ಮಂಗಳೂರು ಫಿಜ್ಜಾ ಬೈ ನೆಕ್ಸಸ್ ಮಾಲ್ ನಲ್ಲಿ - ಸ್ಟಾಟಿಕ್ ನಿಂದ ಎಲೆಕ್ಟ್ರಿಕ್ ಫಾಸ್ಟ್‌ ಚಾರ್ಜಿಂಗ್ ವ್ಯವಸ್ಥೆ

Upayuktha
0

ಮಂಗಳೂರು: ಸ್ಟಾಟಿಕ್ - ಭಾರತದ ಪ್ರತಿಷ್ಠಿತ ಎಲೆಕ್ಟ್ರಿಕ್ ವಾಹನಗಳ ತ್ವರಿತಗತಿಯ ಚಾರ್ಜಿಂಗ್ ವ್ಯವಸ್ಥೆ ನೀಡುವ ಕಂಪನಿ. ಮಂಗಳೂರಿನ ಅಗತ್ಯವನ್ನು ಮನಗಂಡು ಪಾಂಡೇಶ್ವರದ ಫಿಜ್ಜಾ ಬೈ ನೆಕ್ಸಸ್ ಮಾಲ್¸ ಸಹಭಾಗಿತ್ವದಲ್ಲಿ ಎರಡು ಫಾಸ್ಟ್ ಚಾರ್ಜಿಂಗ್ ಸಿಸ್ಟಮ್ ಅನ್ನು ಅಳವಡಿಸಿದೆ. 


ವಾರದ ಹಿಂದೆ ಲಕ್ನೋದಲ್ಲಿ ಅಳವಡಿಸಿ; ಈಗ ಮಂಗಳೂರಿನಲ್ಲಿ ಪ್ರತಿಷ್ಠಿತ ಫಿಜ್ಜಾ  ಬೈ ನೆಕ್ಸಸ್ ಮಾಲ್ ನಲ್ಲಿ  ಚಾರ್ಜಿಂಗ್ ಸಿಸ್ಟಮ್  ಆರಂಭಿಸಿದೆ. ಏಕಕಾಲದಲ್ಲಿ ಎರಡು ಕಾರ್ ಗಳನ್ನು 40 ನಿಮಿಷದಲ್ಲಿ 80% ಚಾರ್ಜ್ ಮಾಡುವ ವ್ಯವಸ್ಥೆ ಇಲ್ಲಿದೆ. 


ಮಾಧ್ಯಮವನ್ನು ಉದ್ದೇಶಿಸಿ ಮಾತನಾಡಿ, "ಗ್ರಾಹಕ ಸ್ನೇಹಿ ಈ ಚಾರ್ಜಿಂಗ್ ವ್ಯವಸ್ಥೆ ಉಪಯೋಗವಾಗುವುದಲ್ಲದೆ ಮಾಲ್ ಗೆ ಭೇಟಿ ನೀಡುವವರಿಗೆ ಇದು ಸಹಾಯಕಾರಿ ಎಂದು ಸ್ಟಾಟಿಕ್ ನ ಸಂಸ್ಥಾಪಕ ಸದಸ್ಯ ಹಾಗೂ ತಾಂತ್ರಿಕ ಕಾರ್ಯನಿರ್ವಹಣಾಧಿಕಾರಿ ಆಕಾಶ್‌ದೀಪ್‌ ತ್ಯಾಗಿ ತಿಳಿಸಿದ್ದಾರೆ. ಕರ್ನಾಟಕ ಮತ್ತು ಕರಾವಳಿಯಲ್ಲಿ ಎಲೆಕ್ಟ್ರಿಕಲ್ ವಾಹನಗಳು ಹೆಚ್ಚಾಗುತ್ತಿದ್ದು ನಮ್ಮ ಯೋಜನೆಗಳು ಮುಂದಿನ ದಿನಗಳಲ್ಲಿ ಮತ್ತಷ್ಟು ವೇಗ ಪಡೆದುಕೊಳ್ಳಲಿವೆ'' ಎಂದರು.


ಫಿಜ್ಜಾ ಬೈ ನೆಕ್ಸಸ್ ಮಾಲ್  ಮಂಗಳೂರಿನ ಅಂತಾರಾಷ್ಟ್ರೀಯ ಮಟ್ಟದ ಮಾಲ್ ಆಗಿದ್ದು ಜಗತ್ತಿನ 200ಕ್ಕೂ ಹೆಚ್ಚು ಪ್ರತಿಷ್ಠಿತ ಬ್ರಾಂಡ್‌ಗಳು ಇಲ್ಲಿವೆ. ಗ್ರಾಹಕರು ತಮ್ಮ ವ್ಯವಹಾರದೊಂದಿಗೆ ವಿಶೇಷ ಫುಡ್ ಕೋರ್ಟ್, ಸಿನಿಮಾ ಮತ್ತು ಆಟೋಟಗಳ ವ್ಯವಸ್ಥೆ  ಇಲ್ಲಿನ ಜನಾಕರ್ಷಣೆಯಾಗಿದೆ.


ಮಂಗಳೂರು ಮಾಲ್‌ನ ಮುಖ್ಯಸ್ಥ ಅರವಿಂದ್ ಶ್ರೀವಾಸ್ತವ್ ಮಾತನಾಡಿ, "ಸ್ಟಾಟಿಕ್ ನ ಈ ಚಾರ್ಜಿಂಗ್ ವ್ಯವಸ್ಥೆ ಗ್ರಾಹಕರಿಗೆ ಅನುಕೂಲವಾಗಿದ್ದು ನಮ್ಮಲ್ಲಿ ಬರುವ ಗ್ರಾಹಕರಿಗೆ ತುಂಬಾ ಉಪಯೋಗವಾಗಲಿದೆ'' ಎಂದರು. 

ಸ್ಟಾಟಿಕ್ ಕಂಪನಿ ಈ ವರ್ಷದಲ್ಲಿ ಭಾರತದಾದ್ಯಂತ 20 ಸಾವಿರಕ್ಕೂ ಹೆಚ್ಚು ಚಾರ್ಜಿಂಗ್ ಸ್ಟೇಷನ್‌ಗಳನ್ನು ಹಾಕುವ ಗುರಿ ಹೊಂದಿದೆ. ಹಾಗೆ ಈ ಚಾರ್ಜಿಂಗ್ ವ್ಯವಸ್ಥೆ ಫ್ರಾಂಚೈಸಿ ಮಾದರಿಯಲ್ಲಿ ಇರಲಿದೆ" ಎಂದರು.

ಎಲೆಕ್ಟ್ರಿಕ್ ವಾಹನಗಳು ಹೆಚ್ಚುತ್ತಿರುವ ಈ ಸಂದರ್ಭದಲ್ಲಿ ಮಂಗಳೂರಿನ ಫಿಜ್ಜಾ  ಬೈ ನೆಕ್ಸಸ್ ಮಾಲ್ ನಲ್ಲಿ ಈ ಚಾರ್ಜಿಂಗ್ ಸಿಸ್ಟಮ್ ಬಂದಿರುವುದು ವಿಶೇಷವಾಗಿದೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter


Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top