆಯೋ ಅದರಂತೆಯೇ ತಂತ್ರಜ್ಞಾನವು ದಿನದಿಂದ ದಿನಕ್ಕೆ ಬದಲಾಗುತ್ತ ಹೋಗುತ್ತದೆ. ಕೆಲವೊಂದು ಆಪ್ ಗಳು ಜನರನ್ನು ಹಾಳು ಮಾಡಲೆಂದೇ ಬಂದಿವೆ ಎನ್ನುವಂತಿದೆ. ಇಂತಹ ತಂತ್ರಜ್ಞಾನಗಳ ಸಹಾಯದಿಂದ ಮಾನವನು ತನ್ನ ಕಾಮಕ್ಕಾಗಿ ಸಾಮಜಿಕ ಜಾಲತಾಣದಲ್ಲಿ ಹಾಕಿರುವಂತಹ ವಯಕ್ತಿಕ ಚಿತ್ರಣಗಳನ್ನು ಬಳಸಿಕೊಂಡು ಹಣದ ಹೆಸರಿನಲ್ಲಿ ಆಗಿರಬಹುದು ಇಲ್ಲವೋ ಇನ್ಯಾವುದೋ ದುಡಿಮೆಯ ಹೆಸರಿನಲ್ಲಿ ವಿದ್ಯಾರ್ಥಿಗಳಿಂದ ಹಿಡಿದು ವಯೋ ವೃದ್ಧರ ವರೆಗಿನ ಜನರನ್ನು ಹಾಳುಮಾಡುತ್ತಿದೆ. ಇದರಿಂದ ಎಷ್ಟೋ ಮಂದಿ ಜನರು ತನ್ನ ಬ್ಯಾಂಕ್ ಖಾತೆಯಲ್ಲಿರುವ ಹಣವನ್ನು ಕಳೆದುಕೊಂಡಿರಬಹುದು ಇನ್ನಾ ಕೆಲವರು ಇಂತಹ ಅನಾಚಾರದಂತಹ ಕೆಲಸಕ್ಕೆ ಭಯಗೊಂಡು ತಮ್ಮ ಪ್ರಾಣವನ್ನು ಬಿಟ್ಟಿರುತ್ತಾರೆ.
ಮೊಬೈಲ್ ಪರದೆ ಮುಟ್ಟದೆಯೇ ದೂರದಿಂದಲೇ ಕುಳಿತುಕೊಂಡು ಇತರರ ಮೊಬೈಲ್‌ನಲ್ಲಿ ಬಳಸಿರುವ ಕಠಿಣವಾದ ಪಾಸ್ವರ್ಡ್ ಗಳನ್ನು ಸಹ ತೆಗೆದು ಆ ವ್ಯಕ್ತಿಗೆ ಅನುಮಾನವೂ ಬರದಂತೆ ತಾನು ಅದನ್ನು ಬಳಸಿಕೊಂಡು ಸಾಗುತ್ತಿರುತ್ತಾನೆ. ಅದರೊಂದಿಗೆ ಆತ ತೆಗೆದಿರುವ ದಾಖಲೆಯ ಮೊಬೈಲ್‌ನಲ್ಲಿ ಬರುವಂತಹ ಸಂಖ್ಯೆ ಹಾಗೂ ಇತರ ದಾಖಲೆಗಳನ್ನ ಪರಿಶೀಲಿಸುತ್ತಾ ಉಳಿದವರಿಗೂ ಈ ವ್ಯಕ್ತಿಯ ಹೆಸರಿನಲ್ಲಿ ಮೋಸದ ಕೆಲಸ ಮಾಡಲು ಮುಂದಾಗುತ್ತಾನೆ.
-ಅನನ್ಯ ಎಚ್ ಸುಬ್ರಹ್ಮಣ್ಯ
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ