ತುಳುನಾಡಿನಲ್ಲಿ ಆಹಾರ ಸಂಸ್ಕೃತಿಯ ಪ್ರತೀಕ: ಡಾ. ಶೇಖರ್ ನಾಯ್ಕ್

Upayuktha
0

 


ಮಂಗಳೂರು: ತುಳುನಾಡಿನಲ್ಲಿ ಆಹಾರ ಸಂಸ್ಕೃತಿಯ ಪ್ರತೀಕ. ದಕ್ಷಿಣಕನ್ನಡದ ಪ್ರವಾಸೋದ್ಯಮ, ಆಹಾರ ಮತ್ತು ಸಂಸ್ಕೃತಿ ಒಂದಕ್ಕೊಂದು ಸಂಬಂಧಿಸಿದ್ದಾಗಿದೆ, ಎಂದು ಮಂಗಳೂರು ವಿಶ್ವವಿದ್ಯಾನಿಲಯದ ವಿಶೇಷ ಅಧಿಕಾರಿ ಡಾ. ಶೇಖರ್ ನಾಯ್ಕ್ ಹೇಳಿದರು. ಅವರು ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ಬಿ.ಬಿ.ಎ ಮತ್ತು ಬಿ.ಎ ಪ್ರವಾಸೋದ್ಯಮ ವಿಭಾಗದ ವತಿಯಿಂದ ಸೋಮವಾರ ನಡೆದ ಆಹಾರಮೇಳ - "ಅಟಿಲ್ 2K23" ಇದರ ಉದ್ಘಾಟನಾ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು. 


ಖಂಡಿಗೆ ಬೀಡಿನ ಶ್ರೀಧರ್ಮ ಅರಸು ಉಲ್ಲಾಯ ಕ್ಷೇತ್ರದ ಗಡಿಪ್ರಧಾನರಾದ ಶ್ರೀಆದಿತ್ಯ ಮುಕ್ಕಾಲ್ದಿ ಅವರು ಆಹಾರಮೇಳವನ್ನು ದೀಪ ಬೆಳಗಿಸಿ ಉದ್ಘಾಟಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಪ್ರಾಂಶುಪಾಲೆ ಡಾ.ಅನಸೂಯ ರೈ ವಹಿಸಿದ್ದರು. ಬಿ.ಬಿ.ಎ ವಿಭಾಗ ಮುಖ್ಯಸ್ಥ ಡಾ. ಯತೀಶ್ ಕುಮಾರ್‍‌ ಹಾಗು ಬಿ.ಎ ಪ್ರವಾಸೋದ್ಯಮ ವಿಭಾಗದ ಮುಖ್ಯಸ್ಥೆ ಡಾ.ಮೀನಾಕ್ಷಿ ಎಂ.ಎಂ, ಉಪನ್ಯಾಸಕರಾದ ಶ್ರೀರಾಜ್ ಬಿಎಸ್, ಪರಿಣಿತಾ ಶೆಟ್ಟಿ, ರೊವೀನಾಸೋನ್ಸ್, ಸುಹಾನಾಖುಲ್ಸಂ ಮೊದಲಾದವರು ಉಪಸ್ಥಿತರಿದ್ದರು.


ಆಹಾರಮೇಳದಲ್ಲಿ ಸುಮಾರು 65 ಕ್ಕೂ ಅಧಿಕ ಬಗೆಯ ಆಹಾರಖಾದ್ಯಗಳನ್ನು ವಿದ್ಯಾರ್ಥಿಗಳು ಮಾರಾಟಮಾಡಿದರು. ಕರಾವಳಿಯ ಹೆಸರಾಂತಸಸ್ಯಾಹಾರ ಖಾದ್ಯಗಳೊಂದಿಗೆ ಕೋರಿರೊಟ್ಟಿ, ಸೇಮೆದಡ್ಯೆ ಚಿಕನ್ ಕರಿ, ಮರ್ವಾಯಿ ಸುಕ್ಕದಂತಹ ಮಾಂಸಹಾರಿಖಾದ್ಯಗಳು, ವಿಶೇಷಊಟ, ಚಾಟ್‌ಗಳು, ಬೇಕರಿ ಐಟಂಗಳು, ಜ್ಯೂಸ್, ಮಾವು, ಹಲಸು ಮೊದಲಾದ ಹಣ್ಣುಗಳು, ಸಿಹಿಖಾದ್ಯಗಳು, ಜ್ಯೂಸ್‌ಗಳು, ವಿವಿಧಡೆ ಸರ್‍‌ಟ್‌ಗಳು ಹೀಗೆ ಆಹಾರ ವೈವಿಧ್ಯ ಗಮನ ಸೆಳೆಯಿತು. ಆಹಾರದೊಂದಿಗೆ ಕರಾವಳಿಯ ವೈಷಿಷ್ಟ್ಯವನ್ನು ಬಿಂಬಿಸುವ ಪೋಸ್ಟರ್‍‌ಗಳು, ವಿದ್ಯಾರ್ಥಿಗಳ ಸಂಗೀತ ಸಂಭ್ರಮಕ್ಕೆ ಮೆರುಗು ನೀಡಿತು. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

إرسال تعليق

0 تعليقات
إرسال تعليق (0)
Mandovi Motors Presents MONSOON BONANZA
Mandovi Motors Presents MONSOON BONANZA
To Top