ಸಾಹಿತ್ಯವೆಂಬುದು ಭಾವನೆಗಳ ಸ್ಪುರಣೆ, ಇದು ಗತಿಬಿಂಬ, ಪ್ರತಿಬಿಂಬ, ಸ್ಥಿತಿಬಿಂಬವಾಗಿದೆ: ವಿನಯ್ ಎನ್ ಎಸ್

Upayuktha
0

                ಎಸ್.ಡಿ.ಎಮ್ ಕಾಲೇಜಿನಲ್ಲಿ ಆಂಗ್ಲ ವಿಭಾಗದಿಂದ ಅಧ್ಯಯನ ವಿನಿಮಯ ಕಾರ್ಯಕ್ರಮ 


ಉಜಿರೆ:
ಸಾಹಿತ್ಯವೆಂಬುದು ಭಾವನೆಗಳ ಸ್ಪುರಣೆ, ಇದು ಗತಿಬಿಂಬ, ಪ್ರತಿಬಿಂಬ, ಸ್ಥಿತಿಬಿಂಬವಾಗಿದೆ. ಸಾಹಿತ್ಯದ ಬಗೆಗಿನ ಒಲವನ್ನು ವಿದ್ಯಾರ್ಥಿಗಳಿಗೆ ನೀಡುವುದರ ಜೊತೆ ಇಂಗ್ಲಿಷ್ ಸಾಹಿತಿ ಜಾರ್ಜ್ ಆರ್ವೆಲ್'ರ ಸಾಹಿತ್ಯದ ಬಗ್ಗೆ ಸರಕಾರಿ ಪ್ರಥಮ ದರ್ಜೆ ಕಾಲೇಜ್'ನ ಸಹಾಯಕ ಪ್ರಾದ್ಯಾಪಕ ವಿನಯ್ ಎನ್ ಎಸ್ ಮಾಹಿತಿ ನೀಡಿದರು.


ಉಜಿರೆಯ ಶ್ರೀ.ಧ.ಮ ಕಾಲೇಜಿನಲ್ಲಿ ಆಂಗ್ಲ ಮಾಧ್ಯಮ ವಿಭಾಗವು ಏರ್ಪಡಿಸಿದ್ದ ಅಧ್ಯಯನ ವಿನಿಮಯ ಕಾರ್ಯಕ್ರಮದಲ್ಲಿ ಇವರು ಮಾತನಾಡುತ್ತಿದ್ದರು.


ಶಿಕ್ಷಣದಲ್ಲಿ ಸೃಜನಶೀಲತೆ ಮತ್ತು ಕ್ರಿಯಾತ್ಮಕತೆ ಮುಖ್ಯ ಈ ನಿಟ್ಟಿನಲ್ಲಿ ನಮ್ಮ ಕಾಲೇಜಿನ ಆಂಗ್ಲ ವಿಭಾಗವು ವಿದ್ಯಾರ್ಥಿಗಳಿಗೆ ಪಠ್ಯ ಮತ್ತು ಸಹ ಶಿಕ್ಷಣದಲ್ಲಿ ತೊಡಗಿಕೊಳ್ಳಲು ವಿಫುಲ ಅವಕಾಶಗಳನ್ನು ನೀಡಿದೆ. ಶೈಕ್ಷಣಿಕ ವಡಂಬಡಿಕೆಯಿಂದ ಸಮೀಪ ಕಾಲೇಜುಗಳನ್ನು ಒಳಗೊಂಡು ವಿಸ್ಕ್ರತವಾದ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳುತ್ತಿರುವುದು ಶ್ಲಾಘನೀಯ ಎಂದು ಎಸ್.ಡಿ.ಎಂ ಕಾಲೇಜಿನ ಪ್ರಾಂಶುಪಾಲ ಬಿ.ಎ ಕುಮಾರ್ ಹೆಗಡೆ ಅಭಿಪ್ರಾಯಪಟ್ಟರು.


ಈ ಸಂದರ್ಭದಲ್ಲಿ ವಿವೆಕಾನಂದ ಕಾಲೇಜ್ ಪುತ್ತೂರು , ಕೆ.ಎಸ್.ಎಸ್ ಕಾಲೇಜ್ ಸುಬ್ರಹ್ಮಣ್ಯ , ಎಸ್.ವಿ.ಎಸ್ ಕಾಲೇಜ್ ಬಂಟ್ವಾಳ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಹದಿನೈದಕ್ಕೂ ಹೆಚ್ಚಿನ ವಿದ್ಯಾರ್ಥಿಗಳು ಸಂಶೋಧನಾ ಪತ್ರಗಳನ್ನು ಮಂಡಿಸಿದರು. ಹಾಗೂ ಇಂಗ್ಲಿಷ್ ನಾಟಕವನ್ನು ವಿದ್ಯಾರ್ಥಿಗಳು ಪ್ರದರ್ಶಿಸಿದರು.


ಈ ಕಾರ್ಯಕ್ರಮದಲ್ಲಿ ಆಂಗ್ಲ ವಿಭಾಗದ ಮುಖ್ಯಸ್ಥ ಜಿ.ಆರ್ ಭಟ್, ವಿಭಾಗದ ಸಹಪ್ರಾದ್ಯಾಪಕರು ಹಾಗೂ ಪ್ರೊಫೆಸರ್ ಗೋವಿಂದ ಉಪಸ್ಥಿತರಿದ್ದರು. ವಿದ್ಯಾರ್ಥಿಗಳಾದ ಖುಷಿ ಕುಮಾರ್, ಮೌಲ್ಯಶ್ರೀ ಕಾರ್ಯಕ್ರಮ ನಿರೂಪಿಸಿದರು. ಮಯೂರಿ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top