ಪಿಲಿಕುಳ: ಬಿಎಎಸ್‌ಎಫ್‌ ಸಹಯೋಗದಲ್ಲಿ ವಿಶ್ವ ಪರಿಸರ ದಿನಾಚರಣೆ

Upayuktha
0

ಮಂಗಳೂರು: ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದದಲ್ಲಿ ಮಂಗಳವಾರ (ಜೂ.6) ವಿಶ್ವ ಪರಿಸರ ದಿನಾಚರಣೆಯ ಪ್ರಯುಕ್ತ ಒಂದು ದಿನದ ಕಾರ್ಯಕ್ರಮವನ್ನು ಬಿಎಎಸ್‌ಎಫ್‌ ಇಂಡಿಯಾ ಲಿಮಿಟಿಡ್‌ ಇವರ ಸಹಯೋಗದೊಂದಿಗೆ ಹಮ್ಮಿಕೊಳ್ಳಲಾಗಿತ್ತು.


ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಹಿರಿಯ ಪರಿಸರ ಅಧಿಕಾರಿ ಡಾ. ರವಿ ಇವರು ಉದ್ಭಾಟಕರಾಗಿ, ಬಿಎಎಸ್‌ಐಫ್‌ ಇಂಡಿಯಾ ಲಿಮಿಟೆಡ್‌ನ ಶ್ರೀನಿವಾಸ್‌ ಪ್ರಾಣೇಶ್‌, ಮುಖ್ಯ ಅತಿಥಿಗಳಾಗಿ, ಪಿಲಿಕುಳ ಅಭಿವೃದ್ಧಿ ಪ್ರಾಧಿಕಾರದ ಆಯುಕ್ತರಾದ ಅಭಿಷೇಕ್‌ ವಿ. ಕೆಎಎಸ್‌ ಅಧ್ಯಕ್ಷತೆ ವಹಿಸಿದ್ದರು. ಆದಿನಾಥ ಐಆರ್‌ಎಸ್‌ ಇವರು ಉಪಸ್ಥಿತರಿದ್ದರು. ಜಿಲ್ಲೆಯ ಆಯ್ದ ಪ್ರೌಢ ಶಾಲೆಗಳ ಸುಮಾರು 200 ವಿದ್ಯಾರ್ಥಿಗಳು ಹಾಗೂ ಅಧ್ಯಾಪಕರು ಭಾಗವಹಿಸಿದರು.


ಉದ್ಘಾಟಕರು ಮತ್ತು ಅತಿಥಿಗಳು ಸಸಿಗಳನ್ನು ನೆಡುವ ಮೂಲಕ ಕಾರ್ಯಕ್ರಮಕ್ಕೆ ಚಾಲನೆ ನೀಡಿದರು. ನಂತರ ನಡೆದ ಕಾರ್ಯಕ್ರಮದಲ್ಲಿ ಡಾ. ರವಿ ಮಾತನಾಡುತ್ತಾ, ಪ್ರಕೃತಿಯ ತಾಳ್ಮೆಯ ಕಟ್ಟೆಯೊಡೆದರೆ ತನಗೆ ತಾನೆ ಮರುಜನ್ಮ ನೀಡಲು ಕೋವಿಡ್‌ನಂತಕಹ ಪರಿಸ್ಥಿತಿಯನ್ನು ತಂದೊಡ್ಡುತ್ತದೆ. ಸುನಾಮಿಯಂತಹ ದುರಂತಗಳು ಸಂಭವಿಸಿದಾಗ ನಾವು ಸಮುದ್ರಕ್ಕೆ ಸೇರಿಸಿದ ಪ್ಲಾಸ್ಟಿಕ್‌ ರಾಶಿಯನ್ನು ಮರಳಿ ದಡಕ್ಕೆ ತಳ್ಳುತ್ತದೆ ಎಂದರು. ಪರಿಸರದ ಸಂಪನ್ಮೂಲಗಳನ್ನು ಸುರಕ್ಷಿತವಾಗಿ ಬಳಸಿ ಮುಂದಿನ ಜನಾಂಗಕ್ಕೆ ಅಷ್ಟೇ ಜತನವಾಗಿ ಬಿಟ್ಟುಕೊಡುವುದು ನಮ್ಮೆಲ್ಲರ ಜವಾಬ್ದಾರಿಯಾಗಿದೆ ಎಂದು ಅವರು ನುಡಿದರು.


ಶ್ರೀನಿವಾಸ್‌ ಪ್ರಾಣೇಶ್‌ ಮಾತಾನಾಡುತ್ತಾ, ಪ್ರಾಸ್ಟಿಕ್‌ ಬಳಕೆಯನ್ನು ಕಡಿಮೆ ಮಾಡಿ ಪರ್ಯಾಯ ಮಾರ್ಗಗಳನ್ನು ಕಂಡುಕೊಳ್ಳಬೇಕು. ಪ್ರಾಸ್ಟಿಕ್‌ ಬ್ಯಾಗ್‌ಗಳ ಬದಲು ಬಟ್ಟೆಯ ಬ್ಯಾಗ್‌ಗಳನ್ನು ಉಪಯೋಗಿಸಿ ಪ್ರಕೃತಿಯನ್ನು ಪ್ರಾಸ್ಟಿಕ್‌ ಮಾಲಿನ್ಯದಿಂದ ಪಾರು ಮಾಡಬೇಕೆಂದರು.


ಅಭಿಷೇಕ್‌ ವಿ. ಅಧ್ಯಕ್ಷೀಯ ನುಡಿಗಳನ್ನಾಡುತ್ತಾ, ಪ್ರಾಸ್ಟಿಕ್‌ ಬಳಕೆಯಲ್ಲಿ 3ಆರ್‌ ಸೂತ್ರವಾದ ರೆಡ್ಯುಸ್‌, ರೀಯೂಸ್‌ ಮತ್ತು ರಿಸೈಕಲ್‌ಗಳನ್ನು ಅಳವಡಿಸಿಕೊಳ್ಳಬೇಕು, ಶಕ್ತಿಯ ಸಾಂಪ್ರದಾಯಿಕವಲ್ಲದ ಆಕರಗಳ ಬಳಕೆಯನ್ನು ಹೆಚ್ಚಿಸಿ ಸಾಂಪ್ರದಾಯಿಕ ಶಕ್ತಿ ಸಂಪನ್ಮೂಲಗಳ ಬಳಕೆಯನ್ನು ನಿಯಂತ್ರಣದಲ್ಲಿಡಬೇಕೆಂದರು.


ನಂತರ ನಡೆದ ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳಿಗೆ ಲಿಖಿತ ರಸಪ್ರಶ್ನೆ, ಪ್ರಬಂಧ, ಚಿತ್ರಕಲೆ ಮತ್ತು ಆಶುಭಾಷಣ ಸ್ಪರ್ಧೆಯನ್ನು ಏರ್ಪಡಿಸಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ನಡೆದ ಸಮಾರೋಪ ಸಮಾರಂಭದಲ್ಲಿ ಭಾಗವಹಿಸಿದ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹಂಚಿಕೊಂಡರು.


ಹಿರಿಯ ವಿಜ್ಞಾನಿ, ಡಾ. ಸೂರ್ಯ ಎನ್‌. ಆರ್‌. ಸ್ಪರ್ಧೆಗಳಲ್ಲಿ ವಿಜೇತರಿಗೆ ಬಹುಮಾನ ಮತ್ತು ಪ್ರಮಾಣ ಪತ್ರಗಳನ್ನು ವಿತರಿಸಿದರು. ಕಾರ್ಯಕ್ರಮವನ್ನು ಪಿಲಿಕುಳ ಪ್ರಾದೇಶಿಕ ವಿಜ್ಞಾನ ಕೇಂದ್ರದ ಕ್ಯುರೇಟರ್‌ ಜಗನ್ನಾಥ್‌ ಕಾರ್ಯಕ್ರಮ ನಿರ್ವಹಿಸಿದರು. ಪಿಲಿಕುಳ ಅಭಿವೃದ್ಧಿ ಪ್ರಧಾನ ವಿಜ್ಞಾನಿ ಡಾ. ಎಚ್‌.ಎಸ್‌. ಶೆಣೈ ಸ್ವಾಗತಿಸಿದರೆ, ವೈಜ್ಞಾನಿಕ ಅಧಿಕಾರಿ ರಾಮಕೃಷ್ಣ ಮರಾಟಿ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top