ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಬೆಂಗಳೂರಿನಲ್ಲಿ ಗುರುಪೂರ್ಣಿಮಾ ಮಹೋತ್ಸವ ಸಂಪನ್ನ
ಬೆಂಗಳೂರು: ಸನಾತನ ಧರ್ಮವು ಸರ್ವಕಾಲಕ್ಕೂ ಪ್ರತಿಯೊಬ್ಬರಿಗೂ ಯಾವುದೇ ಸನ್ನಿವೇಶದಲ್ಲಿ ಉಪಯುಕ್ತವಾದಂತಹ ವೈಜ್ಞಾನಿಕವಾದ ಧರ್ಮವಾಗಿದೆ. ಪ್ರಾಚೀನ ಋಷಿಗಳು ಅನೇಕ ಯಂತ್ರೋಪಕರಣಗಳನ್ನು ಭಾರತದ ಉದ್ದಗಲಕ್ಕೂ ಸ್ಥಾಪಿಸಿದ್ದಾರೆ. ಕೇವಲ ವೈಮಾನಿಕ ಶಾಸ್ತ್ರವೊಂದರ ಬಗ್ಗೆಯೇ ಹತ್ತಾರು ಗ್ರಂಥಗಳಿವೆ, ಅವುಗಳಲ್ಲಿ 25 ಬಗೆಯ ವಿಮಾನಗಳ ಬಗ್ಗೆ ವರ್ಣನೆ ಇದೆ. ಅಷ್ಟೇ ಅಲ್ಲದೇ ಇವುಗಳ ಉಪಯೋಗದ ಬಗ್ಗೆಯೂ ಸಹ ಈ ಗ್ರಂಥಗಳಲ್ಲಿ ನೋಡಬಹುದು. ಸನಾತನ ಧರ್ಮದಲ್ಲಿ ಇಂತಹ ಅಸಂಖ್ಯಾತ ಉದಾಹರಣೆಗಳನ್ನು ನೀಡಬಹುದು, ಇಂತಹ ಶ್ರೇಷ್ಠ ಗುರುಪರಂಪರೆಯನ್ನು ಪುನರ್ಸ್ಥಾಪಿಸಲು ಪ್ರತಿಯೊಬ್ಬರೂ ಸಂಕಲ್ಪ ಮಾಡೋಣ` ಎಂದು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಚಂದ್ರೇಶ್ ಕರೆ ನೀಡಿದರು.
ಅವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ವತಿಯಿಂದ ಎಲೆಕ್ಟ್ರಾನಿಕ್ ಸಿಟಿ, ಅನಂತನಗರದ ಶ್ರೀ ಸುಧೀಂದ್ರ ಸಭಾಗ್ರಹದಲ್ಲಿ ಆಯೋಜಿಸಲಾಗಿದ್ದ ಗುರುಪೂರ್ಣಿಮಾ ಮಹೋತ್ಸವದಲ್ಲಿ ಮಾತನಾಡುತ್ತಿದ್ದರು. 100 ಕ್ಕೂ ಅಧಿಕ ಜಿಜ್ಞಾಸುಗಳು ಈ ಮಹೋತ್ಸವದಲ್ಲಿ ಉಪಸ್ಥಿತರಿದ್ದರು.
ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕು. ರಶ್ಮಿ ಪೊದ್ದಾರ್ ಇವರು ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಕಾರ್ಯದ ಪರಿಚಯವನ್ನು ತಿಳಿಸಿದರು. ಮಹರ್ಷಿ ಅಧ್ಯಾತ್ಮ ವಿಶ್ವವಿದ್ಯಾಲಯದ ಸಂಸ್ಥಾಪಕರಾದ ಪರಾತ್ಪರ ಗುರು ಡಾ. ಜಯಂತ ಆಠವಲೆಯವರ ಮಾರ್ಗದರ್ಶನದಲ್ಲಿ 64 ಕಲೆಗಳಲ್ಲಿನ ಗಾಯನ, ವಾದನ, ನೃತ್ಯ ಹಾಗೂ ನಾಟ್ಯ (ಅಭಿನಯ ಈ ಕಲೆಗಳ ಆಧ್ಯಾತ್ಮಿಕ ದೃಷ್ಟಿಕೋನ ಹಾಗೂ ಭಾರತೀಯ ಕಲೆಗಳಲ್ಲಿರುವ ಸಾತ್ತ್ವಿಕತೆಯನ್ನು ಆಧುನಿಕ ಉಪಕರಣಗಳ ಮೂಲಕ ಅಭ್ಯಾಸ ಮಾಡಲಾಗುತ್ತಿದೆ. ಇದರ ಅಂತರ್ಗತ ಭಾರತೀಯ ಗಾಯನ, ವಾದ್ಯ, ನೃತ್ಯ, ಅಭಿನಯದ ಜೊತೆಗೆ ಪಾಶ್ಚಾತ್ಯ ಗಾಯನ, ವಾದ್ಯ, ನೃತ್ಯ ಹಾಗೂ ಅಭಿನಯದ ಬಗ್ಗೆ ತುಲನಾತ್ಮಕ ಅಭ್ಯಾಸ ವನ್ನೂ ಮಾಡಲಾಗುತ್ತಿದೆ. ಭಾರತೀಯ ಸಂಗೀತದಿಂದ ವ್ಯಕ್ತಿ, ಪ್ರಾಣಿ ಹಾಗೂ ವಾತಾವರಣದ ಮೇಲೆ ಯಾವ ರೀತಿ ಪರಿಣಾಮವಾಗುತ್ತದೆ?, ಈ ವಿಷಯದಲ್ಲಿ 600 ಕ್ಕೂ ಹೆಚ್ಚು ವಿವಿಧ ಪ್ರಯೋಗಗಳನ್ನು ಮಾಡಲಾಗಿದ್ದು ಇನ್ನೂ ಇದು ಮುಂದುವರೆಯುತ್ತಿದೆ. ಈ ಪ್ರಯೋಗಕ್ಕಾಗಿ ‘ಯುನಿವರ್ಸ್‌ಲ್ ಆರಾ ಸ್ಕ್ಯಾನರ್ (ಯು.ಎ.ಎಸ್.) ಎಂಬ ಆಧುನಿಕ ಉಪಕರಣವನ್ನು ಬಳಸಲಾಗುತ್ತಿದೆ. ಈ ಉಪಕರಣದ ಮೂಲಕ ‘ಪ್ರಯೋಗಗಳಲ್ಲಿ ಭಾಗಿಯಾದ ಘಟಕಗಳ ಸಕಾರಾತ್ಮಕ ಹಾಗೂ ನಕಾರಾತ್ಮಕ ಪ್ರಭಾವಲಯಗಳ ಮೇಲೆ ಯಾವ ಪರಿಣಾಮವಾಗುತ್ತದೆ? ಎಂಬುದರ ಅಧ್ಯಯನವನ್ನು ಮಾಡಲಾಗುತ್ತಿದೆ` ಎಂದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ