ಮಂಗಳೂರು: ನಗರದ ವಿಶ್ವವಿದ್ಯಾನಿಲಯ ಕಾಲೇಜಿನ ರವೀಂದ್ರಕಲಾಭವನದಲ್ಲಿ ಇತ್ತೀಚೆಗೆ ಕಾಲೇಜಿನ ಹಿಂದಿಸಂಘ ಹಾಗೂ ಮಂಗಳೂರು ವಿಶ್ವವಿದ್ಯಾನಿಲಯ ಹಿಂದಿ ಅಧ್ಯಾಪಕರ ಸಂಘಗಳ ಸಹಯೋಗದೊಂದಿಗೆ ಎನ್ಇಪಿ ಪಠ್ಯಕ್ರಮದಡಿ ನಾಲ್ಕನೇ ಸೆಮಿಸ್ಟರ್‍ನಲ್ಲಿ ಹಿಂದಿ ಕುರಿತು ಕಾರ್ಯಾಗಾರವೊಂದನ್ನು ಆಯೋಜಿಸಲಾಗಿತ್ತು.
ಕುಂದಾಪುರದ ಭಂಡಾರ್‍ಕರ್‍ಸ್ ಕಲಾ ಮತ್ತು ವಿಜ್ಞಾನ ಕಾಲೇಜಿನ ಪ್ರಾಂಶುಪಾಲ ಡಾ.ನಾರಾಯಣಶೆಟ್ಟಿ ಕಾರ್ಯಾಗಾರವನ್ನು ಉದ್ಘಾಟಿಸಿದರು. ದತ್ತಾತ್ರೇಯ ಭಟ್ ಅತಿಥಿ ಭಾಷಣ ಮಾಡಿದರು. ಆಳ್ವಾಸ್ ಕಾಲೇಜು ಮೂಡುಬಿದಿರೆ ಹಿಂದಿ ವಿಭಾಗದ ಮುಖ್ಯಸ್ಥ ಡಾ.ರಾಜೀವ ಸಿ ಸಂಘದ ವಾರ್ಷಿಕ ವರದಿ ಮಂಡಿಸಿದರು. ವಿವಿ ಕಾಲೇಜಿನ ಪ್ರಭಾರಿ ಪ್ರಾಂಶುಪಾಲೆ ಡಾ.ಲತಾ ಪಂಡಿತ್ ಅಧ್ಯಕ್ಷೀಯ ನುಡಿಗಳನ್ನಾಡಿದರು.
'ಮುಹಾಸ್' ಅಧ್ಯಕ್ಷೆ ಡಾ.ಕಲ್ಪನಾಪ್ರಭು ಸ್ವಾಗತಿಸಿದರು. ಶ್ರೀಮತಿ. ಪ್ರಫುಲ್ಲ ವಂದಿಸಿದರು. ವಿವಿ ಕಾಲೇಜಿನ ಹಿಂದಿವಿಭಾಗದ ಮುಖ್ಯಸ್ಥೆ ಡಾ.ಸುಮಾ ಟಿ ಆರ್ ಅವರು ಸಮಾರಂಭವನ್ನು ನಿರೂಪಿಸಿದರು. ಕಾಲೇಜಿನ ಸ್ನಾತಕೋತ್ತರ ಹಿಂದಿವಿಭಾಗದ ಮುಖ್ಯಸ್ಥೆ ಡಾ. ನಾಗರತ್ನಾಎನ್ ರಾವ್, ಉಪನ್ಯಾಸಕಿಯರಾದ ಡಾ. ನಾಗರತ್ನಶೆಟ್ಟಿ ಮತ್ತು ಡಾ. ರಶ್ಮಿ ಬಿ ವಿ ಮೊದಲಾದವರು ಉಪಸ್ಥಿತರಿದ್ದರು. ಕಾರ್ಯಾಗಾರದಲ್ಲಿ ಎನ್ಇಪಿ ಪದವಿ ಹಿಂದಿಪಠ್ಯಕ್ರಮದ ಕುರಿತು ಸುದೀರ್ಘವಾಗಿ ಚರ್ಚಿಸಲಾಯಿತು. ವಿವಿಧ ಕಾಲೇಜುಗಳ ಶಿಕ್ಷಕರು ಪದವಿ ಮತ್ತು ಸ್ನಾತಕೋತ್ತರಪದವಿಗಳ ಅಧ್ಯಯನ ಸಾಮಗ್ರಿಗಳನ್ನು ಪ್ರಸ್ತುತಪಡಿಸಿದರು.
ನಿವೃತ್ತ ಹಿಂದಿ ಪ್ರಾಧ್ಯಾಪಕರಾದ ಡಾ.ವಿದ್ಯಾಕುಮಾರ್ (ಶ್ರೀಮಹಾವೀರಕಾಲೇಜು ಮೂಡುಬಿದಿರೆ), ನಂದಿನಿ (ಧವಳಕಾಲೇಜು ಮೂಡುಬಿದಿರೆ), ಜೂಡಿಪಿಂಟೋ (ಸೇಂಟ್ಅಲೋಶಿಯಸ್ ಕಾಲೇಜು, ಮಂಗಳೂರು), ಖುದ್ಸಿಯಾಬೇಗಂ (ಸೇಂಟ್ಅಲೋಶಿಯಸ್ ಕಾಲೇಜು ಮಂಗಳೂರು), ವಿಷ್ಣುಭಟ್ (ಸೇಂಟ್ಫಿಲೋಮಿನಾಕಾಲೇಜು), ಡಾ.ಮುರಳೀಧರನಾಯ್ಕ್ (ವಿಶ್ವವಿದ್ಯಾಲಯ ಕಾಲೇಜು, ಮಂಗಳೂರು), ನಿರ್ಮಲಾ ಶೆಣೈ (ಉಪೇಂದ್ರ ಮೆಮೋರಿಯಲ್ ಕಾಲೇಜು) ಮತ್ತು ಡಾ.ಶಾರದ ಎಂ (ಶಿರ್ವ) ಅವರನ್ನು ಈ ಸಂದರ್ಭದಲ್ಲಿ ಸನ್ಮಾನಿಸಲಾಯಿತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ