ಸುದಾನ ಶಾಲಾ ಸಂಸತ್ ಚುನಾವಣೆ - ವಿಶಾಲ್ ಬಿ ವಿದ್ಯಾರ್ಥಿ ನಾಯಕನಾಗಿ ಆಯ್ಕೆ

Upayuktha
0


ಪುತ್ತೂರು:
ಪುತ್ತೂರಿನ ಸುದಾನ ಶಾಲೆಯ ಸಂಸತ್ ಚುನಾವಣೆಯು ಜೂನ್ 19 ರಂದು ವಿಧಿಯುಕ್ತವಾಗಿ ನಡೆಯಿತು. ನಾಮಪತ್ರ ಸಲ್ಲಿಸುವುದರೊಂದಿಗೆ ಆರಂಭಗೊಂಡಿದ್ದ ಚುನಾವಣಾ ಪ್ರಕ್ರಿಯೆಯಲ್ಲಿ ಶಾಲಾ ವಿದ್ಯಾರ್ಥಿ ನಾಯಕ, ಉಪನಾಯಕ ಮತ್ತು ಕಾರ್ಯದರ್ಶಿ ಸ್ಥಾನಗಳಿಗೆ ಉಮೇದುದಾರ ವಿದ್ಯಾರ್ಥಿಗಳು ಸ್ಪರ್ಧಿಸಿದ್ದರು. ಶಾಲಾ ಸಭಾಂಗಣದಲ್ಲಿ ಮತಗಟ್ಟೆಯನ್ನು ಆಯೋಜಿಸಿ, ಮತಯಂತ್ರದ ಮೂಲಕ ಚುನಾವಣಾ ಪ್ರಕ್ರಿಯೆಯನ್ನು ಆಯೋಜಿಸಲಾಗಿತ್ತು. 


ಐದನೇ ತರಗತಿಯಿಂದ ಹತ್ತನೇ ತರಗತಿ ವರೆಗಿನ ವಿದ್ಯಾರ್ಥಿಗಳು ಮತಚಲಾಯಿಸಿ, ವಿದ್ಯಾರ್ಥಿ ನಾಯಕನಾಗಿ ವಿಶಾಲ್ ಬಿ (10ನೇ ) ಉಪನಾಯಕಿಯಾಗಿ ಜಿಯಾ ಸ್ವೀಡಲ್ ಲಸ್ರಾಡೋ (10ನೇ) ಮತ್ತು ವಿದ್ಯಾರ್ಥಿ ಕಾರ್ಯದರ್ಶಿಯಾಗಿ ಅನಿಕಾ ಯು (9ನೇ) ರವರನ್ನು ಆಯ್ಕೆ ಮಾಡಿದರು. 


ಸುದಾನ ಶಾಲೆಯ ಸೋಷಿಯಲ್ ಕ್ಲಬ್ ನಿರ್ದೇಶಕಿ ಶ್ರೀಮತಿ. ನಿಶ್ಮಿತಾ, ಶ್ರೀಮತಿ. ಅಶ್ವಿನಿ, ಶ್ರೀಮತಿ. ಆಶಾಲತಾ, ಶ್ರೀಮತಿ.ಲತಾ,       ಶ್ರೀಮತಿ. ಹರ್ಷಿತಾ ನಾೈಕ್, ಶ್ರೀ. ಸುಂದರ್ ನಾವೂರ್, ಶ್ರೀ. ಪುಷ್ಪರಾಜ್, ಶ್ರೀ. ನವೀನ್ ಸಹಕರಿಸಿದರು. ಶಾಲಾ ಮುಖ್ಯ ಶಿಕ್ಷಕಿ ಶ್ರೀಮತಿ. ಶೋಭಾನಾಗರಾಜ್‍ರವರು ವಿಜೇತರನ್ನುಅಭಿನಂದಿಸಿದರು.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top