ಉಡುಪಿ: ಹಿರಿಯ ನಾಗರಿಕರಿಗೆ ಉಚಿತ ಮೂಳೆ ಸಾಂದ್ರತೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣೆ

Upayuktha
0

ಉಡುಪಿ: ಹಿರಿಯ ನಾಗರೀಕರ ವೇದಿಕೆ, ಜಯಂಟ್ಸ್ ಗ್ರೂಪ್ ಆಫ್ ಬ್ರಹ್ಮಾವರ, ವೈದ್ಯಕೀಯ ಪ್ರತಿನಿಧಿಗಳ ಸಂಘದ ಆಶ್ರಯದಲ್ಲಿ ಇಂದು (ಜೂ.18 ಭಾನುವಾರ) ಸಿ.ಎಸ್.ಐ ಲೋoಬಾರ್ಡ್ ಮೆಮೋರಿಯಲ್ ಮಿಷನ್ ಆಸ್ಪತ್ರೆಯಲ್ಲಿ ಹಿರಿಯ ನಾಗರೀಕರಿಗೆ ಉಚಿತ ಮೂಳೆ ಸಾಂದ್ರತೆ ಮತ್ತು ಸಾಮಾನ್ಯ ಆರೋಗ್ಯ ತಪಾಸಣಾ ಶಿಬಿರ ನಡೆಯಿತು.


ಕಾರ್ಯಕ್ರಮವನ್ನು ಗಿಡಕ್ಕೆ ನೀರು ಎರೆಯುವ ಮೂಲಕ ಉದ್ಘಾಟಿಸಿದ ಹಿರಿಯ ವೈದ್ಯಾಧಿಕಾರಿ ಡಾ|| ಗಣಿeಶ್ ಕಾಮತ್, ರೋಗ ಬಂದ ಮೇಲೆ ಚಿಕಿತ್ಸೆ ಪಡೆಯುವುದಕ್ಕಿಂತ ರೋಗ ಬರದಂತೆ ನಿಯಮಿತವಾಗಿ ತಪಾಸಣೆ ಮಾಡಿದರೆ ಉತ್ತಮ ಎಂದರು.


ವೇದಿಕೆಯಲ್ಲಿ ಹಿರಿಯ ನಾಗರಿಕರ ವೇದಿಕೆಯ ಪದಾಧಿಕಾರಿಗಳಾದ ನಾಗರಾಜ್ ರಾವ್, ಮುರಳೀಧರ್, ವಿಶ್ವನಾಥ್ ಹೆಗ್ಡೆ, ರೋಟರಿ ಸಾಬ್ರಕಟ್ಟೆ ಅಧ್ಯಕ್ಷ ಅಣ್ಣಯದಾಸ್, ಸುಂದರ ಪೂಜಾರಿ, ಪ್ರಸನ್ನ ಕಾರಂತ್, ರೋಹಿ ರತ್ನಾಕರ್ ಮುoತಾದವರಿದ್ದರು. ಜಯಂಟ್ಸ್ ಸ್ಥಾಪಕರಾದ ದಿ.ನನಾ ಚುಡಾಸ್ಮರವರ ಬಗ್ಗೆ ಜಯಂಟ್ಸ್ ಫೆಡರೇಶನ್ ಮಾಜಿ ಅಧ್ಯಕ್ಷ ಮಧುಸೂಧನ್ ಹೇರೂರು ಮಾತನಾಡಿದರು. ರಾಘವೇಂದ್ರ ಪ್ರಭು ಕವಾ೯ಲು ನಿರೂಪಿಸಿ ವಂದಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top