ಉಜಿರೆ: ಶ್ರೀ ಧ.ಮ. ಕಾಲೇಜು ಉಜಿರೆ ರಾಜ್ಯಶಾಸ್ತ್ರ ವಿಭಾಗದಿಂದ ವಿದ್ಯಾರ್ಥಿಗಳಿಗೆ ಕಾರ್ಯಕ್ಷೇತ್ರ ಅನುಭವಕ್ಕಾಗಿ ವಿವಿಧ ಸರ್ಕಾರಿ ಕಛೇರಿಗಳಿಗೆ ಭೇಟಿಯು ಜೂ.6 ರಂದು ನಡೆಯಿತು.
ಬೆಳ್ತಂಗಡಿ ಪೊಲೀಸ್ ಠಾಣೆಯ ವೃತ್ತ ನಿರೀಕ್ಷಕ ಸತ್ಯನಾರಾಯಣ ಕೆ ವಿದ್ಯಾರ್ಥಿಗಳಿಗೆ ಪೊಲೀಸರ ಕಾರ್ಯ ವಿಧಾನ ಹಾಗೂ ಕಾನೂನು ಪ್ರಕ್ರಿಯೆಗಳನ್ನು ವಿವರಿಸಿದರು. ಪಿಎಸ್‌ಐ ಹರೀಶ್ ಎಂ.ಆರ್ ಪೊಲೀಸ್ ಇಲಾಖೆಯಲ್ಲಿರುವ ಉದ್ಯೋಗಾವಕಾಶಗಳ ಮಾಹಿತಿ ನೀಡಿ ವಿದ್ಯಾರ್ಥಿಗಳ ಪ್ರಶ್ನೆಗಳಿಗೆ ಉತ್ತರಿಸಿದರು.
ಉಪನೋಂದಣಾಧಿಕಾರಿ ಕಛೇರಿಯಲ್ಲಿ ವಿಧ್ಯಾರ್ಥಿಗಳನ್ನುದ್ದೇಶಿಸಿ ಮಾತನಾಡಿದ ನೋಂದಣಾಧಿಕಾರಿ ನಾಗರಾಜ್, ಕಛೇರಿಯಲ್ಲಿ ನಡೆಯುವ ನೋಂದಣಿ ಪ್ರಕ್ರಿಯೆಗಳನ್ನು ವಿವರಿಸಿದರು.
ನ್ಯಾಯಾಲಯಗಳ ಸಂಕೀರ್ಣಕ್ಕೆ ಬೇಟಿ ನೀಡಿದ ವಿದ್ಯಾರ್ಥಿಗಳು ಕ್ರಿಮಿನಲ್ ಹಾಗೂ ಸಿವಿಲ್ ಕೋರ್ಟ್‌ಗಳ ಕಲಾಪಗಳನ್ನು ವೀಕ್ಷಿಸಿ ನ್ಯಾಯಾಂಗದ ಕಾರ್ಯವಿಧಾನಗಳ ಅರಿವನ್ನು ಪಡೆದುಕೊಂಡರು.
ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಡಾ. ಶಲಿಪ್ ಎ.ಪಿ, ಉಪನ್ಯಾಸಕ ನಟರಾಜ್ ಎಚ್. ಕೆ ಹಾಗೂ ಹಿರಿಯ ವಕೀಲೆ ಸ್ವರ್ಣಲತಾ ವಿದ್ಯಾರ್ಥಿಗಳಿಗೆ ಮಾರ್ಗದರ್ಶನ ನೀಡಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ