ಪುತ್ತೂರು: ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ಜೂನ್ 26 ರಂದು ವಿದ್ಯಾರ್ಥಿಗಳಿಗಾಗಿ ಭತ್ತದ ಕೃಷಿಯ ಬಗ್ಗೆ ಮಾಹಿತಿಯನ್ನು ನೀಡುವ ಕಾರ್ಯಕ್ರಮವನ್ನು ಹಮ್ಮಿಕೊಳ್ಳಲಾಗಿತ್ತು. ಶಾಲೆಯ ಆವರಣದಲ್ಲಿರುವ ಉಳುಮೆ ಮಾಡಿದ ಗದ್ದೆಯಲ್ಲಿ, ಬಿತ್ತನೆ ಕಾರ್ಯವನ್ನು ಮಾಡುವ ಮೂಲಕ ಪ್ರಗತಿಪರ ಕೃಷಿಕರಾದ ಸುದೇಶ್ ಅವರು ಚಾಲನೆಯನ್ನು ನೀಡಿದರು. ಜೊತೆಗೆ ಗದ್ದೆಯ ಉಳುಮೆ, ಬಿತ್ತನೆಯಿಂದ ತೊಡಗಿ ಕೊಯ್ಲಿನವರೆಗೆ ಪಾಲಿಸಬೇಕಾದ ನಿಯಮಗಳ ಬಗೆಗೆ, ವಿವಿಧ ಬೆಳೆ ಬೆಳೆಯುವ ಬಗೆಗೆ ಮಕ್ಕಳಿಗೆ ಮಾಹಿತಿಯನ್ನು ನೀಡಿದರು.
ಈ ಸಂದರ್ಭದಲ್ಲಿ ಶಾಲಾ ಸಂಚಾಲಕರಾದ ರೆ.ವಿಜಯ ಹಾರ್ವಿನ್ ರವರು ಪ್ರಗತಿಪರ ಕೃಷಿಕರಾದ ಶ್ರೀ ಸುದೇಶ್ ರವರನ್ನು ಸನ್ಮಾನಿಸಿದರು. 'ರೈತನು ದೇಶದ ಬೆನ್ನೆಲುಬು.ಆತನ ಶ್ರಮದಿಂದಾಗಿ ನಾವು ಆಹಾರವನ್ನು ಪಡೆಯುತ್ತಿದ್ದೇವೆ. ವಿದ್ಯಾರ್ಥಿಗಳು ಕೃಷಿಯ ಬಗ್ಗೆ ಆಸಕ್ತರಾಗಬೇಕು. ದೇಶದ ಅಭಿವೃದ್ಧಿಗೆ ಇದು ಸಹಕಾರಿ' ಎಂದು ಹಿತನುಡಿಗಳನ್ನಾಡಿದರು.
ಶಾಲಾ ಮುಖ್ಯಶಿಕ್ಷಕಿ ಶ್ರೀಮತಿ ಶೋಭಾನಾಗರಾಜ್, ಸಂಯೋಜಕಿ ಪ್ರತಿಮಾ ಎನ್ ಜಿ ಮತ್ತು ಶಿಕ್ಷಕರು ಉಪಸ್ಥಿತರಿದ್ದರು. ಸಹಶಿಕ್ಷಕಿ ಶ್ರೀಮತಿ ರಂಜಿತಾ ಕಾರ್ಯಕ್ರಮವನ್ನು ನಿರೂಪಿಸಿದರು. ಶಾಲೆಯ ವಿಜ್ಞಾನ ಸಂಘವಾದ 'ಅವನಿ' ಈ ಕಾರ್ಯಕ್ರಮವನ್ನು ಆಯೋಜಿಸಿತ್ತು.
ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್ ಆಗಿ
ಉಪಯುಕ್ತ ನ್ಯೂಸ್’ ಫೇಸ್‌ಬುಕ್ ಪುಟ ಲೈಕ್ ಮಾಡಿ