ಉದ್ಯೋಗವನ್ನು ಹುಡುಕುವ ಬದಲು ಉದ್ಯೋಗವನ್ನು ಸೃಷ್ಟಿಸುವ ಕಾರ್ಯ ನಡೆಯಬೇಕು: ರಾಧಾಕೃಷ್ಣ ಇಟ್ಟಿಗುಂಡಿ

Upayuktha
0

 


ಪುತ್ತೂರು: ಒಂದು ವಿದ್ಯಾ ಸಂಸ್ಥೆಯು ಸತ್ಪ್ರಜೆಗಳನ್ನು ರೂಪಿಸುತ್ತದೆ. ಬದಲಾದ ಕಾಲಘಟ್ಟದಲ್ಲಿ ಉದ್ಯೋಗವನ್ನು  ಸೃಷ್ಟಿಸುವ ಕಾರ್ಯ ನಡೆಯಬೇಕು. ಉದ್ಯೋಗವನ್ನು ಆರಂಭಿಸಲು ಇದೀಗ ಉತ್ತಮ ಅವಕಾಶಗಳು ನಮ್ಮ ಮುಂದಿವೆ. ನಾವು ಯಾವುದೇ ಒಂದು ಹೊಸ ಸಂಸ್ಥೆಯನ್ನು ಪ್ರಾರಂಭಿಸಬೇಕಾದರೆ  ಅವುಗಳ ಅನುಭವಗಳು ತುಂಬಾ ಮುಖ್ಯವಾಗಿರುತ್ತದೆ. ಇತ್ತೀಚಿನ ದಿನಗಳಲ್ಲಿ ನಮಗೆ ಯಾವುದೇ ರೀತಿಯ ಮಾಹಿತಿಯನ್ನು ತಿಳಿದುಕೊಳ್ಳಬೇಕಾದರೂ  ಅಂತರ್ಜಾಲಗಳು ತುಂಬಾ ಸಹಾಯ ಮಾಡುತ್ತದೆ. ಇದರ ಮುಖಾಂತರವಾಗಿ ನಾವು ಯಾವ ರೀತಿಯ ಉದ್ಯೋಗವನ್ನು ಮಾಡಬೇಕೆಂದು ತಿಳಿಸುತ್ತದೆ ಎಂದು ನಿತ್ಯ ಆಹಾರ ಉತ್ಪನ್ನ ಪುತ್ತೂರು ಇಲ್ಲಿನ ಮಾಲೀಕ ರಾಧಾಕೃಷ್ಣ ಇಟ್ಟಿಗುಂಡಿ ಹೇಳಿದರು.


ಇವರು ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ, ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ) ವ್ಯವಹಾರ ಆಡಳಿತ ನಿರ್ವಹಣಾ ಸಂಘ ಮತ್ತು ಐಕ್ಯೂಎಸಿ ಜಂಟಿ ಸಹಯೋಗದಲ್ಲಿ ಆಯೋಜಿಸಿದ 'ನಿರ್ವಹಣ' ಉತ್ಸವದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.


ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಅಧ್ಯಕ್ಷ ಡಾ. ಶ್ರೀಪತಿ ಕಲ್ಲೂರಾಯ ಮಾತನಾಡಿ, ಪ್ರತಿಯೊಂದು ವೇದಿಕೆಯನ್ನು ನಾವು ಬಳಸಿಕೊಂಡಾಗ  ನಮ್ಮ ಕೌಶಲ್ಯಗಳನ್ನು ಹೆಚ್ಚಿಸಿಕೊಳ್ಳಲು ಸಹಾಯವಾಗುತ್ತದೆ. ಪದವಿಯ ನಂತರ ಶ್ರೀಮಂತರೇ ಆಗಿರಲಿ ಅಥವಾ ಬಡವರೇ ಆಗಿರಲಿ ತಮ್ಮ ಕಾಲಿನ ಮೇಲೆ ತಾವು ನಿಲ್ಲಬೇಕು ಎಂಬ ಮನೋಭಾವವನ್ನು ಮೂಡಿಸುತ್ತದೆ. ಒಬ್ಬ ಮನುಷ್ಯನಿಗೆ ಉದ್ಯೋಗ ಇದೆ ಎಂದಾದರೆ ಸಮಾಜವು ಅವನನ್ನು ನೋಡುವ ದೃಷ್ಟಿಕೋನವು  ಬದಲಾಗುತ್ತದೆ. ಒಂದು ಸಂಸ್ಥೆಯ ಏಳಿಗೆಯನ್ನು ಕಂಡರೆ ನಮ್ಮ ಭವಿಷ್ಯದ ಏಳಿಗೆಯನ್ನು ನೋಡಬಹುದು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು.

ಕಾರ್ಯಕ್ರಮವನ್ನು ದೀಪ ಪ್ರಜ್ವಲನೆಯ ಮೂಲಕ ಉದ್ಘಾಟಿಸಲಾಯಿತು.


ಸಮಾರೋಪ ಸಮಾರಂಭ

ನಮ್ಮನ್ನು ನಾವು ಪ್ರಶ್ನೆ ಮಾಡಿಕೊಂಡಾಗ,ಮಾತ್ರ ನಾವು ಉತ್ತಮ ರೀತಿಯಲ್ಲಿ ಮುಂದುವರಿಯಲು ಸಾಧ್ಯ. ಯಾರೇ ಆಗಿರಲಿ ಜೀವನದಲ್ಲಿ ಕಷ್ಟಪಟ್ಟರೆ, ಮುಂದೊಂದು ದಿನ ನಮ್ಮ ಬದುಕು ಉಜ್ವಲವಾಗಿ ಬೆಳಗುತ್ತದೆ. ನಾವು ಯಾವ ರೀತಿ ಕಷ್ಟವನ್ನು ಸರಿದೂಗಿಸಿಕೊಂಡು ಹೋಗುತ್ತೇವೆ ಎಂಬುದು ಮುಖ್ಯವಾಗಿರುತ್ತದೆ ಎಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ಅನಂತ್ ಭಟ್ ಸಹಾಯಕ ಪ್ರಾಧ್ಯಾಪಕ ಸರ್ಕಾರಿ ಪ್ರಥಮ ದರ್ಜೆ ಕಾಲೇಜು ಬೆಟ್ಟಂಪಾಡಿ ಹೇಳಿದರು.


ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ.ಎನ್. ಅಧ್ಯಕ್ಷೀಯ ಮಾತುಗಳನ್ನಾಡಿ, ನಮ್ಮ ವೈಯಕ್ತಿಕ ಜೀವನವು ಪಾಶ್ಚಾತ್ಯ ನಿರ್ವಹಣೆಗಳಿಂದ ಶುರುವಾಗುತ್ತಿದೆ. ಕಾಣದ ಕ್ಷೇತ್ರಗಳಲ್ಲಿ ಕೆಲಸ ಹುಡುಕುವ ಬದಲು ನಮ್ಮದೇ ಕ್ಷೇತ್ರಗಳಲ್ಲಿ ಒಂದು ಒಳ್ಳೆಯ ಕೆಲಸವನ್ನು ಶುರು ಮಾಡಬಹುದು. ಇವುಗಳನ್ನು ನಮ್ಮ ಜೀವನದಲ್ಲಿ ರೂಡಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭ ಹಾರೈಸಿದರು


ವೇದಿಕೆಯಲ್ಲಿ ಐಕ್ಯೂಎಸಿ ಘಟಕದ ಸಂಯೋಜಕ ಪ್ರೋ. ಶಿವಪ್ರಸಾದ್ ಕೆ.ಎಸ್, ಕಾಲೇಜಿನ ಪ್ರಾಂಶುಪಾಲ ಪ್ರೊ.ವಿಷ್ಣು ಗಣಪತಿ ಭಟ್, ಹಾಗೂ ವಾಣಿಜ್ಯ ವಿಭಾಗದ ಮುಖ್ಯಸ್ಥೆ ಡಾ. ರವಿಕಲಾ ಉಪಸ್ಥಿತರಿದ್ದರು.


ಕಾರ್ಯಕ್ರಮವನ್ನು  ತೃತೀಯ ಬಿಬಿಎ ವಿಭಾಗದ ವಿದ್ಯಾರ್ಥಿಗಳಾದ ವಿದ್ಯಾಶ್ರೀ ಹಾಗೂ ಮಾನಸ ಶೆಟ್ಟಿ ಸ್ವಾಗತಿಸಿ, ಧನ್ವೀರ್ ಶಾಮ್ ಹಾಗೂ ಸಂಗೀತ ರೈ ವಂದಿಸಿ, ಚಿತ್ರಶ್ರೀ ಮತ್ತು ಧ್ವನಿಕ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
To Top