ಬೆಂಗಳೂರು: ರಂಗ ಚಂದಿರ ತಂಡದ ವತಿಯಿಂದ ರಾಷ್ಟ್ರ ಪ್ರಶಸ್ತಿ ವಿಜೇತ ಸಂಚಾರಿ ವಿಜಯ್ ಅವರ ಮೂರನೇ ವರ್ಷದ ಸ್ಮರಣೆ ಅಂಗವಾಗಿ ಜೂನ್ 15ರಂದು ಸಂಜೆ 5 ಗಂಟೆಗೆ ಸರಿಯಾಗಿ ಪಿ & ಟಿ ಕ್ವಾಟ್ರಸ್ ಕಾವಲ್ ಬೈರಸಂದ್ರ ಬೆಂಗಳೂರು ಅಂಚೆ ನೌಕರ ಮಕ್ಕಳ ಬೇಸಿಗೆ ಶಿಬಿರದ ಸಮಾರೋಪ ಸಮಾರಂಭದಲ್ಲಿ ಮಕ್ಕಳಿಂದ ಜಾನಪದ ಗೀತೆ, ರಂಗಗೀತೆಗಳು ಮತ್ತು ನೌಕರರು ನೌಕರರ ಮಕ್ಕಳಿಂದ ಡೊಳ್ಳು ಕುಣಿತ ಪ್ರದರ್ಶನವನ್ನು ಏರ್ಪಡಿಸಲಾಗಿದೆ.
ಈ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಬೆಂಗಳೂರು ಪೂರ್ವ ವಿಭಾಗದ ಸೀನಿಯರ್ ಸೂಪರಿಂಟೆಂಡೆಂಟ್ ಆಫ್ ಪೋಸ್ಟ್ ಕೆ ರಂಜಿತ್ ಕುಮಾರ್, ಮೈಕೋ ಮಂಜು, ಡಾ. ಮಾಗಡಿ ಗಿರೀಶ್, ಡಾ. ಬೇಲೂರು ರಘುನಂದನ್, ಭಾಗವಹಿಸಲಿದ್ದಾರೆ. ಜಾನಪದ ಕಲಾವಿದ ಅಂತರಾಷ್ಟ್ರೀಯ ಡೊಳ್ಳು ಕಲಾವಿದರಾದಂತ ಹಿದಾಯತ್ ಅಹಮದ್ ರವರಿಗೆ ಸಂಚಾರಿ ವಿಜಯ್ ರಂಗ ಪುರಸ್ಕಾರವನ್ನು ನೀಡಲಾಗುವುದು ಎಂದು ರಂಗಚಂದಿರ ಕಾರ್ಯದರ್ಶಿ ಜಿಪಿಓ ಚಂದ್ರು ಅವರು ಪ್ರಕಟಣೆಯಲ್ಲಿ ತಿಳಿಸಿದ್ದಾರೆ.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ


