ಉದಯರಾಗ- ಉದಯೋನ್ಮುಖ ಕಲಾವಿದರಿಗೆ ವೇದಿಕೆ: ಕುಮಾರ ಸ್ವಾಮಿ ಬಿ ಎಸ್

Upayuktha
0

 


ಸುರತ್ಕಲ್: ಉದಯೋನ್ಮುಖ ಪ್ರತಿಭಾವಂತ ಶಾಸ್ತ್ರೀಯ ಸಂಗೀತ ಕಲಾವಿದರಿಗೆ ಅವಕಾಶ ಕಲ್ಪಿಸುವ ಮೂಲಕ ಪ್ರತಿಭಾನಾವರಣಕ್ಕೆ ವೇದಿಕೆ ಲಭ್ಯವಾಗುತ್ತಿದೆ ಎಂದು ಬೈಕಂಪಾಡಿ ಸರಕಾರಿ ಉಪಕರಣಾಗಾರ ಮತ್ತು ತರಬೇತಿ ಕೇಂದ್ರದ ಘಟಕ ಮುಖ್ಯಸ್ಥ ಕುಮಾರ ಸ್ವಾಮಿ ಬಿ ಎಸ್ ನುಡಿದರು. ಅವರು ಮಣಿಕೃಷ್ಣ ಸ್ವಾಮಿ ಅಕಾಡೆಮಿ(ರಿ) ಮತ್ತು ನಾಗರಿಕ ಸಲಹಾ ಸಮಿತಿ(ರಿ) ಸುರತ್ಕಲ್ ಸಹಭಾಗಿತ್ವದಲ್ಲಿ ಅನುಪಲ್ಲವಿಯಲ್ಲಿ ನಡೆಯುತ್ತಿರುವ ಉದಯರಾಗ ಶಾಸ್ತ್ರೀಯ ಸಂಗೀತ ಸರಣಿಯ ಉದಯರಾಗ–44 ರಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.  


ಬಹುವಚನ ಸಂಸ್ಥೆಯ ಸಂಯೋಜಕ ಡಾ.ಶ್ರೀಶಕುಮಾರ್ ಪುತ್ತೂರು ಮಾತನಾಡಿ ಸಾಮಾಜಿಕ ವ್ಯವಸ್ಥೆಯ ವಿರುದ್ಧದ ಸಾತ್ವಿಕ ಪ್ರತಿರೋಧ ಸಾಹಿತ್ಯ ಹಾಗೂ ಸಾಂಸ್ಕೃತಿಕ ಕಾರ್ಯಕ್ರಮಗಳ ಸಂಘಟನೆಗೆ ಮೂಲ ಪ್ರೇರಣೆಯಾಗಿರುತ್ತವೆ. ಪೃಥ್ವಿಯ ಸಂರಕ್ಷಣೆಯ ಕಾರ್ಯದಲ್ಲಿ ತಮ್ಮನ್ನು ತಾವು ತೊಡಗಿಸಿಕೊಳ್ಳಬೇಕಾಗಿದೆಂದರು.


ಸುನಾದ ಪಿ ಎಸ್ ಅವರಿಂದ ಹಾಡುಗಾರಿಕೆ ನಡೆಯಿತು. ವಯಲಿನ್ ನಲ್ಲಿ ಸುಪ್ರಿತಾ ಪಿ.ಎಸ್, ಮೃದಂಗದಲ್ಲಿ ಕೃಷ್ಣ ಪವನ್‍ಕುಮಾರ್ ಸಹಕರಿಸಿದರು.


ಸುರತ್ಕಲ್ ನಾಗರಿಕ ಸ¯ಹಾ ಸಮಿತಿ ಯ ಅಧ್ಯಕ್ಷ ಡಾ.ಕೆ.ರಾಜಮೋಹನ್‍ರಾವ್ ಉಪಸ್ಥಿತರಿದ್ದರು. ಮಣಿ ಕೃಷ್ಣ ಸ್ವಾಮಿ ಅಕಾಡೆಮಿಯ(ರಿ) ಕಾರ್ಯದರ್ಶಿ ಪಿ.ನಿತ್ಯಾನಂದ ರಾವ್ ಕಾರ್ಯಕ್ರಮ ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top