ಫಿಲೋಮಿನಾ ಪಿಯು ಕಾಲೇಜಿಗೆ ರಾಜ್ಯಮಟ್ಟ ಬಿ.ವೋಕ್ ಉತ್ಸವ ಸ್ಪರ್ಧೆಯಲ್ಲಿ ಹಲವು ಪ್ರಶಸ್ತಿ

Upayuktha
0

ಪುತ್ತೂರು: ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಕಾಲೇಜು ಇದರ ಆಶ್ರಯದಲ್ಲಿ ನಡೆದ ಬಿ.ವೋಕ್ 2023 ಉತ್ಸವ ರಾಜ್ಯಮಟ್ಟದ ಎಜುಕೇಶನ್ ಕಲ್ಚರಲ್ ಫೆಸ್ಟ್ನಲ್ಲಿ ಪುತ್ತೂರಿನ ಸಂತ ಫಿಲೋಮಿನಾ ಪದವಿಪೂರ್ವ ಕಾಲೇಜಿನ ವಿದ್ಯಾರ್ಥಿಗಳು ಹಲವು ಪ್ರಶಸ್ತಿ ಪಡೆದುಕೊಂಡಿರುತ್ತಾರೆ. 


ದ್ವಿತೀಯ ವಿಜ್ಞಾನ ವಿಭಾಗದ ನೋರ್ಮನ್ ಡೇರನ್ ಡಿ ಸೋಜಾ ಮೋಟಾರ್ ಮೌತ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ದ್ವಿತೀಯ ವಿಜ್ಞಾನ ವಿಭಾಗದ ಕೃಷ್ಣ ಪ್ರಿಯ ಎ ಮೋಟಾರ್ ಮೌತ್ ಸ್ಪರ್ಧೆಯಲ್ಲಿ  ದ್ವಿತೀಯ ಸ್ಥಾನ, ಪ್ರಥಮ ವಾಣಿಜ್ಯ ವಿಭಾಗದ ಧನ್ವೀನ್ ಮತ್ತು ಸಾಕೀನಾ ಆಯ್ಮಾನ್ ಇವರು ಶಾರ್ಕ್ ಟ್ಯಾಂಕ್ ಸ್ಪರ್ಧೆಯಲ್ಲಿ ಪ್ರಥಮ ಸ್ಥಾನ, ಹಾಗೂ ಚಲನಚಿತ್ರ ರಸಪ್ರಶ್ನೆಯಲ್ಲಿ ದ್ವಿತೀಯ ವಿಜ್ಞಾನ ವಿಭಾಗದ ನಿರೋಶ್ ರೈ ಮತ್ತು ರಾಕೇಶ್ ರೈ ದ್ವಿತೀಯ ಸ್ಥಾನವನ್ನು ಪಡೆದುಕೊಂಡಿರುತ್ತಾರೆ.


ಕಾಲೇಜಿನ ಪ್ರಾಂಶುಪಾಲ ರೆ.ಫಾ ಅಶೋಕ್ ರಾಯನ್ ಕ್ರಾಸ್ತಾ ವಿದ್ಯಾರ್ಥಿಗಳನ್ನು ಅಭಿನಂದಿಸಿದರು. ಪ್ರದರ್ಶನ ಕಲಾ ವಿಭಾಗದ ಸುಮನಾ ಕೆ, ರಶ್ಮಿ ಪಿ ಎಸ್ ಹಾಗೂ ಭರತ್ ಜಿ ಪೈ ಉಪಸ್ಥಿತರಿದ್ದರು.

 ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 


إرسال تعليق

0 تعليقات
إرسال تعليق (0)

#buttons=(Ok, Go it!) #days=(20)

Our website uses cookies to enhance your experience. Learn More
Ok, Go it!
To Top