ಬಲಿಷ್ಠ ಸಮಾಜ ನಿರ್ಮಾಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರಮುಖ್ಯ : ಸೋನಿಯಾ ಯಶೋವರ್ಮ

Upayuktha
0

         ಉಜಿರೆ ಧೀಮತಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ

ಉಜಿರೆ: ಬಲಿಷ್ಠ ಸಮಾಜದ ನಿರ್ಮಾಣದಲ್ಲಿ ಮಹಿಳಾ ಸಂಘಟನೆಗಳ ಪಾತ್ರ ಅತ್ಯಂತ ಪ್ರಮುಖವಾಗಿದೆ ಎಂದು ಉಜಿರೆ ಧೀಮತಿ ಜೈನ ಮಹಿಳಾ ಸಮಾಜದ ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ದಲ್ಲಿ ಧೀಮತಿ ಮಹಿಳಾಸಮಾಜದ ಗೌರವಾಧ್ಯಕ್ಷರಾದ ಸೋನಿಯಾ ಯಶೋವರ್ಮ ಅಭಿಪ್ರಾಯಪಟ್ಟರು. ಎಲ್ಲರೂ ಸಂಘದ ಚಟುವಟಿಕೆಯಲ್ಲಿ ಸಕ್ರಿಯವಾಗಿ ತೊಡಗಿಕೊಂಡರೆ ಸಮುದಾಯವನ್ನು ಬಲಗೊಳಿಸಬಹುದು ಎಂದು ಅಭಿಪ್ರಾಯಪಟ್ಟರು 


ಸಂಘದ ನಿಕಟಪೂರ್ವ ಅಧ್ಯಕ್ಷರಾದ ರೇಖಾ .ಡಿ.ಚೌಟ ಸಂಘದ ಕಾರ್ಯಚಟುವಟಿಕೆಗಳಿಗೆ ಶುಭಹಾರೈಸಿದರು.

 

ಇದೇ ಸಂದರ್ಭದಲ್ಲಿ ಧೀಮತಿ ಜೈನ ಮಹಿಳಾ ಸಂಘದ ವತಿಯಿಂದ ಇತ್ತೀಚೆಗೆ ಶ್ರೀ. ಧ. ಮಂ ಪದವಿಪೂರ್ವ ಕಾಲೇಜಿನ ನಿವೃತ್ತ ಪಾಂಶುಪಾಲ ಪ್ರೊ.ದಿನೇಶ್ ಚೌಟ ದಂಪತಿಗಳನ್ನು ಅಭಿನಂದಿಸಿ ಗೌರವಿಸಲಾಯಿತು. 


ಸಂಘದ ನೂತನ ಅಧ್ಯಕ್ಷರಾಗಿ ಡಾ.ರಜತಾ ಪಿ.ಶೆಟ್ಟಿ , ಆಯ್ಕೆಯಾಗಿ ಸಂಘದ ಮುಂದಿನ ಕಾರ್ಯ ಚಟುವಟಿಕೆಗಳ ಬಗ್ಗೆ ಸಂಕ್ಷಿಪ್ತ ವಾಗಿ ವಿವರಿಸಿದರು.ಸಂಘದ ಕಾರ್ಯದರ್ಶಿಯಾಗಿ ದಿವ್ಯಾ ಪ್ರಧಾನ್,ಕೋಶಾಧಿಕಾರಿಯಾಗಿ ಸ್ಮಿತಾ ಪ್ರಶಾಂತ್ ಅಧಿಕಾರ ಸ್ವೀಕರಿಸಿದರು.

ಮಹಿಳಾ ಜಾಗೃತಿಯ ಹಲವು ಕಾರ್ಯಚಟುವಟಿಕೆಗಳನ್ನು ಕೈಗೊಳ್ಳಲು ಸಂಘದ ನೂತನ ಪದಾಧಿಕಾರಿಗಳು ನಿರ್ಧರಿಸಿದರು. 


ಪ್ರೊ.ಉದಯ್ ಕುಮಾರ್ ಮಲ್ಲ , ತ್ರಿಶಲಾ ಜೈನ್ ಜಯಭಾರತಿ ಮುಂತಾದವರು ಉಪಸ್ಥತರಿದ್ದರು. ಶಶಿಪ್ರಭಾ ಕೆ. ಸಂಘದ ವಾರ್ಷಿಕ ವರದಿ ವಾಚಿಸಿ ಕಾರ್ಯಕ್ರಮ ನಿರೂಪಿಸಿದರು.ಹೇಮಾ ಮಹಾವೀರ ಜೈನ್ ಸ್ವಾಗತಿಸಿದರು, ಪ್ರೇಮಾ ಜೀವಂಧರ್ ಜೈನ್ ವಂದಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top