ಶ್ರೀನಿವಾಸ ವಿಶ್ವವಿದ್ಯಾಲಯ : ಉನ್ನತ ಶಿಕ್ಷಣದಲ್ಲಿ ನವೀನ ತಂತ್ರಜ್ಞಾನಗಳು

Upayuktha
0


ಮಂಗಳೂರು:
ಶ್ರೀನಿವಾಸ ವಿಶ್ವವಿದ್ಯಾಲಯದ ಆಂತರಿಕ ಗುಣಮಟ್ಟ ಭರವಸೆಕೋಶ (IQAC) ಮತ್ತು ಇನ್‌ಸ್ಟಿಟ್ಯೂಟ್ ಆಫ್‌ ಸೋಶಿಯಲ್‌ಸೈನ್ಸ್‌ ಮತ್ತು ಹ್ಯುಮಾನಿಟೀಸ್ ಶ್ರೀನಿವಾಸ ವಿಶ್ವವಿದ್ಯಾಲಯದ ಸಿಟಿ ಕ್ಯಾಂಪಸ್‌ನಲ್ಲಿ “ಉನ್ನತ ಶಿಕ್ಷಣದಲ್ಲಿ ನವೀನ ತಂತ್ರಜ್ಞಾನಗಳು” ಎಂಬ ವಿಷಯದೊಂದಿಗೆ ಒಂದು ದಿನದ ರಾಷ್ಟ್ರೀಯ ಮಟ್ಟದ ಸಮ್ಮೇಳನವನ್ನು 2023ರ ಜೂನ್28 ರಂದು ಆಯೋಜಿಸಿತ್ತು.


ಕಾರ್ಯಕ್ರಮದ ಮುಖ್ಯಅತಿಥಿಯಾಗಿ ಆಗಮಿಸಿದ್ದ ಪ್ರೊ. ಮೊಹಮದುನ್ನಿಅಲಿಯಾಸ್ಮುಸ್ತಫಾ, ಪ್ರಾಧ್ಯಾಪಕರು ಮತ್ತು ಕೇರಳದ ಕೇಂದ್ರೀಯ ವಿಶ್ವವಿದ್ಯಾಲಯದ ಶಿಕ್ಷಣವಿಭಾಗದ ಮುಖ್ಯಸ್ಥರು ಸಭೆಯನ್ನುದ್ದೇಶಿಸಿ ಮಾತನಾಡಿ, ಇಂದಿನ ಶಿಕ್ಷಣದಲ್ಲಿ ತಂತ್ರಜ್ಞಾನದ ಮಹತ್ವದ ಪಾತ್ರವನ್ನು ತಿಳಿಸಿದರು. ಶಿಕ್ಷಣದಲ್ಲಿ ಆರ್ಟಿಫಿಷಿಯಲ್ ಇಂಟೆಲಿಜೆಂನ್ಸಿ (AI) ಸೇರ್ಪಡೆಯನ್ನು ಅವರು ನಿರ್ದಿಷ್ಟವಾಗಿ ಎತ್ತಿ ತೋರಿಸಿದರು.(AI) ಅನುಮಾನಗಳನ್ನು ಪರಿಹರಿಸುವ ಮತ್ತು ಸಮರ್ಥವಾಗಿ ಉತ್ತರಗಳನ್ನು ನೀಡುವ ಸಾಮರ್ಥ್ಯವನ್ನು ಹೊಂದಿದೆ. ಆದರೂ (AI) ಮಾನವ ಭಾವನೆಗಳನ್ನು ಗ್ರಹಿಸುವ ಸಾಮರ್ಥ್ಯವನ್ನು ಇನ್ನೂ ಹೊಂದಿಲ್ಲ.


ತಂತ್ರಜ್ಞಾನದ ಪ್ರಭಾವದಿಂದ ಶಿಕ್ಷಣವ್ಯವಸ್ಥೆಗಳು ವಿಕಸನಗೊಳ್ಳುತ್ತಿವೆ ಮತ್ತು ಬದಲಾಗುತ್ತಿರುವ ಕಾಲಕ್ಕೆ ಹೊಂದಿಕೊಳ್ಳುತ್ತಿವೆ ಎಂದು ಅವರು ತಿಳಿಸಿದರು.


ಡಾ.ಪಿ.ಎಸ್.ಐತಾಳ್, ಶ್ರೀನಿವಾಸ ವಿಶ್ವವಿದ್ಯಾನಿಲಯದ ಉಪಕುಲಪತಿಗಳು ಅಧ್ಯಕ್ಷೀಯ ಭಾಷಣದಲ್ಲಿ ಕಲಿಕೆಯ ಪ್ರಕ್ರಿಯೆಯಲ್ಲಿ ತಂತ್ರಜ್ಞಾನವನ್ನು ಬಳಸಿಕೊಳ್ಳುವ ಮಹತ್ವವನ್ನು ತಿಳಿಸಿದರು. ಅಧ್ಯಯನಕ್ಕೆ ಬಂದಾಗ ಯಾವುದೇ ವಯಸ್ಸು ಅಥವಾ ವೃತ್ತಿಯ ನಿರ್ಬಂಧಗಳಿಲ್ಲ ಎಂದು ತಿಳಿಸಿದರು.


ಈ ಸಮ್ಮೇಳನದಲ್ಲಿ ಕಳೆದ ಸಮ್ಮೇಳನದ ಸಾರಾಂಶ ಮತ್ತು ನಡಾವಳಿಗಳನ್ನು ಬಿಡುಗಡೆ ಮಾಡಲಾಯಿತು.


ಸಮ್ಮೇಳನದಲ್ಲಿ ಸಹಾಯಕ ಪ್ರಾಧ್ಯಾಪಕಿ ಹಾಗೂ ಸಮ್ಮೇಳನದ ಸಹಸಂಯೋಜಕಿ ಡಾ.ವಿದ್ಯಾ ಎನ್., ಸಹಾಯಕ ಪ್ರಾಧ್ಯಾಪಕರಾದ ಪ್ರೊ.ಜಾಯ್ಸ್‌ನ್‌ ಫ್ರೇಂಕಿ ಕಾರ್ಡೋಜಾ, ಪ್ರೊ.ಸುಶ್ಮಿತಾ, ಪ್ರೊ.ಪ್ರಜ್ಞಾ ಬಿ., ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು. ಸಮ್ಮೇಳನದಲ್ಲಿ 60ಮಂದಿ ಸಕ್ರಿಯವಾಗಿ ಭಾಗವಹಿಸಿದರು ಮತ್ತು ಒಟ್ಟು 47 ಸಂಶೋಧನಾ ಪ್ರಬಂಧಗಳನ್ನು ಮಂಡಿಸಲಾಯಿತು.


ಶ್ರೀನಿವಾಸ ವಿಶ್ವವಿದ್ಯಾನಿಲಯದ ಪ್ರಾಧ್ಯಾಪಕಿ ಮತ್ತು ಐಕ್ಯೂಎಸಿ ಸಂಯೋಜಕಿ ಡಾ.ಲವೀನಾ ಡಿಮೆಲ್ಲೋ ಸ್ವಾಗತಿಸಿದರು, ಐಎಂಸಿ ಡೀನ್‌ ವೆಂಕಟೇಶ್ ಅಮೀನ್ ವಂದಿಸಿದರು. ಎಂಎಸ್‌ಡಬ್ಲ್ಯೂ ವಿದ್ಯಾರ್ಥಿಗಳಾದ ಅರುಣ್ ಮತ್ತು ಜಿಬಿನ್‌ ಕಾರ್ಯಕ್ರಮ ನಿರೂಪಿಸಿದರು.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top