ತೆಂಕನಿಡಿಯೂರು: ಕಲಿಕೆಯೊಂದಿಗೆ ತಮ್ಮ ವಿಷಯದ ಜ್ಞಾನವನ್ನು ಅರಿತು ಸಮಾಜಕ್ಕೆ ಪ್ರಸ್ತುತಪಡಿಸಿದಲ್ಲಿ ವಿದ್ಯಾರ್ಥಿಗಳು ಸಹ ಈ ಸಮಾಜಕ್ಕೆ ತೆರೆದುಕೊಳ್ಳುತ್ತಾರೆ ತಮ್ಮ ಸೂಕ್ತ ಪ್ರತಿಭೆಯ ಅನಾವರಣಕ್ಕೆ ಇದು ಒಂದು ರಹಧಾರಿ, ಆದುದರಿಂದ ವಿದ್ಯಾರ್ಥಿಗಳೇ ಸಂಪನ್ಮೂಲ ವ್ಯಕ್ತಿಗಳಾಗಿ ಭಾಗವಹಿಸಿ ವಾಣಿಜ್ಯಶಾಸ್ತ್ರ ಮತ್ತು ದೈನಂದಿನ ಅಗತ್ಯತೆ ಕುರಿತ ವಿಚಾರಗಳನ್ನು ಪ್ರಸ್ತುತಪಡಿಸುವ ಕಾರ್ಯಕ್ರಮ ಅಭಿನಂದನರ್ಹ ಎಂದು ಪ್ರಾಂಶುಪಾಲ ಪ್ರೊ. ಸುರೇಶ್‍ರೈ ಕೆ. ನುಡಿದರು. ಸರಕಾರಿ ಪ್ರಥಮ ದರ್ಜೆ ಕಾಲೇಜು ಸ್ನಾತಕೋತ್ತರ ಅಧ್ಯಯನ ಕೇಂದ್ರ ತೆಂಕನಿಡಿಯೂರು ಇಲ್ಲಿನ ವಾಣಿಜ್ಯ ಮತ್ತು ನಿರ್ವಹಣಾ ಶಾಸ್ತ್ರ ವಿಭಾಗ ಮತ್ತು ಐಕ್ಯುಎಸ್‍ಸಿ ಸಹಯೋಗದೊಂದಿಗೆ ಆಯೋಜಿಸಿದ ವಾಣಿಜ್ಯಶಾಸ್ತ್ರ ವಿದ್ಯಾರ್ಥಿಗಳ ಸಮ್ಮೇಳನವನ್ನು ಉದ್ಘಾಟಿಸಿ ಮಾತನಾಡಿದರು. ಮುಖ್ಯ ಅತಿಥಿ ಮತ್ತು ಸಮ್ಮೇಳನದ ವಿಶ್ಲೇಷಕರಾಗಿ ಭಾಗವಹಿಸಿದ ಕುಂದಾಪುರದ ಡಾ. ಬಿ.ಬಿ ಹೆಗ್ಡೆ ಪ್ರಥಮ ದರ್ಜೆ ಕಾಲೇಜು ಸಹಾಯಕ ಪ್ರಾಧ್ಯಾಪಕರಾದ ಯೋಗೀಶ್ ಶಾನಭಾಗ್ ಕಾರ್ಯಕ್ರಮವನ್ನು ಉದ್ದೇಶಿಸಿ ಮಾತನಾಡಿ ವಿದ್ಯಾರ್ಥಿ ಸಮ್ಮೇಳನವು ವಿಭಿನ್ನ ಮಾದರಿಯಾಗಿದ್ದು ಕಲಿಕೆಯೊಂದಿಗೆ ಸಕರಾತ್ಮಕ ಮತ್ತು ಕ್ರಿಯಾಶೀಲ ಅನುಭವವನ್ನು ಕಲ್ಪಿಸಿ ಕೊಡುತ್ತದೆ ಎಂದು ತಿಳಿಸಿದರು.
ಸಮ್ಮೇಳನದಲ್ಲಿ ಅಂತಿಮ ಬಿಕಾಂ ವಿದ್ಯಾರ್ಥಿಗಳಾದ ಕು. ಮನಿಷ ವೇದಿಕೆಯ ಭಯ ನಿವಾರಣೆಯ ಕುರಿತು, ಕು. ಸುಷ್ಮಾ ತಮ್ಮ ಆರೋಗ್ಯ ಕಾಪಾಡಿಕೊಳ್ಳುವ ಕುರಿತು, ಕು. ರೇಷ್ಮಾ ಸಂದರ್ಶನ ಎದುರಿಸುವ ಬಗೆಯ ಕುರಿತು, ಕಿಶೋರ್ ಸಂವಹನದ ಸಮಸ್ಯೆಗಳ ಕುರಿತು ಹಾಗೂ ಫ್ರೀಸ್ಟನ್ ಒತ್ತಡ ನಿವಾರಣೆಯ ಕುರಿತು ವಿಷಯಗಳನ್ನು ಮಂಡಿಸಿದರು.
ಎಂ.ಕಾಂ. ವಿಭಾಗದ ಮುಖ್ಯಸ್ಥರಾದ ತಿಮ್ಮಣ್ಣ ಜಿ. ಭಟ್, ಸಹಾಯಕ ಪ್ರಾಧ್ಯಾಪಕರಾದ ಡಾ. ಉದಯ ಶೆಟ್ಟಿ ಕೆ., ಐಕ್ಯುಎಸಿ ಸಂಚಾಲಕರಾದ ಡಾ. ಮೇವಿ ಮಿರಾಂದ, ವಾಣಿಜ್ಯ ವಿಭಾಗ ಮುಖ್ಯಸ್ಥರಾದ ಶ್ರೀಮತಿ ಬಿಂದು ಟಿ, ನಿರ್ವಹಣಾಶಾಸ್ತ್ರ ಮುಖ್ಯಸ್ಥರಾದ ಡಾ. ರಘು ನಾಯ್ಕ, ಸಹ ಪ್ರಾಧ್ಯಾಪಕರಾದ ಉಮೇಶ್ ಪೈ ಅತಿಥಿಗಳ ನೆಲೆಯಲ್ಲಿ ಉಪಸ್ಥಿತರಿದ್ದರು. ವಿದ್ಯಾರ್ಥಿನಿ ರುದ್ವಿನ್ ತನುಜಾ ನಿರೂಪಿಸಿದರು, ಉಪನ್ಯಾಸಕಿ ಸೋನಿಯಾ ಸ್ವಾಗತಿಸಿದರು, ಉಪನ್ಯಾಸಕಿ ಶ್ರೀಮತಿ ಸ್ಮಿತಾ ಧನ್ಯವಾದಗೈದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ