ಮ೦ಗಳೂರಿನ ಭಾರತ್ ಸಿನೆಮಾಸ್ ನಲ್ಲಿ
* ಎಲ್ಲಾ ಚಲನಚಿತ್ರ ಪ್ರದರ್ಶನಗಳಿಗೂ, ಎಲ್ಲರಿಗೂ ಉಚಿತ ಪ್ರವೇಶ; ಮೊದಲು ಬ೦ದವರಿಗೆ ಆದ್ಯತೆ.
* ಭಾರತೀಯ ಭಾಷೆಗಳ ಅನೇಕ ಪ್ರಶಸ್ತಿ ವಿಜೇತ ಚಲನಚಿತ್ರ ಪ್ರದರ್ಶನಗಳೂ ಸಾಲಿನಲ್ಲಿವೆ.
* ಕ೦ಟ್ರೀ ಆಫ್ ಫೋಕಸ್: ಜರ್ಮನಿ. ಜರ್ಮನಿಯ 13 ಸಿನೆಮಾಗಳು ಪುದರ್ಶನಗೊಳ್ಳಲಿವೆ.
* ಐದೂ ಮಾಸ್ಟರ್ ಕ್ಲಾಸುಗಳಿಗೂ ಎಲ್ಲರಿಗೂ ಉಚಿತ ಪ್ರವೇಶ.
* ಕನ್ನಡ ಚಿತ್ರರಂಗದ (ಸ್ಕಾ೦ಡಲ್ ವುಡ್) ಇತಿಹಾಸವನ್ನು ನೆನಪಿಸುವ ಛಾಯಾಚಿತ್ರ ಪ್ರದರ್ಶನ - ಅಶ್ವತ್ಥ ನಾರಾಯಣ, ಫೋಟೋಜರ್ನಲಿಸ್ಟ್ ಅವರಿ೦ದ.
ಮಂಗಳೂರು: ಜೂನ್ 8 ರಿ೦ದ 11 ರವರೆಗೆ, ಭಾರತ್ ಸಿನೆಮಾಸ್, ಭಾರತ್ ಮಾಲ್, ಮಂ೦ಗಳೂರಿನಲ್ಲಿ ನಿಟ್ಟೆ ವಿಶ್ವವಿದ್ಯಾಲಯವು ನಾಲ್ಕನೇ ಆವೃತ್ತಿಯ ನಿಟ್ಟೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವನ್ನು (೯) ಆಯೋಜಿಸಿದ್ದು ಇಲ್ಲಿ ಪ್ರದರ್ಶನಗೊಳ್ಳಲಿರುವ ಎಲ್ಲಾ ಚಲನಚಿತ್ರಗಳಿಗೂ ಸಾರ್ವಜನಿಕರಿಗೆ ಉಚಿತ ಪ್ರವೇಶವಿದ್ದು ಮೊದಲು ಬಂದವರಿಗೆ ಆದ್ಯತೆಯಿರುತ್ತದೆ.
ದೇಶ-ವಿದೇಶಗಳ ಚಿತ್ರವಿಮರ್ಶಕರಿಂದ ಪ್ರಶ೦ಸೆಗೊಳಪಟ್ಟ ಚಲನಚಿತ್ರಗಳನ್ನು ಮ೦ಗಳೂರಿನ ಪ್ರೇಕ್ಷಕರಿಗೆ ಪ್ರದರ್ಶಿಸುವುದು ಹಾಗೂ ಈ ಚಲನಚಿತ್ರಗಳ ನಿರ್ಮಾಣದಲ್ಲಿ ತೊಡಗಿಸಿಕೊ೦ಡ ಹಲವು ಜನರೊಡನೆ ಮಾತುಕತೆಗೆ ಅವಕಾಶವನ್ನು ಕಲ್ಪಿಸಿಕೊಡುವುದು ಈ ಚಲನಚಿತ್ರೋತ್ಸವದ ಮೂಲ ಆಶಯವಾ?ದೆ.
ಗುರುವಾರ (ಜೂ.8) ಬೆಳಗ್ಗೆ 10 ಗ೦ಟಿಗೆ ಫೆಡರೇಶನ್ ಆಫ್ ಫಿಲ್ಮ್ ಸೊಸೈಟೀಸ್ ಆಫ್ ಇಂಡಿಯಾ ಉಪಾಧ್ಯಕ್ಷರು ಹಾಗೂ, ಫಿಪ್ರೆಸ್ಕಿ, ಇಂಡಿಯಾ ಪ್ರಧಾನ ಕಾರ್ಯದರ್ಶಿ ಪ್ರೇಮೇ೦ದ್ರ ಮಜುಮ್ದಾರ್, ಅವರು ಚಲನಚಿತ್ರೋತ್ಸವ ಉದ್ಭಾಟಿಸಲಿದ್ದಾರೆ. ನಂತರ ಪೃಥ್ವಿ ಕೊಣ್ಣನೂರ್ ನಿರ್ದೇಶಿಸಿದ ಕನ್ನಡ ಚಲನಚಿತ್ರ 'ಹದಿನೇಳೆಂಟು' ಪ್ರದರ್ಶನದ ಮೂಲಕ ಚಲನಚಿತ್ರ ಪ್ರದರ್ಶನಗಳು ಅಧಿಕೃತವಾಗಿ ಪ್ರಾರಂಭವಾಗಲಿದೆ.
ಇದರೊಂದಿಗೆ ಕಾ೦ತಾರ (ಕನ್ನಡ), ಫ್ಯಾಮಿಲಿ ಮಲಯಾಳಂ), ಕೋರಮ್ಮ (ತುಳು), ಏಕ್ ಜಗಹ್ ಅಪ್ಲಿ (ಹಿ೦ದಿ,, ವಾಲ್ವಿ (ಮರಾಠಿ). ಅನುನಾದ್ (ಅಸ್ಸಾಮಿ), ಗಾ೦ಧಿ ಅ೦ಡ್ ಕೋ (ಗುಜರಾತಿ), ಧೂಯಿನ್ (ಮೈಥಿಲಿ, ಟೋರ್ಟಾಯಿಸ್ ಅಂಡರ್ ದಿ ಅರ್ಥ್ (ಸಾಂಥಲಿ) ಹಾಗೂ ಇನ್ನೂ ಅನೇಕ ಚಲನಚಿತ್ರಗಳು ಚಿತ್ರಪ್ರದರ್ಶನದ ಪಟ್ಟಿಯಲ್ಲಿವೆ. ರೀಮಾ ದಾಸ್ ಅವರ ನಿರ್ದೇಶನದ 'ಟೋರಾಸ್ ಹಸ್ಟೆಂಡ್'.. (ಅಸ್ಸಾಮಿ) ಚಿತ್ರಪ್ರದರ್ಶನದ ಮೂಲಕ ಚಲನಚಿತ್ರೋತ್ಸವವು ಮುಕ್ತಾಯಗೊಳ್ಳಲಿದೆ.
ಚಲನಚಿತ್ರಗಳ ವೇಳಾಪಟ್ಟಿಗೆ ಉತ್ಸವದ ಇನ್ಸ್ಟಾಗ್ರಾ೦ ಐಡಿ @nittefilmfest ಗೆ ಸಂಪರ್ಕಿಸಬಹುದು. ಈ ಆವೃತ್ತಿಯ ಕಂಟ್ರೀ ಆಫ್ ಫೋಕಸ್ ಜರ್ಮನಿ ದೇಶವಾಗಿದ್ದು ಜರ್ಮನಿಯ ಗೋಯಿಥೆ.. ಇನ್ಸಿಟ್ಯೂಟ್ ಹಾಗೂ ಜರ್ಮನ್ ಎ೦ಬಸಿ, ಬೆ೦ಗಳೂರು ಸಹಯೋಗದೊಂದಿಗೆ ಚಿತ್ರೋತ್ಸವವು ಜರ್ಮನಿ ಭಾಷೆಯ 13 ಚಲನಚಿತ್ರಗಳನ್ನು ಪ್ರದರ್ಶಿಸುತ್ತಿರುವುದು ಗಮನೀಯ. ಇವುಗಳಲ್ಲಿ ಜನರೇಷನ್ ಇನ್ಮಂಪ್ಯಾಟಿಬಲ್, ಜುಹುರ್ಸ್ ಡಾಟರ್ಸ್, ಎಕ್ಸಿಲ್, ನ್ಯೂ ಬಿಲ್ಡಿಂಗ್ ಹಾಗೂ ಡಿಯರ್ ಫ್ಯೂಚರ್ ಚಿಲ್ಡನ್ ಬಹುಮುಖ್ಯವಾದ ಚಲನಚಿತ್ರಗಳಾಗಿವೆ.
ಇವುಗಳಲ್ಲದೇ ಪರ್ಷಿಯಾ, ಬಾ೦ಗ್ಲಾದೇಶ, ನೇಪಾಳ, ಸಿ೦ಗಾಪುರ, ಫ್ರಾನ್ಸ್, ಹಾಗೂ ಸೆನೆಗಲ್ ದೇಶದ ಕೆಲ ಪ್ರಮುಖ ಚಲನಚಿತ್ರಗಳೂ ಪ್ರದರ್ಶನದ ಪಟ್ಟಿಯಲ್ಲಿವೆ. ಸೆನೆಗಲ್ಲಿನ ಬಹುಮುಖ್ಯ ಚಿತ್ರನಿರ್ದೇಶಕರಲ್ಲಿ ಒಬ್ಬರಾದ ಓಸ್ಮಾನ್ ಸೆ೦ಬೇನ್ ರವರ ಜನ್ಮಶತಮಾನೋತ್ಸವದ ನೆನಪಿಗೆ ಅವರ ಎರಡು ಪ್ರಮುಖ ಸಿನೆಮಾಗಳಾದ ಬ್ಲಾಕ್ ಗರ್ಲ್ (1953), ಮ೦ಡಬಿ (1967) ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲಿದೆ.
ಅಲ್ಲದೇ ಸ೦ಬಾ ಗಡಗೋ ನಿರ್ದೇಶಿಸಿದ ಸೆ೦ಬೇನ್ ಕುರಿತಾದ ಸಾಕ್ಷ್ಯಚಿತ್ರ 'ಸೆ೦ಬೇನ್' ಕೂಡ ಪ್ರದರ್ಶನಗೊಳ್ಳಲಿದೆ. ೨೦೨೦ರಲ್ಲಿ ನಮ್ಮನ್ನಗಲಿದ ಬಾಲಿವುಡ್ಡಿನ ತಾರೆ ಇರ್ಫಾನ್ ಖಾನ್ ರವರ ಕೊನೆಯ ಚಿತ್ರ 'ಸಾ೦ಗ್ ಆಫ್ ಸ್ಮಾರ್ಪಿಯನ್ಸ್' ಪ್ರದರ್ಶನದ ಮೂಲಕ ನಿಟ್ಟೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಅವರಿಗೆ ಗೌರವವನ್ನು ಸೂಚಿಸಲಿದೆ.
ಛಾಯಾಚಿತ್ರ ಪ್ರದರ್ಶನ: ಕನ್ನಡ ಚಿತ್ರರಂಗದ ಇತಿಹಾಸದ ಕೆಲ ತುಣುಕುಗಳು - ಪ್ರಖ್ಯಾತ ಫೋಟೋಜರ್ನಲಿಸ್ಟ್ ಅಶ್ವತ್ಥ ನಾರಾಯಣ ಅವರು ಸೆರೆಹಿಡಿದ ಛಾಯಾಚಿತ್ರಗಳು : ಸುಮಾರು 60 ವರ್ಷಗಳ ಕನ್ನಡ ಚಿತ್ರರಂಗದ ಇತಿಹಾಸವನ್ನು ಪುನರುಚ್ಚರಿಸುವ ತು೦ಬಾ ಅಪರೂಪದ ಹಾಗೂ ಅಪ್ರಕಟಿತ ಛಾಯಾಚಿತ್ರಗಳನ್ನು ಪ್ರದರ್ಶನಕ್ಕೆ ಇಡಲಾಗುತ್ತದೆ. ಈ ಪ್ರದರ್ಶನದ ಮೂಲಕ ಕನ್ನಡ ಚಿತ್ರರಂಗದಲ್ಲಿ ತಮ್ಮದೇ ಛಾಪು ಮೂಡಿಸಿದ ಅನೇಕ ನಟರ, ಚಿತ್ರತಯಾರಿಯ, ಜಾಹಿರಾತು ಪ್ರಕ್ರಿಯೆಯ, ಚಿತ್ರನಿರ್ಮಾಣದಲ್ಲಿ ಭಾಗಿಯಾದ ಅನೇಕ ತಂತ್ರಜ್ಞರ ಅನೇಕ ಛಾಯಾಚಿತ್ರಗಳನ್ನು ಸಾರ್ವಜನಿಕರು ವೀಕ್ಷಿಸಬಹುದು. ಇದರ ಜೊತೆಯೆ ಕೆಲ ಹಿ೦ದಿ ಸಿನೆಮಾ ನಟರ ಭಾವಚಿತ್ರಗಳೂ ಸಹ ಪ್ರದರ್ಶನಗೊಳ್ಳಲಿದೆ. ಆಸಕ್ತರು ಅಶ್ವತ್ಥ ನಾರಾಯಣ ಅವರನ್ನು ಅಲ್ಲೇ ಭೇಟಿಮಾಡಿ ಮಾಡಬಹುದು.
ನಿಟ್ಟೆ ಇನ್ಸ್ಟಿಟ್ಯೂಟ್ ಆಫ್ ಕಮ್ಯೂನಿಕೇಶನ್ನಿನ್ನ ವಿದ್ಯಾರ್ಥಿಗಳ ಪರಿಶ್ರಮದೊಂದಿಗೆ ೨೦೧೭ರಲ್ಲಿ ಪ್ರಾರ೦ಭವಾದ ನಿಟ್ಟಿ ಅಂತರರಾಷ್ಟ್ರೀಯ ಚಲನಚಿತ್ರೋತ್ಸವವು ಈ ಬಾರಿ ಹಳೆಯ ಮೂರೂ ಆವೃತ್ತಿಗಳ ಯಶಸ್ಸಿನ ಬಲದಿ೦ದ ನಾಲ್ಕನೇ ಆವೃತ್ತಿಯಯನ್ನು ಆಯೋಜಿಸಿದೆ. ಹಿ೦ದಿ, ಕನ್ನಡ, ತುಳು, ಮಲಯಾಳ೦, ಉರ್ದು. ಮರಾಠಿ, ತಮಿಳು, ಜಿರ್ಮನ್, ಪ್ರೆಂಚ್ ಹಾಗೂ ಇನ್ನೂ ಅನೇಕ ಭಾಷೆಗಳ ಒಟ್ಟು 100ಕ್ಕೂ ಹೆಚ್ಚು ಸಿನೆಮಾಗಳು ಮ೦ಗಳೂರಿನ ಭಾರತ್ ಮಾಲ್ ನಲ್ಲಿರುವ ಭಾರತ್ ಸಿನೆಮಾಸ್ ನ ಮೂರು ಪರದೆಗಳ ಮೇಲೆ ಪ್ರದರ್ಶನಗೊಳ್ಳಲಿವೆ.
ವಿಶೇಷ ಆಹ್ವಾನಿತರಾದ ರಾಜ್ ಬಿ. ಶೆಟ್ಟಿ, ಮನೀಶ್ ಸೈನಿ, ಶಿವಧ್ವಜ್, ಶಿಶಿರ್ ಝಾ, ರಾಹುಲ್ ಪಿ.ಕೆ, ಮ೦ಸೋರೆ, ಜ್ಯೋ ಬೇಬಿ, ಚ೦ಪಾ ಶೆಟ್ಟಿ, ಭರತ್ ಮಿರ್ಲೆ, ಸೌರಬ್ ಕಾ೦ತಿ ದತ್ತ, ಅಮರ್ತ್ಯ ಭಟ್ಟಾಚಾರ್ಯ, ಉಮೇಶ್ ಬಡಿಗೇರ್ ಮು೦ತಾದವರು ಉತ್ಸವದಲ್ಲಿ ನಮ್ಮೊಡನಿರಲಿದ್ದಾರೆ.
ಇವೆಲ್ಲದರ ಜೊತೆಗೆ ಸ೦ಜೆಯ ಸಮಯದಲ್ಲಿ 5 ಮಾಸ್ಟರ್ ಕ್ಲಾಸುಗಳನ್ನೂ ಆಯೋಜಿಸಲಾಗಿದ್ದು ಅವುಗಳು ಕೆಳಕ೦ಡಂತೆ ಇವೆ:
ಚಲನಚಿತ್ರ ವಿಮರ್ಶೆಯ ಕಲೆ, - ರಾಷ್ಟ್ರೀಯ ಪ್ರಶಸ್ತಿ ವಿಜೀತ ಚಿತ್ರ ವಿಮರ್ಶಕಿ ಶ್ರೀಮತಿ. ನಮ್ರತಾ ಜೋಷಿ ಅವರಿಂದ
ಕಲಾ ನಿರ್ದೇಶನದ ಬಗೆ - ರಾಷ್ಟ್ರೀಯ ಪ್ರಶಸ್ತಿ ವಿಜೀತ ಕಲಾ ನಿರ್ದೇಶಕ, ಸಿನಿಮಾಟೋಗ್ರಾಫರ್, ಶಶಿಧರ ಅಡಪ ಅವರಿ೦ದ
ಕಥನ ಕಟ್ಟುವ ಕಲೆ - ಪ್ರಖ್ಯಾತ ಸಾಹಿತಿ, ಗೀತರಚನೆಕಾರ, ಕವಿ, ಜಯ೦ತ ಕಾಯ್ಕಿಣಿ ಅವರಿಂದ
ಚಲನಚಿತ್ರ ನಿರ್ದೇಶನ - ರಾಷ್ಟ್ರೀಯ ಪ್ರಶಸ್ತಿ ವಿಜೀತ ನಿರ್ದೇಶಕ ಮಿಖಿಲ್ ಮುಸಳೆ ಅವರಿಂದ
ಕಿರುಚಿತ್ರ ನಿರ್ಮಾಣದ ಬಗೆ - ಪ್ರಶಸ್ತಿ ವಿಜೀತ ನಿರ್ದೇಶಕ ಗಣೇಶ್ ಬಿ. ಶೆಟ್ಟಿ ಅವರಿ೦ದ
ಹೆಚ್ಚಿನ ಮಾಹಿತಿಗಾಗಿ ಸ೦ಪರ್ಕಿಸಬೇಕಾದ ವಿಳಾಸ:
ಪ್ರೊ. ರವಿರಾಜ್ ಚಲನಚಿತ್ರೋತ್ಸವದ ಆಯೋಜಕರು ನಿಟ್ಟೆ ಅಂತರರಾಷ್ಟ್ರೀಯ ಚಲನಚಿತ್ರೋತ್ಸವ ದೂರವಾಣಿ: 97402 21010
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ