ಅಭಿವೃದ್ಧಿಯ ಧಾವಂತದಲ್ಲಿ ಪರಿಸರ ನಾಶ ಮಾಡುವುದು ಸರಿಯಲ್ಲ: ಸುಬ್ರಮಣ್ಯ ಆಚಾರ್ಯ

Upayuktha
0

ಉಡುಪಿ: ಅವರು ಜೂನ್ 15ರಂದು ಗುರುವಾರ ಉಡುಪಿ ಪ್ರಿ  ಓನ್ಡ್ ವೈಕಲ್ಸ್ ಡೀಲರ್ಸ್ ಅಸೋಸಿಯೇಷನ್ ಉಡುಪಿ ಇದರ ವತಿಯಿಂದ ಅಜ್ಜರಕಾಡು ಭುಜಂಗ ಪಾರ್ಕ್ ನಲ್ಲಿ ಒಂದು ಸಾವಿರಕ್ಕೂ ಮಿಕ್ಕಿ ಲಕ್ಷ್ಮಣ ಫಲ ಗಿಡ ಮತ್ತು ಇನ್ನಿತರ ಪರಿಸರಕ್ಕೆ ಪೂರಕವಾದ ಗಿಡಗಳನ್ನು ಉಚಿತವಾಗಿ ನೀಡಿ ಸಾರ್ವಜನಿಕ ಪ್ರದೇಶಗಳಲ್ಲಿ ನೆಟ್ಟು ರಕ್ಷಣಾ ಬೇಲಿ ಹಾಕಿ ಪೋಷಿಸುವ ಕಾರ್ಯಕ್ರಮದಲ್ಲಿ ಮಾತನಾಡಿದರು.

  

ಲಕ್ಷ್ಮಣ ಫಲ ಗಿಡಕ್ಕೆ ನೀರು ಎರೆಯುದರ ಮೂಲಕ ಉದ್ಘಾಟಿಸಿದ ನಗರಸಭೆಯ ಪೌರಾಯುಕ್ತರಾದ  ರಮೇಶ್ ಪಿ ನಾಯ್ಕ್, ಮಾತನಾಡಿ, ಗಿಡಗಳನ್ನು ಕನಿಷ್ಟ 3 ವಷ೯ ಪಾಲನೆ ಮಾಡಿ ಬೆಳೆದರೆ ಅವುಗಳು ನೂರಾರು ವರುಷ ನಮ್ಮ ಪರಿಸರ ಬೆಳೆಸುವಲ್ಲಿ ಪ್ರಮುಖ ಪಾತ್ರ ವಹಿಸುತ್ತವೆ. ಪರಿಸರ ನಾಶದಿಂದಾಗಿ ಮಳೆ ಸರಿಯಾಗಿ ಬರದೆ ನೀರಿಗೆ ತೊಂದರೆಯಾಗಿದೆ. ಹೀಗಾಗಿ ಎಲ್ಲರೂ ಗಿಡ ಬೆಳೆಸುವ ಉದ್ದೇಶ ಹೊಂದಬೇಕು ಎಂದರು.


ಪ್ರಾದೇಶಿಕ ಸಾರಿಗೆ ಅಧಿಕಾರಿ ರವಿಶಂಕರ್ ಪಿ,  ಪರಿಸರ, ಸಾಹಿತ್ಯ ಅದೇ ರೀತಿ ಜಲ ಸಂಪತ್ತು ಬಗ್ಗೆ ಮಾಹಿತಿ ನೀಡಿದರು. ಅಧ್ಯಕ್ಷತೆಯನ್ನು  ಸಂಘದ ಅಧ್ಯಕ್ಷರಾದ ಮೊಹಮ್ಮದ್ ಅಶ್ರಫ್ ವಹಿಸಿದ್ದರು.


ಖ್ಯಾತ ಮಕ್ಕಳ ತಜ್ಞ ಡಾ||ಮನೋಹರ್ ಬೋಳೂರು, ಪರಿಸರ ಪ್ರೇಮಿ ರಾಘವೇಂದ್ರ ಪ್ರಭು, ಕವಾ೯ಲು  ಪ್ರತಿಯೊಬ್ಬರು ವಷ೯ಕ್ಕೆ ಕನಿಷ್ಠ ಒಂದು ಗಿಡವನ್ನಾದರೂ ತಮ್ಮ ಜನ್ಮದಿನದ ಅಂಗವಾಗಿ ನೆಟ್ಟು ಪಾಲನೆ ಮಾಡಬೇಕು ಎಂದು ಕರೆ ನೀಡಿದರು. ಸುವರ್ಣ ಎಂಟರ್ಪ್ರೈಸಸ್ ಮಾಲಕರಾದ ಮಧುಸೂಧನ್ ಹೇರೂರು ಉಪಸ್ಥಿತರಿದ್ದರು.


ಪ್ರ.ಕಾರ್ಯದರ್ಶಿ ಉದಯ್ ಕಿರಣ್ ನಿರೂಪಿಸಿ, ವಂದಿಸಿದರು. ನಂತರ ಉದ್ಯಾನವನದಲ್ಲಿ ಗಿಡಗಳನ್ನು ನೆಡಲಾಯಿತು. ಮತ್ತು ಸಾರ್ವಜನಿಕರಿಗೆ ಗಿಡ ವಿತರಿಸಲಾಯಿತು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top