ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನಲ್ಲಿ ಸ್ವರಕ್ಷಣಾ ಕಾರ್ಯಾಗಾರ

Upayuktha
0

 


ಪುತ್ತೂರು: ಸಂತ ಫಿಲೋಮಿನಾ ಪದವಿ ಪೂರ್ವ ಕಾಲೇಜಿನ ಮಕ್ಕಳ ರಕ್ಷಣಾಘಟಕ ಹಾಗೂ ಮಹಿಳಾ ಸಬಲೀಕರಣ ಘಟಕದ ಆಶಯದಲ್ಲಿ ಕಾಲೇಜಿನ ವಿದ್ಯಾರ್ಥಿಗಳಿಗೆ ಸ್ವಯಂ ರಕ್ಷಣಾ ಕಾರ್ಯಾಗಾರ ಇಂದು (ಜೂ 28) ಕಾಲೇಜು ಸಭಾಂಗಣದಲ್ಲಿ ನಡೆಯಿತು.


ಸಂಪನ್ಮೂಲ ವ್ಯಕ್ತಿಗಳಾಗಿ ಸ್ವರಕ್ಷಾ ಫಾರ್‍ವಿಮೆನ್‍ ಟ್ರಸ್ಟ್ ಸ್ಥಾಪಕ ಕಾರ್ತಿಕ್‍ ಎಸ್‍ ಕಟೀಲು ಅವರು ಮಹಿಳೆಯರ ಮೇಲೆ ನಡೆಯುವ ದೈಹಿಕ ದೌರ್ಜನ್ಯದ ಬಗ್ಗೆ,ದೈನಂದಿನ ಜೀವನದಲ್ಲಿ ಅಸಹನೀಯ ಸ್ಪರ್ಶಗಳನ್ನು ವಿರೋಧಿಸುವ ಬಗ್ಗೆ ಸುಲಭ ಹಾಗೂ ಅಗತ್ಯದ ಐದು ತಂತ್ರಗಳನ್ನು ತಿಳಿಸಿದರು. ತಮ್ಮ ಮಾತೃಶ್ರೀ ಶೋಭಲತಾ ಅವರ ನೇತೃತ್ವದಲ್ಲಿ ಸ್ವರಕ್ಷಣೆಯ ತಂತ್ರಗಳನ್ನು ಪ್ರದರ್ಶಿಸಿ ವಿದ್ಯಾರ್ಥಿಗಳಿಗೆ ಮನಮುಟ್ಟುವಂತೆ ತೋರಿಸಿಕೊಟ್ಟರು. ಮಾನಸಿಕ ದೌರ್ಜನ್ಯವು ದೈಹಿಕ ದೌರ್ಜನ್ಯಕ್ಕಿಂತ ತೀವ್ರವಾಗಿದ್ದು ಇದನ್ನು ತಡೆಯುವಲ್ಲಿ ವಿದ್ಯಾರ್ಥಿಗಳು ಮಾನಸಿಕವಾಗಿ ಸದಾ ಸಿದ್ದರಾಗಿರಬೇಕು. ಇಂದಿನ ದಿನಗಳಲ್ಲಿ ವಿದ್ಯಾರ್ಥಿನಿಯರು ತಮ್ಮನ್ನು ಶಾಂತಿ ಧೈರ್ಯ ಮತ್ತು ಆತ್ಮ ವಿಶ್ವಾಸದಿಂದ ಸ್ವರಕ್ಷಣೆ ಮಾಡಿಕೊಳ್ಳಬೇಕು ಎಂದು ಹೇಳಿದರು. 


ಮುಖ್ಯ ಅತಿಥಿಗಳಾದ ಸಂತಫಿಲೋಮಿನಾ ಸಮೂಹ ಶಿಕ್ಷಣ ಸಂಸ್ಥೆಗಳ ಕ್ಯಾಂಪಸ್ ನಿರ್ದೇಶಕರಾದರೆ.ಫಾ ಸ್ಟ್ಯಾನಿ ಪಿಂಟೋ ಮಾತನಾಡಿ ಹೆಚ್ಚಿನ ಮನುಷ್ಯರೆಲ್ಲರೂ ಭಯದ ವಾತಾವರಣದಲ್ಲಿ ಬದುಕುತ್ತಾರೆ ಈ ಭಯವನ್ನು ಹೋಗಲಾಡಿಸುವ ಕ್ರಮಗಳನ್ನು ವಿದ್ಯಾರ್ಥಿಗಳು ತಮ್ಮ ಬದುಕಿನಲ್ಲಿ ಅಳವಡಿಸಿಕೊಳ್ಳುವುದು ಅನಿವಾರ್ಯವಾಗಿದೆ ವಿದ್ಯಾರ್ಥಿಗಳು ಮಾನಸಿಕವಾಗಿ ದೈಹಿಕವಾಗಿ ಸದೃಢರಾಗಬೇಕುಎಂದು ಹೇಳಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ಕಾಲೇಜಿನ ಪ್ರಾಂಶುಪಾಲ ರೆ.ಫಾ. ಅಶೋಕ್‍ರಾಯನ್‍ ಕ್ರಾಸ್ತಾ ಮಾತನಾಡಿ ಪ್ರಸ್ತುತ ದಿನಗಳಲ್ಲಿ ಸ್ವಯಂರಕ್ಷಣೆ ಕಾರ್ಯಾಗಾರದ ಅನಿವಾರ್ಯತೆ ಇದ್ದು ವಿದ್ಯಾರ್ಥಿಗಳು ಇದರ ಪ್ರಯೋಜನ ಪಡೆದುಕೊಳ್ಳಬೇಕೆಂದು ಹೇಳಿದರು.

ಮಹಿಳಾ ಸಬಲೀಕರಣಘಟಕ ಹಾಗೂ ಮಕ್ಕಳ ರಕ್ಷಣಾಘಟಕದ ನಿದೇರ್ಶಕರು, ವಿದ್ಯಾರ್ಥಿಗಳು ಬೋಧಕ ಹಾಗೂ ಬೋಧಕೇತರ ಸಿಬ್ಬಂದಿಗಳು ಉಪಸ್ಥಿತರಿದ್ದರು.


ಪ್ರದರ್ಶನ ಕಲಾ ಸಂಘದ ವಿದ್ಯಾರ್ಥಿಗಳು ಪ್ರಾರ್ಥಿಸಿ, ವಿದ್ಯಾರ್ಥಿನಿಯರಾದ ನಿಖಿತಾ ಸ್ವಾಗತಿಸಿ ಶರನ್ ವಂದಿಸಿರೋಶೆಲ್ ಡಿ ಸಿಲ್ವಾ ಕಾರ್ಯಕ್ರಮವನ್ನು ನಿರೂಪಿಸಿದರು.

ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter 

Post a Comment

0 Comments
Post a Comment (0)
Mandovi Motors Presents MONSOON BONANZA
Mandovi Motors Presents MONSOON BONANZA
To Top