ತುಳು ಯಕ್ಷಗಾನದ ಸಾಹಿತ್ಯ ಅಮೋಘವಾದುದು: ದಯಾನಂದ ಕತ್ತಲ್ಸಾರ್

Upayuktha
0


ಮಂಗಳೂರು:
ತುಳು ಯಕ್ಷಗಾನದ ಪ್ರಸಂಗ ರಚನೆ ಬಹಳ ಸಾಹಿತ್ಯ ಪೂರ್ಣವಾದುದು. ತುಳು ಯಕ್ಷ ರಂಗಭೂಮಿ ಸಮೃದ್ಧವಾಗಲು ಇವು ಸಹಕಾರಿಯಾಗಿವೆ. ಅದೇ ನಿಟ್ಟಿನಲ್ಲಿ ಕಲಾವಿದರೂ ಕೂಡಾ ಉತ್ತಮ ಸಾಹಿತ್ಯಿಕ ಭಾಷಾ ಪದಗಳನ್ನೇ ಬಳಸಿ ಕಲೆಯನ್ನು ಶ್ರೀಮಂತಗೊಳಿಸಿದ್ದಾರೆ. ಇದರಲ್ಲಿ ಆಗಿ ಹೋದ ಪ್ರಸಂಗಕರ್ತರು ಮತ್ತು ಈಗಿರುವ ಪ್ರಸಂಗಕರ್ತರು ತುಳು ಭಾಷೆಯ ಪ್ರೌಢಿಮೆಯನ್ನು ಮೆರೆದಿದ್ದಾರೆ ಎಂಬುದೇ ನಮಗೆ ಹೆಮ್ಮೆ ಎಂದು ತುಳು ವಿದ್ವಾಂಸ, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿಯ ಮಾಜಿ ಅಧ್ಯಕ್ಷ ದಯಾನಂದ ಜಿ. ಕತ್ತಲ್ಸಾರ್ ಹೇಳಿದರು.

ಶ್ರಿ ಭಾರತೀ ಕಾಲೇಜಿನ ಶಂಕರ ಶ್ರೀ ಸದನದಲ್ಲಿ ಇಂದು ಆಯೋಜಿಸಲಾದ ತುಳು ಕೂಟ (ರಿ) ಕುಡ್ಲದ ಬಂಗಾರ್ ಪರ್ಬದ ಸರಣಿ ಕಾರ್ಯಕ್ರಮದ ನಾಲ್ಕನೇ ಎಗ್ಗೆಯಲ್ಲಿ  ಅವರು ಮಾತನಾಡಿದರು. ಇಂದಿನ ವಿದ್ಯಾರ್ಥಿಗಳು ಅಂದರೆ ಯುವ ಪೀಳಿಗೆ ತಮ್ಮ ಶಿಕ್ಷಣದ ಜತೆ ಇದನ್ನೂ ಕಲಿತಾಗ ಅದು ಜೀವನಕ್ಕೆ ನೀಡುವಂತಾಗುತ್ತದೆ. ನಾವು ತುಳು ಭಾಷಿಕರೇ ಈ ಕಾರ್ಯವನ್ನು ಮಾಡಬೇಕು. ಅನ್ಯಭಾಷಾ ಹೊಡೆತಗಳ ಮಧ್ಯೆ ನಮ್ಮ ತೌಳವ ಬದುಕು ಸಾಹಿತ್ಯ, ಆಡುಭಾಷೆ ಸೊರಗಲು ನಾವು ಬಿಡಬಾರದು ಎಂದು ಅವರು ನುಡಿದರು.

ತುಳುಕೂಟದ ಅಧ್ಯಕ್ಷ ಮರೋಳಿ ದಾಮೋದರ ನಿಸರ್ಗ ಬಿ.ಯವರು, ಭಾರತೀ ಕಾಲೇಜಿನ ಎಲ್ಲಾ ಅಧಿಕಾರಿಗಳೂ ಇಂದು ತುಳುಕೂಟದ ಈ ಮಹಾನ್ ಕಾರ್ಯಕ್ಕೆ ಕೈ ಜೋಡಿಸಿದ್ದೀರಿ. ನಮ್ಮ ಶ್ರೀಮಂತ ತುಳು ಭಾಷೆಯ ಏಳ್ಗೆಗಾಗಿ ನಾವೆಲ್ಲಾ ಒಂದಾಗಿ ದುಡಿಯೋಣ. ಮನೆಮನೆಯಲ್ಲಿ ತುಳು ಉಚ್ಚಯ ನಡೆಯಲಿ ಎಂದರು. 

ಭಾರತೀ ಪ.ಪೂಕಾಲೇಜಿನ ಪ್ರಾಂಶುಪಾಲೆ ಗಂಗಾರತ್ನ ಶುಭಕೋರಿ ತುಳುಕೂಟಕ್ಕೆ ಸದಾಶಯ ಬಯಸಿದರು. ಕದ್ರಿ ನಗರದ ಗೋಸೇವಾ ಸಂಯೋಜಕ ಸರವು ರಮೇಶ್ ಭಟ್ ಮುಖ್ಯ ಅತಿಥಿಯಾಗಿದ್ದರು.

ತುಳು ಕೂಟದ ಉಪಾಧ್ಯಕ್ಷ ಜೆ.ವಿ. ಶೆಟ್ಟಿ ಹಾಗೂ ಹೇಮಾ ನಿಸರ್ಗ ನಿರ್ವಹಿಸಿದರು. ಶ್ರೀಮತಿ ಕಾಮಾಕ್ಷಿ ಧನ್ಯವಾದವಿತ್ತರು. ಪ್ರ. ಕಾರ್ಯದರ್ಶಿ ವರ್ಕಾಡಿ ರವಿ ಅಲೆವೂ ರಾಯ ಸ್ವಾಗತ - ಪರಿಚಯ ಮಾಡಿದರು.

ಚಂದ್ರಶೇಖರ ಸುವರ್ಣ, ಗೋಪಾಲ ಕೃಷ್ಣ ಪಿ. ದಿನೇಶ ಕುಂಪಲ, ವಸಂತಿ ಪೂಜಾರಿ 'ಮಮತಾ ಪ್ರವೀಣ, ರಮೇಶ ಕುಲಾಲ್ ಬಾಯಾರು ಉಪಸ್ಥಿತರಿದ್ದರು. ಬಳಿಕ ಲಕ್ಷೀನಾರಾಯಣ ಹೊಳ್ಳ, ಸ್ಕಂದ ಕೊನ್ನಾರ್, ಮಧುಸೂದನ ಅಲೆವೂರಾಯ ವರ್ಕಾಡಿ, ಮಾಧವ ನಾವಡ ವರ್ಕಾಡಿಯವರ ಹಿಮ್ಮೇಳದಲ್ಲಿ ರವಿ ರತ್ನೊ ಎಂಬ ತುಳು ಯಕ್ಷಗಾನ ನಡೆಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top