ಹರಿನಾಮ ಸಂಕೀರ್ತನೆ : ಪ್ರೇಕ್ಷಕರ ಮನಸೆಳೆದ ಗಾಯನ

Upayuktha
0


ಬೆಂಗಳೂರು:
ಪವಮಾನಪುರದ ನಂಜನಗೂಡು ಶ್ರೀ ರಾಘವೇಂದ್ರ ಸ್ವಾಮಿಗಳ ಮಠದಲ್ಲಿ ಪರಮಪೂಜ್ಯ ಶ್ರೀ 1008 ಶ್ರೀ ಸುಬುಧೇಂದ್ರತೀರ್ಥ ಶ್ರೀಪಾದಂಗಳವರ ಆದೇಶಾನುಸಾರ ಜುಲೈ 27, ಗುರುವಾರ ಸಂಜೆ ಏರ್ಪಡಿಸಿದ್ದ "ಹರಿನಾಮ ಸಂಕೀರ್ತನೆ" ಕಾರ್ಯಕ್ರಮದಲ್ಲಿ ಸಿಂಧನೂರಿನ  ಸುಷ್ಮಾ ಜೋಯಿಸ್ ಅವರು ಪ್ರಸಿದ್ಧ ಹರಿದಾಸರ ಕೀರ್ತನೆಗಳಾದ "ಗಜವದನ ಬೇಡುವೆ", "ವಿಜಯರಾಯರ ಪಾದವ", "ವಾದಿರಾಜ ಮುನಿಪ", "ಅಂತರಂಗವ ತಿಳಿಸೋ", "ದಿನಕರನುದಿಸಿದನು", "ಯಾಕೆ ಮೂಕನಾದ್ಯೋ", ನಲಿದಾಡೇ ಎನ್ನ ನಾಲಿಗೆ ಮ್ಯಾಲೆ", "ಶಂಭೋ ಸ್ವಯಂಭೋ ಸಂಭವಾ", "ಜಾಣ ನೀನಹುದೋ", "ಬಾರೇ ಭಾಗ್ಯದ ನಿಧಿಯೇ", "ಬಾ ಬಾ ಭಕುತರ ಪ್ರಿಯಾ", "ಕಂಡೆ ಪಂಢರಿರಾಯನ", "ನರಸಿಂಹನ ಪಾದ ", "ರಾಮ ರಾಮ ಜಯರಾಮ", "ನಾನೇನ ಮಾಡಿದೆನೋ" ಮುಂತಾದ ಕೀರ್ತನೆಗಳನ್ನು ಪ್ರಸ್ತುತ ಪಡಿಸಿದ್ದು ಪ್ರೇಕ್ಷಕರ ಮನಸೆಳೆಯಿತು. 


ಇವರ ಗಾಯನಕ್ಕೆ ಅಮಿತ್ ಶರ್ಮಾ ಅವರ ಕೀ-ಬೋರ್ಡ್,  ಸರ್ವೋತ್ತಮ ಅವರ ತಬಲಾ ಸಾಥ್ ಇಂದ ಕಾರ್ಯಕ್ರಮಕ್ಕೆ ಇನ್ನಷ್ಟೂ ಮೆರುಗು ತಂದಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top