'ಸಾವರ್ಕರ್ ನಾನು ಕಂಡಂತೆʼ ಪಿ.ಪಿ.ಟಿ ಪ್ರಸ್ತುತಿ ಸ್ಪರ್ಧೆ

Upayuktha
0

ಮಂಗಳೂರು: ಸಾವರ್ಕರ್ ಅವರ ಕುರಿತಾಗಿ ʼಸಾವರ್ಕರ್ ನಾನು ಕಂಡಂತೆʼ ಎಂಬ ವಿಷಯದ ಬಗ್ಗೆ ಪಿ.ಪಿ.ಟಿ ಪ್ರಸ್ತುತಿ ಸ್ಪರ್ಧೆಯನ್ನು ಸಂವಾದ ಮಾಧ್ಯಮ ಸಂಸ್ಥೆಯ ಸಹಯೋಗದೊಂದಿಗೆ  ಆಯೋಜಿಸಲಾಗಿದೆ. ಸ್ಪರ್ಧೆಯು ಜೂನ್ 11 ರ ಭಾನುವಾರದಂದು ಕೊಡಿಯಾಲ್ ಬೈಲ್ ನ ಶಾರದಾ ವಿದ್ಯಾಸಂಸ್ಥೆಯಲ್ಲಿ ಜರುಗಲಿದೆ.


ಸ್ಪರ್ಧೆಯಲ್ಲಿ  ಮಂಗಳೂರು ಮಹಾನಗರ ಪಾಲಿಕೆ ವ್ಯಾಪ್ತಿಗಳ ಮತ್ತು ಮಂಗಳೂರು ವಿಶ್ವವಿದ್ಯಾನಿಲಯದ ಸ್ನಾತಕ (ಪದವಿ) ಮತ್ತು ಸ್ನಾತಕೋತ್ತರ ವಿಧ್ಯಾರ್ಥಿಗಳಿಗೆ ಭಾಗವಹಿಸಲು ಅವಕಾಶವಿದೆ. ವಿಜೇತರಿಗೆ ತಲಾ ₹ 3000, ₹2000, ₹1000 ನಗದನ್ನು ಪ್ರಥಮ, ದ್ವಿತೀಯ, ತೃತೀಯ ಬಹುಮಾನವಾಗಿ ನೀಡಲಾಗುವುದು. ಸ್ಪರ್ಧೆಯಲ್ಲಿ ಪಾಲ್ಗೊಳ್ಳುವ ಸ್ಪರ್ಧಾರ್ತಿಗಳಿಗೆ ಪ್ರಮಾಣ ಪತ್ರ ನೀಡಲಾಗುವುದು


ಸ್ಪರ್ಧೆಯಲ್ಲಿ ಕನ್ನಡ ಮತ್ತು ಆಂಗ್ಲಭಾಷೆಯನ್ನು ಬಳಸಬಹುದು. ಪಿ.ಪಿ.ಟಿ ಗರಿಷ್ಠ 10 ಪುಟಗಳನ್ನು(ಸ್ಲೈಡ್) ಹೊಂದಿರಬೇಕು. 8+2 ನಿಮಿಷಗಳ ಕಾಲದ ಪ್ರಸ್ತುತಿಗೆ ಕಾಲಾವಕಾಶವಿದೆ. ಆಸಕ್ತ ಅಭ್ಯರ್ಥಿಗಳು 2023 ಜೂನ್ 7 ರ ಒಳಗಾಗಿ ನೋಂದಾವಣೆ ಮಾಡಿಕೊಳ್ಳಬಹುದು ಹಾಗೂ ನೋಂದಾಯಿಸಿಕೊಂಡ ಸ್ಪರ್ಧಿಗಳು ಜೂನ್ 9ರ ಒಳಗೆ ಆಯೋಜಕರಿಗೆ ತಮ್ಮ  ಪಿ.ಪಿ.ಟಿ ಯನ್ನು savarkarppt@gmail.com ಮೂಲಕ ಕಳುಹಿಸಿಕೊಡಲು ಸೂಚಿಸಲಾಗಿದೆ.


ಹೆಚ್ಚಿನ ಮಾಹಿತಿಗಾಗಿ, +91 8553119780, +91 9481527694, +91 7348952564 ಸಂಖ್ಯೆಗಳನ್ನು ಸಂಪರ್ಕಿಸಲು ಕೋರಲಾಗಿದೆ. 


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
Maruti Suzuki Festival of Colours
Maruti Suzuki Festival of Colours
To Top