ಇನ್ನರ್‌ವೀಲ್ ಕ್ಲಬ್ ಅಧ್ಯಕ್ಷರಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿ ಶ್ರೀದೇವಿ ರೈ ಆಯ್ಕೆ

Upayuktha
0


ಪುತ್ತೂರು: ಪುತ್ತೂರು ಇನ್ನರ್‌ವೀಲ್ ಕ್ಲಬ್‍ನ ನೂತನ ಪದಾಧಿಕಾರಿಗಳ ಆಯ್ಕೆ ನಡೆದಿದ್ದು, ಅಧ್ಯಕ್ಷೆಯಾಗಿ ಅಶ್ವಿನಿಕೃಷ್ಣ ಮುಳಿಯ, ಕಾರ್ಯದರ್ಶಿಯಾಗಿ ಶ್ರೀದೇವಿ ರೈ, ಕೋಶಾಧಿಕಾರಿಯಾಗಿ ಸೀಮಾ ನಾಗರಾಜ್   ಅವರು ಆಯ್ಕೆಗೊಂಡಿದ್ದಾರೆ. ನೂತನ ಪದಾಧಿಕಾರಿಗಳ ಪದಗ್ರಹಣ ಸಮಾರಂಭ ಜೂನ್ 15ರಂದು ಬೆಳಗ್ಗೆ 11ರಿಂದ ರೋಟರಿ ಮನೀಷಾ ಹಾಲ್‍ನಲ್ಲಿ ನಡೆಯಲಿದೆ. ಪದಗ್ರಹಣವನ್ನು ಜಿಲ್ಲಾ ISO ಶ್ರೀಮತಿ ರಜನಿ ಭಟ್ ಇವರು ನಡೆಸಿಕೊಡಲಿದ್ದಾರೆ.


ಕ್ಲಬ್‍ನ ಸಂಪಾದಕಿಯಾಗಿ ಶ್ರೀಮತಿ ಸುಧಾ ಕಾರ್ಯಪ್ಪ, ISO ಆಗಿ ಶ್ರೀಮತಿ ಆಶಾ ನಾಯಕ್, ವೆಬ್ ಕೋ-ಆರ್ಡಿನೇಟರ್ ಆಗಿ ಶ್ರೀಮತಿ ವಚನಾ ಜಯರಾಮ್ ಇವರು ಆಯ್ಕೆಯಾಗಿರುತ್ತಾರೆ.


ನಿಕಟಪೂರ್ವ ಅಧ್ಯಕ್ಷೆಯಾಗಿ ಟೈನಿ ದೀಪಕ್, ಉಪಾಧ್ಯಕ್ಷೆಯಾಗಿ ರಾಜೇಶ್ವರಿ ಆಚಾರ್ ಹಾಗೂ ನಿರ್ದೇಶಕರುಗಳಾಗಿ ಶ್ರೀಮತಿ ರಾಜೇಶ್ವರಿ ಬಲರಾಮ್, ಶ್ರೀಮತಿ ರಮಾ ಪ್ರಭಾಕರ್, ಶ್ರೀಮತಿ ಪುಷ್ಪಾ ಕೆದಿಲಾಯ, ಶ್ರೀಮತಿ ವೈ. ವಿಜಯಲಕ್ಷ್ಮಿ ಶೆಣೈ ಮತ್ತು ಶ್ರೀಮತಿ ವೀಣಾ ಬಿ.ಕೆ ಇವರು ಆಯ್ಕೆಯಾಗಿರುತ್ತಾರೆ. 


“ಶೈನ್ ಎ ಲೈಟ್” ಎನ್ನುವುದು ಇನ್ನರ್‌ವೀಲ್ ಕ್ಲಬ್‍ನ ಈ ವರ್ಷದ ಧ್ಯೇಯ ವಾಕ್ಯ. ಆರೋಗ್ಯ, ಸ್ವಚ್ಛತೆ, ಕಡಿಮೆ ಪೇಪರ್ ಬಳಕೆ, ಮಹಿಳಾ ಸಬಲೀಕರಣ, ಪರಿಸರ ಕಾಳಜಿ, ಬಡ ಮಕ್ಕಳ ವಿಧ್ಯಾಭ್ಯಾಸಕ್ಕೆ ನೆರವು  ಹೀಗೆ ಹಲವಾರು ಯೋಜನೆಗಳು  ಈ ಧ್ಯೇಯ ವಾಕ್ಯದಡಿ ಬರುತ್ತದೆ. ಕ್ಲಬ್‍ನ ಎಲ್ಲಾ ಸದಸ್ಯರುಗಳು ಇದಕ್ಕೆ ಪೂರಕವಾದ ಚಟುವಟಿಕೆಗಳನ್ನು ಮಾಡಲಿದ್ದಾರೆ ಎಂದು ನಿಯೋಜಿತ ಅಧ್ಯಕ್ಷೆ ಅಶ್ವಿನಿಕೃಷ್ಣ ಮುಳಿಯ ಇವರು ತಿಳಿಸಿದ್ದಾರೆ.


ನಿರಂತರ ಅಪ್‌ಡೇಟ್‌ಗಳಿಗಾಗಿ ಉಪಯುಕ್ತ ನ್ಯೂಸ್‌ ಟೆಲಿಗ್ರಾಂ ಚಾನೆಲ್‌ಗೆ ಜಾಯಿನ್‌ ಆಗಿ

ಉಪಯುಕ್ತ ನ್ಯೂಸ್‌’ ಫೇಸ್‌ಬುಕ್ ಪುಟ ಲೈಕ್ ಮಾಡಿ

ಉಪಯುಕ್ತ ನ್ಯೂಸ್‌ ವಾಟ್ಸಪ್‌ ಗ್ರೂಪಿಗೆ ಸೇರಲು ಈ ಲಿಂಕ್ ಕ್ಲಿಕ್ ಮಾಡಿ

web counter

Post a Comment

0 Comments
Post a Comment (0)
To Top