ಸುರತ್ಕಲ್: ವಿನಮ್ರ ಇಡ್ಮಿದು ಹಾಡಿದ “ಮೋಕೆ ಜೋಕೆ" ಎಂಬ ತುಳು ಭಾವಗೀತೆಯ ಆಡಿಯೋ ವಿಡಿಯೋ ನಗರದ ವುಡ್ ಲ್ಯಾಂಡ್ ಹೋಟೆಲಿನಲ್ಲಿ ಗುರುವಾರ (ಜೂ.29) ನಡೆದ ಕಾರ್ಯಕ್ರಮದಲ್ಲಿ ಬಿಡುಗಡೆಗೊಂಡಿತು.
ಯಕ್ಷಗಾನ ಅರ್ಯಧಾರಿಗಳು ಹಾಗೂ ಪ್ರವಚನಕಾರರು, ಕರ್ನಾಟಕ ತುಳು ಸಾಹಿತ್ಯ ಅಕಾಡೆಮಿ, ಕರ್ನಾಟಕ ಜಾನಪದ ಮತ್ತು ಯಕ್ಷಗಾನ ಅಕಾಡೆಮಿ ಮಾಜಿ ಸದಸ್ಯರಾದ ಪ್ರೊ.ಭಾಸ್ಕರ್ ರೈ ಕುಕ್ಕುವಳ್ಳಿ ಹಾಡನ್ನು ಬಿಡುಗಡೆಗೊಳಿಸಿದರು. ಅವರು ಮಾತನಾಡುತ್ತಾ, “ಹಸಿ ಗೋಡೆಗೆ ಕಲ್ಲು ಹೊಡೆದರೆ ಹೇಗೆ ಗಟ್ಟಿಯಾಗಿ ನಿಲ್ಲುತ್ತದೋ ಹಾಗೆಯೀ ಎಳೆಯ ಪ್ರಾಯದಲ್ಲಿಯೇ ಮಕ್ಕಳಿಗೆ ಒಳ್ಳೆಯ ಸಂಸ್ಕಾರ ಕೊಟ್ಟರೆ ಅವರು ಚೆನ್ನಾಗಿ ಬೆಳೆಯುತ್ತಾರೆ. ಕಲಿಕೆಯ ಜೊತೆ ಜೊತೆಗೆ ಮಕ್ಕಳು ಉತ್ತಮ ಹವ್ಯಾಸಗಳನ್ನು ರೂಢಿಸಿಕೊಂಡರೆ ಅವರ ವ್ಯಕ್ತಿತ್ವ ಚೆನ್ನಾಗಿ ರೂಪುಗೊಳ್ಳುತ್ತದೆ. ಬಾಲ ಪ್ರತಿಭೆ ವಿನಮ್ರ ಇಡ್ಕಿದು ಮುಂದೆ ಉತ್ತಮ ಗಾಯಕನಾಗಬಲ್ಲ ಎಂಬುದನ್ನು ಅವನ ಧ್ವನಿ ಮತ್ತು ಹಾಡು ತಿಳಿಸುತ್ತದೆ” ಎಂದು ನುಡಿದರು.
ಕಾರ್ಯಕ್ರಮದ ಮುಖ್ಯ ಅತಿಥಿಯಾಗಿ ಸುರತ್ಕಲ್ ಗೋವಿಂದದಾಸ ಕಾಲೇಜಿನ ಪ್ರಾಂಶುಪಾಲರಾದ ಪ್ರೊ. ಪಿ. ಕೃಷ್ಣಮೂರ್ತಿ ಪಾಲ್ಗೊಂಡಿದ್ದರು. ಅವರು ಮಾತನಾಡುತ್ತಾ , “ತುಳುವಿಗೆ ಹೊಸ ಹೊಸ ಗಾಯಕರು ಮತ್ತು ಹೊಸ ಹೊಸ ಭಾವಗೀತೆಗಳು ಬರಬೇಕಾದ ಅಗತ್ಯ ಇಂದಿನ ದಿನಗಳಲ್ಲಿ ಬಹು ಮುಖ್ಯವಾಗಿದೆ. ಬಾಲ ಪ್ರತಿಭೆ ವಿನಮ್ರ ಇಡ್ಕಿದು ಹಾಡಿದ ತುಳು ಹಾಡು ಎಲ್ಲರನ್ನ ಹೃನ್ಮನ ಸೆಳೆಯಲಿ. ಮುಂದಕ್ಕೆ ಒಳ್ಳೆಯ ಗಾಯಕನಾಗಲಿ ಎಂದು ಶುಭ ಹಾರೈಸಿದರು.
ಕಾರ್ಯಕ್ರಮದಲ್ಲಿ ವಿನಮ್ರ ಇಡ್ಕಿದು, ಚಿತ್ರೀಕರಣ /ನಿರ್ದೇಶನ /ಸಂಕಲನಗಳನ್ನು ಮಾಡಿದ ವಿದ್ಯಾ.ಯು ಉಪಸ್ಥಿತರಿದ್ದರು. ರಘು ಇಡ್ಕಿದು ಕಾರ್ಯಕ್ರಮ ನಿರ್ವಹಿಸಿದರು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ