ಬೆಂಗಳೂರು: ಬೆಂಗಳೂರಿನ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ವಿಜಯನಗರ ರಂಗ ಚಿರಂತನ ಥಿಯೇಟರ್ ಕ್ಲಬ್ ವಿದ್ಯಾರ್ಥಿಗಳು ಡಾ. ಬೇಲೂರು ರಘುನಂದನ್ ರಚನೆ ನಿರ್ದೇಶನದ "ಅಲೆಮಾರಿ ಭಾರತ" ನಾಟಕವನ್ನು ಕಾಲೇಜಿನ ಪ್ರಾಂಶುಪಾಲರಾದ ಡಾ. ವೈ. ವೆಂಕಟೇಶಪ್ಪ ರವರು ಜಂಬೆ ಬಾರಿಸುವ ಮೂಲಕ ನಾಟಕ ಪ್ರದರ್ಶನವನ್ನು ಉದ್ಘಾಟಿಸಿದರು.
ಉದ್ಘಾಟನಾ ಕಾರ್ಯಕ್ರಮದಲ್ಲಿ, ರಂಗಸಂಘಟಕದ ಜಿಪಿಓ ಚಂದ್ರು, ಮಾಗಡಿ ಗಿರೀಶ್, ಹಿರಿಯ ಪ್ರಾಧ್ಯಾಪಕರಾದ ಮುದ್ದುಕೃಷ್ಣ, ಜಾನಪದ ಕಲಾವಿದರಾದ ವೈ.ಕೆ ಉಮಾ, ಡಾ. ಶ್ವೇತ, ಕನ್ನಡ ವಿಭಾಗದ ಮುಖ್ಯಸ್ಥರಾದ ಬೈರಪ್ಪ, ಮತ್ತು ಕಾಲೇಜಿನ ವಿದ್ಯಾರ್ಥಿ ವಿದ್ಯಾರ್ಥಿನಿಯರು ಭಾಗವಹಿಸಿದ್ದರು.
ಉದ್ಘಾಟನೆ ನಂತರ ಅಲೆಮಾರಿ ಭರತ ನಾಟಕವನ್ನು ವಿದ್ಯಾರ್ಥಿಗಳು ಬಹಳ ಅರ್ಥಪೂರ್ಣವಾಗಿ ಅಭಿನಯಿಸಿದರು. ಪ್ರಾಂಶುಪಾಲರಾದ ವೆಂಕಟೇಶಪ್ಪನವರು ಮಾತನಾಡಿ, ಕಾಲೇಜಿನ ವಿದ್ಯಾರ್ಥಿಗಳು ವಿದ್ಯಾರ್ಥಿನಿಯರು ವಿದ್ಯಾಭ್ಯಾಸದ ಜೊತೆಗೆ ಕಲೆ, ಸಾಹಿತ್ಯ, ಸಂಸ್ಕೃತಿ, ನಾಟಕ, ಜಾನಪದ, ತೊಡಗಿಸಿಕೊಳ್ಳಬೇಕು. ನಮ್ಮ ನಾಡಿನ ಸಂಸ್ಕೃತಿ ಮುಂದಿನ ತಲೆಮಾರಿಗೆ ಮುಂದಾಗಬೇಕು. ಇದರಿಂದ ಮನೋವಿಕಾಸ ಮತ್ತು ಆತ್ಮಸ್ಥೈರ್ಯ ಬರುತ್ತದೆ ಎಂದು ತಿಳಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ