ಉಬ್ರಂಗಳ ಶ್ರೀ ಧರ್ಮಶಾಸ್ತ ಸೇವಾ ಸಂಘದ ಮಹಾಸಭೆ

Upayuktha
0


ಬದಿಯಡ್ಕ:
ಶ್ರೀ ಮಹಾದೇವ ಪಾರ್ವತಿ ಶ್ರೀ ಶಾಸ್ತಾರ ದೇವಸ್ಥಾನ ಉಬ್ರಂಗಳ ಇಲ್ಲಿನ ಶ್ರೀ ಧರ್ಮಶಾಸ್ತ ಸೇವಾ ಸಂಘದ ಮಹಾಸಭೆ ಶ್ರೀ ಕ್ಷೇತ್ರದಲ್ಲಿ ನಡೆಯಿತು. ಶ್ರೀಧರ್ಮಶಾಸ್ತ್ರ ಸೇವಾ ಸಂಘದ ಅಧ್ಯಕ್ಷ ಗೋಪಾಲ್ ಉಬ್ರಂಗಳ ಅಧ್ಯಕ್ಷತೆ ವಹಿಸಿದ್ದರು. ಕಿರಣ್ ಕುಮಾರ್ ಕುಣಿಕುಳ್ಳಾಯ ಪ್ರಾಸ್ತಾವಿಕ ನುಡಿಗಳನಾಡಿದರು. ಈ ಸಂದರ್ಭದಲ್ಲಿ ಸಲಹಾ ಸಮಿತಿಯನ್ನು ರೂಪಿಸಲಾಯಿತು. ಗೌರವಾಧ್ಯಕ್ಷರಾಗಿ ಆಡಳಿತ ಮೊಕ್ತೇಸರ ಕಿಶೋರ್ ಕುಮಾರ್ ಕುಣಿಕುಳ್ಳಾಯ, ಅಧ್ಯಕ್ಷರಾಗಿ ಮಧುಸೂಧನ ಆಯರ್ ಮಂಗಳೂರು, ಪ್ರಧಾನ ಸಂಚಾಲಕರಾಗಿ ಅಧ್ಯಾಪಕ ಹರಿನಾರಾಯಣ ಎಸ್, ಸಂಚಾಲಕರಾಗಿ ಅಧ್ಯಾಪಕ ರಾಜೇಶ್ ಅಗಲ್ಪಾಡಿ ಹಾಗೂ ಸದಸ್ಯರಾಗಿ ಬಾಬು ಮಾಸ್ಟರ್, ಅಧ್ಯಾಪಕ ರಾಜಶೇಖರ್ ಪದ್ಮಾರ್, ಪ್ರಾಂಶುಪಾಲ ಸತೀಶ್ ವೈ ಆಯ್ಕೆಯಾದರು. ಸಲಹಾ ಸಮಿತಿಯ ಪದಾಧಿಕಾರಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು. 


ಹರೀಶ್ ಕುಣಿಕುಳ್ಳಾಯ ನಡುಮನೆ, ಜಯರಾಜ ಕುಣಿಕುಳ್ಳಾಯ ಪಾರೆಗದ್ದೆ, ಪ್ರಧಾನ ಕಾರ್ಯದರ್ಶಿ ಬಾಲಕೃಷ್ಣ ಸೀತಾಂಗುಳಿ ಮೊದಲಾದವರು ಭಾಗವಹಿಸಿದ್ದರು. ಸತೀಶ್ ಕುಮಾರ್ ಉಬ್ರಂಗಳ ಸ್ವಾಗತಿಸಿ, ರವಿ ಕುರುಪ್ಪ್ ಉಬ್ರಂಗಳ ಧನ್ಯವಾದವಿತ್ತರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top