ಕಾಂಗ್ರೆಸ್‌ನಿಂದ ಪಠ್ಯ ಪುಸ್ತಕ ಪರಿಷ್ಕರಣೆ ನಿರ್ಧಾರ ರಾಷ್ಟ್ರೀಯತೆಗೆ ಅಪಮಾನ: ಪ್ರಭಾಕರ ಪ್ರಭು

Upayuktha
0

ಬಂಟ್ವಾಳ: ಕರ್ನಾಟಕ ರಾಜ್ಯದಲ್ಲಿನ ಪ್ರತಿಯೊಬ್ಬ ನಾಗರಿಕನಿಗೂ ರಾಷ್ಟ್ರ ಪ್ರೇಮ ಮೂಡಬೇಕು, ರಾಷ್ಟಿಯತೆ ಜಾಗೃತಿ ಗೊಳ್ಳಬೇಕು ಎಂಬ ನಿಟ್ಟಿನಲ್ಲಿ ಎಳೆಯ ವಯಸ್ಸಿನ ಮಕ್ಕಳಿಂದಲೇ ಇದು ಪ್ರೇರಣೆ ಗೊಳ್ಳಬೇಕು ಎಂಬುದಾಗಿ ಮನಗಂಡ ಬಿಜೆಪಿ ಸರಕಾರವು ರಾಷ್ಟ್ರ ಭಕ್ತರಾದ ವೀರ ಸಾವರ್ಕರ್ ಕುರಿತು ಚಕ್ರವರ್ತಿ ಸೂಲಿಬೆಲೆ ರಚಿಸಿದ ಪಾಠ ರಾಜಗುರು ಹಾಗೂ ರಾಷ್ಟ್ರೀಯ ಸ್ವಯಂ ಸೇವಕ ಸಂಘದ ಹೆಡಗೇವಾರ್ ಭಾಷಣದ ತುಣುಕಾದ "ಆದರ್ಶ ಪುರುಷ ಯಾರಾಗಬೇಕು ಸುಖ್ ದೇವ್, ಭಗತ್ ಸಿಂಗ್ ಕುರಿತಾದ ತಾಯಿ ಭಾರತೀಯ ಅಮರ ಪುತ್ರರು, ಮತ್ತು ಶತಾವಧಾನಿ ಗಣೇಶ್ ರವರ" ಯಜ್ಞಯುಗಾದಿ" ಇಂತದೆಲ್ಲ ಭಾರತೀಯ ಪರಂಪರೆಯನ್ನು ರಾಜ್ಯದ ಜನರಿಗೆ ಪುನರಪಿ ತಿಳಿಯ ಪಡಿಸುವ ಬಹುಜನಪಯೋಗಿ ಅಭಿವ್ಯಕ್ತಿತ್ವದ ಪಾಠಗಳನ್ನು ಕೈ ಬಿಡುವ ನಿರ್ಧಾರ ಮಾಡಿರುವುದು ರಾಷ್ಟ್ರ ದ್ರೋಹವಲ್ಲದೇ ಬಹುಸಂಖ್ಯಾತ ಹಿಂದುಗಳ ಮನೋ ಭಾವನೆಗಳಿಗೆ ಧಕ್ಕೆ ತರುವ ಕೆಲಸವಾಗಿದೆ ಎಂದು ಬಂಟ್ವಾಳ ತಾಲೂಕು ಪಂಚಾಯತ್ ಮಾಜಿ ಸದಸ್ಯ ಪ್ರಭಾಕರ ಪ್ರಭು ರವರು ರಾಜ್ಯ ಸರಕಾರದ ನಿರ್ಧಾರವನ್ನು ಖಂಡಿಸಿದ್ದಾರೆ.


ಇದೊಂದು ದ್ವೇಷದ ರಾಜಕೀಯ ಕಾರ್ಯಕ್ರಮವಾಗಿದ್ದು ಕರ್ನಾಟಕದ ಜನತೆ ಮೆಚ್ಚುವುದಿಲ್ಲ. ಅಧಿಕಾರ ಶಾಶ್ವತ ಅಲ್ಲ ಆದ್ರೆ ಆಯಾ ಸರಕಾರಗಳು ಕೈ ಗೊಳ್ಳುವ ನಿರ್ಧಾರಗಳು ಶಾಶ್ವತವಾಗುತ್ತವೆ. ಈ ನಿಟ್ಟಿನಲ್ಲಿ ಕಾಂಗ್ರೆಸ್ ನೇತ್ರತ್ವದ ಸರಕಾರ ಐತಿಹಾಸಿಕವಾಗಿ ಜನವಿರೋಧಿ ಕೆಟ್ಟದಾಗಿ ನಡೆದುಕೊಂಡಿದೆ.ಹೀಗೆ ಅಧರ್ಮದ ದಾರಿಯಲ್ಲಿ ನಡೆದರೆ ಭವಿಷ್ಯದ ದಿನಗಳಲ್ಲಿ ಕಾಂಗ್ರೆಸ್ ಪಕ್ಷವು ಅವನತಿಯತ್ತ ಸಾಗಲಿದೆ.


ಕೇವಲ ಕೆಲವೇ ಕೆಲವು ಜನರನ್ನು ಖುಷಿ ಪಡುವುದಗೋಸ್ಕೊರ ನೆಹರು ಬಗ್ಗೆಗಿನ ಇತಿಹಾಸ ನೆಹರುರವರು ಮಗಳಿಗೆ ಬರೆದ ಪತ್ರ ಹಾಗೂ ಟಿಪ್ಪುವಿನ ವೈಭವಿಕರಣ, ಹೈದರಾಲಿ ಬಗ್ಗೆ ವ್ಯಾಖ್ಯಾನ ಇತ್ಯಾದಿ ಎಡಪಂಥೀಯ ಮನಸ್ಥಿತಿಯ ಸಾಹಿತಿಗಳ ಅನಗತ್ಯ ವಿಷಯಗಳನ್ನು ಪಠ್ಯ ಪುಸ್ತಕದಲ್ಲಿ ಸೇರಿಸಿ ಜನರನ್ನು ಗೊಂದಲದಲ್ಲಿ ಸಿಲುಕಿಸುವ ಹುನ್ನಾರ ಮಾಡುವುದನ್ನು ನೋಡಿದರೆ ಈ ಕಾಂಗ್ರೆಸ್ ನೇತೃತ್ವದ ರಾಜ್ಯ ಸರಕಾರಕ್ಕೆ ರಾಷ್ಟ್ರಿಯತೆಯಲ್ಲದೇ ಜಾತ್ಯತೀತ ಲಕ್ಷಣವೂ ಇಲ್ಲದಂತೆ ಕಂಡುಬರುತ್ತಿದೆ.


ಇನ್ನಾದರೂ ಕರ್ನಾಟಕದ ಸಮಸ್ತ ಜನತೆ ಎಚ್ಚೆತ್ತುಕೊಂಡು ಯಾವುದೇ ಆಶೆ ಆಮಿಷಗಳಿಗೆ ಬಲಿಯಾಗದೆ ರಾಷ್ಟ್ರಿಯ ಚಿಂತನೆಗೆ, ರಾಷ್ಟ್ರ ಪ್ರೇಮದ ವಿಚಾರ ಧಾರೆಗಳತ್ತ ಗಮನ ಹರಿಸಬೇಕು ಎಂದು ಪ್ರಭಾಕರ ಪ್ರಭು ಕರ್ನಾಟಕ ರಾಜ್ಯದ ಸಮಸ್ತ ನಾಗರಿಕರಲ್ಲಿ ಪತ್ರಿಕಾ ಹೇಳಿಕೆ ಮೂಲಕ ಮನವಿ ಮಾಡಿದ್ದಾರೆ.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top