400ಕ್ಕೂ ಅಧಿಕ ವಿದ್ಯಾರ್ಥಿಗಳಿಗೆ ಸರ್ಕಾರಿ ಕೋಟಾದಡಿ ಪ್ರವೇಶ
ಒಟ್ಟು 720 ಅಂಕದಲ್ಲಿ 650ರ ಮೇಲೆ 5 ವಿದ್ಯಾರ್ಥಿಗಳು, 600ಕ್ಕಿಂತ ಅಧಿಕ 32 ವಿದ್ಯಾರ್ಥಿಗಳು, 500ಕ್ಕಿಂತ ಅಧಿಕ 206 ವಿದ್ಯಾರ್ಥಿಗಳು ಪಡೆದಿದ್ದು, 400ಕ್ಕಿಂತ ಅಧಿಕ ಅಂಕವನ್ನು 684 ವಿದ್ಯಾರ್ಥಿಗಳು ಗಳಿಸಿದ್ದು, ಇವರೆಲ್ಲರೂ ಸರ್ಕಾರಿ ಜನರಲ್ ಕೋಟಾದ ಅಡಿಯಲ್ಲಿ ಪ್ರವೇಶಾತಿ ಪಡೆಯಲು ಅರ್ಹತೆ ಪಡೆದಿದ್ದಾರೆ ಆಳ್ವಾಸ್ ಶಿಕ್ಷಣ ಸಂಸ್ಥೆಯ ಅಧ್ಯಕ್ಷ ಡಾ.ಎಂ. ಮೋಹನ ಆಳ್ವ ಹೇಳಿದರು.
ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಅಖಿಲ ಭಾರತ ಮಟ್ಟದಲ್ಲಿ ಕೆಟಗರಿ ವಿಭಾಗದಲ್ಲಿ ನಂದಿನಿ 171ನೇ ರ್ಯಾಂಕ್, ಪ್ರಶಾಂತ್ ಪಾಟೀಲ್ 249, ಚಂದ್ರು ಕುಮಾರ್ ಎಂ 560 ಹಾಗೂ ಎನ್.ವಿನೀತ್ 1,076ನೇ ರ್ಯಾಂಕ್ ಪಡೆದಿರುತ್ತಾರೆ. ಪರಿಶಿಷ್ಟ ಜಾತಿ (ಎಸ್‍ಸಿ) ಕೆಟಗರಿಯಲ್ಲಿ 70 ವಿದ್ಯಾರ್ಥಿಗಳು, ಪರಿಶಿಷ್ಟ ಪಂಗಡ (ಎಸ್.ಟಿ) ಕೆಟಗರಿಯಲ್ಲಿ 44 ವಿದ್ಯಾರ್ಥಿಗಳು, ಹೈದರಾಬಾದ್ ಕರ್ನಾಟಕ ಕೆಟಗರಿಯಲ್ಲಿ 313 ವಿದ್ಯಾರ್ಥಿಗಳು, 400ಕ್ಕಿಂತ ಅಧಿಕ ಅಂಕ ಪಡೆದಿದ್ದು, ಸರ್ಕಾರಿ ಕೋಟಾದಡಿ ಪ್ರವೇಶ ಪಡೆಯಬಹುದಾಗಿದೆ.
ಅರ್ಹತೆ ಪಡೆದ ವಿದ್ಯಾರ್ಥಿಗಳಲ್ಲಿ ಭೌತಶಾಸ್ತ್ರದಲ್ಲಿ 143 ವಿದ್ಯಾರ್ಥಿಗಳು, ರಸಾಯನ ಶಾಸ್ತ್ರದಲ್ಲಿ 192 ವಿದ್ಯಾರ್ಥಿಗಳು ಮತ್ತು ಜೀವ ಶಾಸ್ತ್ರದಲ್ಲಿ 124 ವಿದ್ಯಾರ್ಥಿಗಳು 96 ಪರ್ಸಂಟೈಲ್‍ಗಿಂತ ಅಧಿಕ ಶ್ರೇಣಿಯಲ್ಲಿ ಅರ್ಹತೆ ಪಡೆದಿದ್ದಾರೆ. ಭೌತಶಾಸ್ತ್ರದಲ್ಲಿ 358, ರಸಾಯನಶಾಸ್ತ್ರದಲ್ಲಿ 336 ಮತ್ತು ಜೀವಶಾಸ್ತ್ರದಲ್ಲಿ 324 ವಿದ್ಯಾರ್ಥಿಗಳು 90 ಪರ್ಸಂಟೈಲ್‍ಗಿಂತ ಅಧಿಕ ಶ್ರೇಣಿಯಲ್ಲಿ ಅರ್ಹತೆ ಗಳಿಸಿರುತ್ತಾರೆ.
ನೀಟ್ ರಾಷ್ಟ್ರೀಯ ಅರ್ಹತಾ ಪರೀಕ್ಷೆಯಲ್ಲಿ 500 ಅಂಕಗಳಿಗಿಂತ ಅಧಿಕ ಪಡೆದ 206 ವಿದ್ಯಾರ್ಥಿಗಳಲ್ಲಿ 138 ವಿದ್ಯಾರ್ಥಿಗಳು ಸಂಸ್ಥೆಯ ದತ್ತು ಶಿಕ್ಷಣ ಸ್ವೀಕಾರದಡಿಯಲ್ಲಿ ವಿದ್ಯಾಭ್ಯಾಸ ಮಾಡಿದ್ದು, ಸುಮಾರು ಎರಡು ಕೋಟಿ ರೂಪಾಯಿಗಳಷ್ಟು ಹಣವನ್ನು ಈ ವಿದ್ಯಾರ್ಥಿಗಳ ವಿದ್ಯಾಭ್ಯಾಸಕ್ಕೆ ಸಂಸ್ಥೆಯು ಭರಿಸಿರುತ್ತದೆ.
ಪತ್ರಿಕಾಗೋಷ್ಠಿಯಲ್ಲಿ ಆಳ್ವಾಸ್ ಪದವಿ ಪೂರ್ವ ಕಾಲೇಜಿನ ಪ್ರಾಚಾರ್ಯ ಎಂ. ಸದಾಕತ್, ನೀಟ್ ಸಂಯೋಜಕ ಪ್ರದೀಪ್ ಕುಮಾರ್ ಹಾಗೂ ಭೌತಶಾಸ್ತ್ರ ವಿಭಾಗದ ಮುಖ್ಯಸ್ಥ ವಾಸುದೇವ ರೆಡ್ಡಿ ಇದ್ದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


