‘ಸುಳ್ಳು ಸುದ್ದಿ ಕಾಲದಲ್ಲಿ ಸಂಶೋಧನೆ ಅವಶ್ಯ’-ಪ್ರೊ. ಸತೀಶ್‍ಕುಮಾರ್ ಅಂಡಿಂಜೆ

Upayuktha
0

ವಿದ್ಯಾಗಿರಿ: ‘ಸುಳ್ಳು ಸುದ್ದಿ ಮತ್ತು ಮಾಹಿತಿ ತಿರುಚುವ ಈ ಕಾಲಘಟ್ಟದಲ್ಲಿ ಸತ್ಯ ಹುಡುಕಾಡಲು ಸಂಶೋಧನೆ ಅತೀ ಅಗತ್ಯವಾಗಿದೆ’ ಎಂದು ಶಿವಮೊಗ್ಗ ಕುವೆಂಪು ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಪ್ರೊ. ಸತೀಶ್‍ಕುಮಾರ್ ಅಂಡಿಂಜೆ ಹೇಳಿದರು. 


ಆಳ್ವಾಸ್ ಕಾಲೇಜಿನ ಸ್ನಾತಕೋತ್ತರ ಪತ್ರಿಕೋದ್ಯಮ ಮತ್ತು ಸಮೂಹ ಮಾಧ್ಯಮ ವಿಭಾಗದಲ್ಲಿ ಸೋಮವಾರ ‘ಸಂಶೋಧನಾ ಚಿತ್ರಣದ ನಾವಿಕತೆ, ಪರಿಕಲ್ಪನೆ ಮತ್ತು ಪರಿಣಾಮ’ ಕುರಿತು ಅವರು ಮಾತನಾಡಿದರು. 


ಸಂಶೋಧನೆ ಬಹು ಆಯಾಮವನ್ನು ಹೊಂದಿದೆ. ನಿಮ್ಮ ಬರಹ, ನುಡಿಚಿತ್ರ, ಲೇಖನಗಳ ಸತ್ವ ಹೆಚ್ಚಿಸಲೂ ಸಂಶೋಧನೆ ಮಾಡಬಹುದು. ಸಂಶೋಧನೆ  ಸೂಕ್ಷ್ಮದೃಷ್ಟಿಕೋನವನ್ನು ಬೆಳೆಸುತ್ತದೆ. ಹೊಸ ವಿಷಯ ಹುಡುಕಲು, ಸತ್ಯಾಂಶ ಅರಿಯಲು ರಹದಾರಿ ಎಂದರು. 


ಸಂಶೋಧನೆ ಎಂದರೆ ಸತ್ಯದ ಅಥವಾ ಪ್ರಶ್ನೆಗಳಿಗೆ ಉತ್ತರದ ಹುಡುಕಾಟ. ಆ ಹುಡುಕಾಟಕ್ಕೆ ತಂತ್ರ ಮತ್ತು ವಿಧಾನವನ್ನು ಬಳಸುತ್ತದೆ ಎಂದರು. 


ವಿದ್ಯಾರ್ಥಿಗಳು ಬದುಕಿನಲ್ಲಿ ಸಂಶೋಧನಾ ಗುಣವನ್ನು ರೂಢಿಸಿಕೊಳ್ಳಬೇಕು. ಸಂಶೋಧನೆಯ ಸಂಶೋಧಕನಕ್ಕಿಂತ ಹೆಚ್ಚು ಸಮಾಜಕ್ಕೆ ಪ್ರಯೋಜನ ನೀಡಬೇಕು ಎಂದರು. 


ವಿದ್ಯಾರ್ಥಿಗಳಿಗೆ ಶೈಕ್ಷಣಿಕ ಸಂಶೋಧನಾ ವಿಷಯಗಳ ಗುಣ ಲಕ್ಷಣ, ವಿಷಯದ ಆಯ್ಕೆ, ಹಂತಗಳು ಮತ್ತು ತಂತ್ರಗಳ ಬಗ್ಗೆ ವಿವರಿಸಿದ ಅವರು, ಸಂವಾದ ನಡೆಸಿಕೊಟ್ಟರು. 


ವಿಭಾಗದ ಸಂಯೋಜಕ ಪ್ರಸಾದ್ ಶೆಟ್ಟಿ, ಸಹಾಯಕ ಪ್ರಾಧ್ಯಾಪಕ ಹರ್ಷವರ್ಧನ ಪಿ.ಆರ್. ಮಾತನಾಡಿದರು.  ಪತ್ರಕರ್ತ ಹರೀಶ್ ಆದೂರ್ ಇದ್ದರು. ವಿದ್ಯಾರ್ಥಿ ಅವಿನಾಶ್ ಕಟೀಲ್ ಕಾರ್ಯಕ್ರಮ ನಿರೂಪಿಸಿದರು. ಕವನಾ ಕಾಂತಾವರ ಅತಿಥಿಗಳನ್ನು ಪರಿಚಯಿಸಿದರು.  

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter  

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top