ಪುತ್ತೂರು: ನಾವು ಪ್ರಸ್ತುತ ಯುಗದಲ್ಲಿ ಬದುಕಬೇಕೆಂದರೆ ಜೀವನ ಕೌಶಲ್ಯದ ಅಗತ್ಯತೆಯಿದೆ. ಹಾಗಾಗಿ ಕಾಲೇಜಿನಲ್ಲಿ ನಡೆಯುವ ಕಾರ್ಯಕ್ರಮಗಳು ವಿದ್ಯಾರ್ಥಿಗಳ ವ್ಯಕ್ತಿತ್ವ ವಿಕಸನಕ್ಕೆ ಕಾರಣವಾಗುತ್ತದೆ. ನಾವೆಲ್ಲರೂ ಪ್ರತಿದಿನ ಹೊಸತನವನ್ನು ಕಲಿಯಬೇಕು ಇದು ಬಹಳ ಮುಖ್ಯವಾದದ್ದು. ಜೀವನದ ಗುರಿಯನ್ನುತಲುಪಲು ವಿದ್ಯಾರ್ಥಿದೆಸೆಯಲ್ಲಿಯೇ ಬೇಕಾದ ಪೂರ್ವತಯಾರಿ ಕೈಗೊಳ್ಳಬೇಕು ಎಂದು ವಾರಣಾಶಿ ಅಭಿವೃದ್ಧಿ ಮತ್ತು ಸಂಶೋಧಕರ ಪ್ರತಿಷ್ಠಾನ ಅಡ್ಯನಡ್ಕ ಇಲ್ಲಿನ ವಿಜ್ಞಾನಿ ಡಾ.ನಿವೇದಿತಾ.ಬಿ ರಾಮಕುಂಜ ಹೇಳಿದರು.
ಇವರು ಪುತ್ತೂರಿನ ವಿವೇಕಾನಂದ ಕಾಲೇಜು ಕಲಾ,ವಿಜ್ಞಾನ ಮತ್ತು ವಾಣಿಜ್ಯ ಮಹಾವಿದ್ಯಾಲಯ (ಸ್ವಾಯತ್ತ)ವಿಜ್ಞಾನ ಸಂಘ ಹಾಗೂ ಐಕ್ಯೂಎಸಿ ಜಂಟಿ ಸಹಯೋಗದಲ್ಲಿ ಆಯೋಜಿಸಿದ ಅಂತರ್ ತರಗತಿ ಸ್ಪರ್ಧೆಯಲ್ಲಿ ಮುಖ್ಯ ಅತಿಥಿಯಾಗಿ ಮಾತನಾಡಿದರು.
ಈ ಸಂದರ್ಭದಲ್ಲಿ ಕಾಲೇಜಿನ ಪ್ರಾಂಶುಪಾಲ ಪ್ರೊ. ವಿಷ್ಣು ಗಣಪತಿ ಭಟ್ ಮಾತನಾಡಿ, ಇಂತಹ ಸ್ಪರ್ಧೆಗಳಲ್ಲಿ ಭಾಗವಹಿಸುವುದು ಉತ್ತಮ. ಸ್ಪರ್ಧೆಗಳು ನಿಮ್ಮಲ್ಲಿರುವ ಕೌಶಲ್ಯಾಭಿವೃದ್ಧಿಗೆ ಸಹಾಯಕವಾಗುತ್ತದೆ. ಕೇವಲ ಅಂಕಗಳನ್ನು ಪಡೆದುಕೊಳ್ಳುವುದು ಮಾತ್ರವಲ್ಲದೆ ಸಮಾಜದಲ್ಲಿ ಬದುಕಲು ಬೇಕಾಗುವಂತಹ ಉತ್ತಮ ಕೌಶಲ್ಯಗಳನ್ನು ನಿಮ್ಮದಾಗಿಸಿಕೊಳ್ಳಿ ಎಂದು ನುಡಿದರು.
ಸಮಾರೋಪ ಸಮಾರಂಭ
ಕಾಲೇಜು ಜೀವನ ಬಹಳ ಅಮೂಲ್ಯವಾದದ್ದು. ಇಲ್ಲಿ ಕಳೆಯುವ ಪ್ರತಿಯೊಂದು ಕ್ಷಣವು ಜೀವನದ ಕೊನೆಯವರೆಗೂ ಉತ್ತಮ ನೆನಪಾಗಿ ಉಳಿಯುತ್ತದೆ. ಜೀವನದಲ್ಲಿ ಮುಂದೆ ಸಾಗಬೇಕೆಂದರೆ ಶಿಕ್ಷಣವು ಬಹಳ ಮುಖ್ಯವಾದದ್ದು. ನಾವು ಶಿಕ್ಷಕರು ಹಾಗೂ ನಮ್ಮತಂದೆ ತಾಯಿಗಳನ್ನು ಮರೆಯಬಾರದು ಅವರನ್ನು ಸದಾ ಗೌರವಿಸಬೇಕು ಎಂದು ಕಾರ್ಯಕ್ರಮಕ್ಕೆ ಮುಖ್ಯ ಅತಿಥಿಯಾಗಿ ಭಾಗವಹಿಸಿದ ನಟಿ ಅನ್ವಿತಾ ಸಾಗರ್ ಹೇಳಿದರು.
ಈ ಸಂದರ್ಭದಲ್ಲಿ ಕಾಲೇಜಿನ ಆಡಳಿತ ಮಂಡಳಿಯ ಸಂಚಾಲಕ ಮುರಳಿ ಕೃಷ್ಣ ಕೆ. ಎನ್‍ಅಧ್ಯಕ್ಷೀಯ ಮಾತುಗಳನ್ನಾಡಿ, ಬದುಕಿಗೆ ಬೇಕಾದ ಶಿಕ್ಷಣವು ಈ ಸಂಸ್ಥೆಯಲ್ಲಿದೊರೆಯುತ್ತದೆ. ಎಷ್ಟೇ ಮೋಜು ಮಸ್ತಿಗಳಿದ್ದರೂ ವಿದ್ಯಾಭ್ಯಾಸವನ್ನು ಮರೆಯಬಾರದು. ಪರಿಶ್ರಮ ಪಟ್ಟು ಬೆಳೆದು ಬಂದವರನ್ನು ಆದರ್ಶವಾಗಿರಿಸಿಕೊಳ್ಳಬೇಕು ಎಂದು ವಿದ್ಯಾರ್ಥಿಗಳಿಗೆ ಶುಭಹಾರೈಸಿದರು.
ಕಾರ್ಯಕ್ರಮದಲ್ಲಿ ರ್‍ಯಾಂಕ್ ಪಡೆದ ಹಾಗೂ ಉನ್ನತ ಸಾಧನೆ ಮಾಡಿದ ವಿದ್ಯಾರ್ಥಿಗಳನ್ನು ಗೌರವಿಸಲಾಯಿತು.
ಕಾರ್ಯಕ್ರಮವನ್ನು ವಿಜ್ಞಾನ ಸಂಘದ ಸಂಯೋಜಕಿ ಹಾಗೂ ರಸಾಯನಶಾಸ್ತ್ರದ ಉಪನ್ಯಾಸಕಿ ನಿಶಾ ಸ್ವಾಗತಿಸಿ, ತೃತೀಯ ಬಿಎಸ್ಸಿ ವಿಭಾಗದ ವಿದ್ಯಾರ್ಥಿಗಳಾದ ಭವ್ಯ ವಂದಿಸಿ, ಅನನ್ಯ. ಪಿ ನಿರೂಪಿಸಿದರು.
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ